26.8 C
Bangalore
Friday, December 13, 2019

ಬಣ್ಣ ಹಚ್ಚುವ ಮುನ್ನ…

Latest News

ಶಬರಿಮಲೆ ವಿಚಾರದಲ್ಲಿ ಸದ್ಯ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಪೊಲೀಸ್​ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ...

ತುಮಕೂರು ಸ್ಮಾರ್ಟ್‌ಸಿಟಿ ಜೆಎಂಡಿ ಎತ್ತಂಗಡಿ!

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಅವರನ್ನು ಎತ್ತಂಗಡಿ ಮಾಡಲಾಗಿದೆ. 3 ತಿಂಗಳ ಹಿಂದೇ ಸ್ಮಾರ್ಟ್‌ಸಿಟಿ ಎಂಡಿ ಜವಾಬ್ದಾರಿ ಹೊಣೆ ಹೊತ್ತಿದ್ದ ಮಹಾನಗರ...

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

ತಲೆಕೂದಲನ್ನು ನೇರವಾಗಿಸಿಕೊಳ್ಳುವ ‘ಹೇರ್ ಸ್ಟ್ರೈಟನಿಂಗ್’ನ ಅಡ್ಡ ಪರಿಣಾಮದಿಂದ ಖಿನ್ನತೆಗೆ ಒಳಗಾಗಿದ್ದ ಹುಡುಗಿಯೊಬ್ಬಳು ಜೀವವನ್ನೇ ಕಳೆದುಕೊಂಡ ಘಟನೆ ಇತ್ತೀಚೆಗೆ ಎಲ್ಲರ ಗಮನ ಸೆಳೆದಿತ್ತು. ಅಷ್ಟೇ ಅಲ್ಲ, ಶಾಲೆಗೆ ಹೊರಟಾಗ ಅಮ್ಮ ತಲೆಗೆ ಎಣ್ಣೆ ಹಚ್ಚಿದಳೆಂದು ಮುಂಬೈನ ಥಾಣೆಯಲ್ಲಿ 13 ವರ್ಷದ ಹುಡುಗಿಯೊಬ್ಬಳು ಮಹಡಿಯಿಂದ ಹಾರಿ ಜೀ ವ ಕಳೆದುಕೊಂಡಿದ್ದಾಳೆ. ಇವು ಬೆಳಕಿಗೆ ಬಂದ ಕೆಲವು ಸುದ್ದಿಗಳಷ್ಟೆ. ಬಾಹ್ಯ ಸೌಂದರ್ಯಕ್ಕೆ ಅತಿಯಾದ ಪ್ರಾಮುಖ್ಯತೆ ನೀಡುತ್ತಿರುವ ಪರಿಣಾಮಗಳಿವು. ಈ ಮನಸ್ಥಿತಿಯೇ ಇಂದಿನ ಹೆಣ್ಣುಮಕ್ಕಳನ್ನು ಅಸಹಜವಾಗಿ ರೂಪಿಸುತ್ತಿದೆ ಎನ್ನುವುದು ಕಠೋರ ವಾಸ್ತವ.

| ಸುಮನಾ ಲಕ್ಷ್ಮೀಶ ಬೆಂಗಳೂರು

‘ಇನ್ಮೇಲೆ ನಾನು ತುಪ್ಪ ತಿನ್ನಲ್ಲ. ಎಲ್ರೂ ನನ್ನನ್ನು ಡುಮ್ಮಿ ಅಂತ ರೇಗಿಸ್ತಾ ಇದಾರೆ. ಇನ್ನಾದ್ರೂ ಒತ್ತಾಯ ಮಾಡಿ ತಿನ್ನಿಸೋದನ್ನು ಬಿಟ್ಟುಬಿಡು ಪ್ಲೀಸ್. ನಂಗೆ ದಪ್ಪ ಆಗೋದು ಇಷ್ಟವಿಲ್ಲ..’ ಎಂದು ಮಗಳು ಏರುದನಿಯಲ್ಲಿ ಕೂಗುತ್ತ, ಸಿಡುಕುತ್ತ ಇದ್ದರೆ ಗಾಬರಿಯಾಗುವ ಸರದಿ ಅಮ್ಮನದ್ದು. ಏಕೆಂದರೆ, ಆ ಮಗಳಿನ್ನೂ ಹೈಸ್ಕೂಲ್ ಮೆಟ್ಟಿಲು ಕೂಡ ಹತ್ತಿಲ್ಲ. ಆಗಲೇ ಈ ಬ್ಯೂಟಿ ಕಾನ್ಷಿಯಸ್​ನೆಸ್ ಎಲ್ಲಿಂದ ಬಂತು?

ಪಿಯುಸಿ ಓದಲು ಆಗಷ್ಟೇ ನಗರದ ಕಾಲೇಜಿಗೆ ಕಾಲಿಟ್ಟ ಆಕೆ ನೋಡುನೋಡುತ್ತಿರುವಂತೆಯೇ ಬದಲಾದ ಪರಿಗೆ ಎಲ್ಲರೂ ಬೆರಗಾಗಿದ್ದರು. ಅಮ್ಮ-ಅಪ್ಪನಿಗೆ ಹೆಮ್ಮೆ! ಮಗಳು ದೊಡ್ಡ ನಗರದ ಪ್ರತಿಷ್ಠಿತ ಕಾಲೇಜಿಗೆ ಹೋಗುತ್ತಿದ್ದಾಳೆ ಎಂದು ಕೇಳಿದಷ್ಟು ದುಡ್ಡು ಸುರಿದರು. ಒಂದು ದಿನ ಆಕೆಯ ಸ್ನೇಹಿತೆಯರಿಬ್ಬರಿಂದ ಬಂದ ಫೋನ್ ಕರೆ ಪಾಲಕರನ್ನು ನಡುಗಿಸಿತ್ತು. ಮುಖಕ್ಕೆ ಬ್ಲೀಚ್ ಮಾಡಿಸಿಕೊಂಡಿದ್ದೇ ಆಕೆಯ ಚರ್ಮದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಮುಖದ ಚರ್ಮ ಸುಲಭದಲ್ಲಿ ಸರಿಯಾಗದಷ್ಟು ಸುಟ್ಟು ಹೋಗಿತ್ತು.

ಬ್ಲೀಚಿಂಗ್, ಫೇಷಿಯಲ್, ಹೇರ್ ಕಲರಿಂಗ್, ಲೇಸರ್ ಚಿಕಿತ್ಸೆ… ಇಂಥ ಅನೇಕ ಸೌಂದರ್ಯಪದ್ಧತಿಗಳು ಹರೆಯದ ಹುಡುಗಿಯರ ಆರೋಗ್ಯಕ್ಕೆ ಮಾರಕವಾಗಿ ಕಾಡುತ್ತಿವೆ. ಮಾರುಮಾರಿಗೆ ಹುಟ್ಟಿಕೊಂಡಿರುವ ಪಾರ್ಲರ್​ಗಳು ಆಧುನಿಕ ಕಾಲದ ಹುಡುಗಿಯರ ಸೌಂದರ್ಯೋಪಾಸನೆಯ ಪ್ರತೀಕದಂತಿವೆ. ಆರೋಗ್ಯವನ್ನು ಅಪಾಯಕ್ಕೊಡ್ಡಿಯಾದರೂ ಸರಿ, ಕೃತಕವಾಗಿಯಾದರೂ ಸರಿ, ಸಮಾಜ ಯಾವುದನ್ನು ಸೌಂದರ್ಯ ಎಂದು ಒಪ್ಪಿಕೊಂಡಿದೆಯೋ ಅದನ್ನು ಪಡೆಯಲು ಅತಿಯಾದ ಆತುರದಿಂದ ಹುಡುಗಿಯರು ಮುನ್ನುಗ್ಗು ತ್ತಿದ್ದಾರೆ. ಅಷ್ಟಕ್ಕೂ ನಮ್ಮ ಹುಡುಗಿಯರಿಗೆ ಯಾಕೆ ಈ ಸ್ಥಿತಿ ಬಂತು? ಇಂಥ ಮನಸ್ಥಿತಿ ಹುಟ್ಟಿಕೊಂಡಿದ್ದಾದರೂ ಎಲ್ಲಿಂದ?

ಅಪಾಯಕಾರಿ ಬ್ಯೂಟಿ ಕಾನ್ಷಿಯಸ್​ನೆಸ್

ಸೌಂದರ್ಯವೆಂದರೆ, ನಯವಾದ, ಹೊಳಪಿನ ಬಿಳಿ ಚರ್ಮ ಹಾಗೂ ಅದು ಮಾತ್ರ ಎನ್ನುವ ಭಾವನೆ ಮೂಡುವಂಥ ವಾತಾವರಣ ಸಮಾಜದ ಎಲ್ಲೆಡೆ ಇದೆ. ಹುಡುಗಿಯೊಬ್ಬಳು ಕಪ್ಪಿದ್ದರೆ ‘ಕರಿ ಹುಡುಗಿ’ ಎಂದು ರೇಗಿಸುವುದು, ಬಣ್ಣದ ಕಾರಣದಿಂದ ತಾರತಮ್ಯ ಮಾಡುವುದು, ಕಪ್ಪಿದ್ದರೆ, ಕುಳ್ಳಗಿದ್ದರೆ, ದಪ್ಪವಾಗಿದ್ದರೆ ಬದುಕಿನಲ್ಲಿ ಯಶಸ್ಸು ಸಾಧ್ಯವಿಲ್ಲ ಎನ್ನುವಂತೆ ಬಿಂಬಿಸುವುದು..ಎಲ್ಲ ತಪ್ಪುಗಳೂ ಆಗಿದ್ದು ಸಮಾಜದಿಂದ. ಇದರಲ್ಲಿ ಸಿನಿಮಾ ಪಾತ್ರ ಗಣನೀಯ. ಇಲ್ಲಿ, ತೆಳ್ಳಗೆ, ಬೆಳ್ಳಗಿರುವ ಹುಡುಗಿಯರು ಮಾತ್ರವೇ ನಾಯಕಿಯರಾಗಿ, ಉಳಿದವರು ಹಾಸ್ಯಾಸ್ಪದ ವಸ್ತುವಾಗುತ್ತಾರೆ. ಮಹಿಳೆಯೊಬ್ಬಳು ಆತ್ಮವಿಶ್ವಾಸದಿಂದ ಕೂಡಿರಲು ಮುಖ ಹಾಗೂ ಕೈಕಾಲುಗಳ ಮೇಲೆ ಕೂದಲು ಇರಬಾರದು, ಇದ್ದರೂ ಅದನ್ನು ನಿವಾರಿಸಿಕೊಳ್ಳಬೇಕು, ಆಗಲೇ ಯಶಸ್ಸು ಸಾಧ್ಯ ಎನ್ನುವ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲಾಗಿದೆ. ಮೊದಲೇ ‘ಐಡೆಂಟಿಟಿ ಕ್ರೖೆಸಿಸ್’(ಗುರುತಿಸಿಕೊಳ್ಳಬೇಕೆಂಬ ಹಂಬಲ)ನಿಂದ ಕೂಡಿರುವ ಯುವ ಸಮುದಾಯವನ್ನು ಇಂಥವು ಅಪಾರವಾಗಿ ಸೆಳೆಯುತ್ತಿವೆ. ಎಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಬೇಕೆಂದು, ಎಲ್ಲರ ನಡುವೆ ಅತ್ಯಾಕರ್ಷಕವಾಗಿರಬೇಕೆಂದು ಸುಲಭವಾಗಿ ಕೈಗೆಟಕುವ ವಿಧಾನಗಳ ಮೊರೆ ಹೋಗುತ್ತಿದ್ದಾರೆ.

ಸೌಂದರ್ಯಕ್ಕಾಗಿ ಬಹುವಿಧ ವೇಷಂ!

ಒಂದು ವಯಸ್ಸಿಗೆ ಬರುತ್ತಿರುವಂತೆ ಹುಡುಗಿಯರು ಕನ್ನಡಿಯ ಮುಂದೆ ನಿಂತುಕೊಳ್ಳುವುದು, ಹುಡುಗರು ಚಿತ್ರವಿಚಿತ್ರ ಸ್ಟೈಲ್ ಮಾಡಲು ಆರಂಭಿಸುವುದು ಸಹಜ. ಆದರೆ, ಈಗ ಆ ವಯಸ್ಸು ಸ್ವಲ್ಪ ಬೇಗ ಬರುತ್ತಿದೆ ಎನ್ನುವುದು ಯೋಚಿಸಬೇಕಾದ ವಿಚಾರ. ಅವರನ್ನು ಮರುಳು ಮಾಡಲು ಇಂದು ನೂರಾರು ಆಕರ್ಷಣೆಗಳಿವೆ. ಈ ಆಕರ್ಷಣೆಯ ವರ್ತಲದಿಂದ ಅವರನ್ನು ಬಿಡಿಸುವುದು ಸುಲಭವಲ್ಲ. ಪಾಲಕರೆದುರು ವಿಧೇಯರಾಗಿ ವರ್ತಿಸುವ ಮಕ್ಕಳು ಸಹಪಾಠಿಗಳೊಂದಿಗಿದ್ದಾಗ ‘ನಾವೂ ಯಾರಿಗಿಂತ ಕಡಿಮೆಯಲ್ಲ’ ಎಂದು ತೋರಿಸಿಕೊಳ್ಳುವ ಒತ್ತಡಕ್ಕೆ ಗುರಿಯಾಗುತ್ತಾರೆ. ದೂರದ ಊರುಗಳಿಂದ ಬಂದು ಹಾಸ್ಟೆಲ್​ಗಳಲ್ಲಿ ತಂಗಿರುವ ಕಾಲೇಜು ಹುಡುಗಿಯರಿಗೆ ಪಾಲಕರಿಂದ ಅಗತ್ಯ ಇರುವಷ್ಟೇ ಹಣ ದೊರೆಯವುದು ಸಾಮಾನ್ಯ. ಇಂಥ ಸಮಯದಲ್ಲಿ ಪಾರ್ಲರ್​ಗಳಿಗೆ ಸುರಿಯಲು ಸಾವಿರಾರು ರೂಪಾಯಿ ಎಲ್ಲಿಂದ ದೊರೆಯಲು ಸಾಧ್ಯ? ಹೀಗಾಗಿಯೇ, ಶ್ರೀಮಂತ ಸಹಪಾಠಿಗಳ ಸ್ನೇಹ ಮಾಡುತ್ತಾರೆ, ವ್ಯವಸ್ಥಿತ ವೇಶ್ಯಾವಾಟಿಕೆಗೂ ಬಲಿಯಾಗುತ್ತಾರೆ.

ಪಾಲಕರ ಪಾತ್ರ ಅಧಿಕ

‘ಏನು ಮಾಡುವುದು? ಇಂದಿನ ವಾತಾವರಣವೇ ಹಾಗಿದೆ’ ಎಂದು ಪಾಲಕರು ಅತ್ಯಂತ ಸುಲಭವಾಗಿ ತಮ್ಮಿಂದ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಮುಚ್ಚಿಕೊಳ್ಳುವ ಪ್ರವೃತ್ತಿ ಎಲ್ಲೆಡೆ ಕಾಣುತ್ತದೆ. ಬಾಹ್ಯ ವಾತಾವರಣ ಹೇಗೇ ಇರಬಹುದು, ಅದರಿಂದ ನಮ್ಮ ಮಕ್ಕಳನ್ನು ಬಚಾವು ಮಾಡಿಕೊಳ್ಳಬೇಕಾದುದು ನಾವೇ. ‘ನಾವಂತೂ ಕಷ್ಟಪಟ್ಟಿದ್ದೇವೆ, ಮಕ್ಕಳಾದರೂ ಸುಖ, ಖುಷಿ ಕಾಣಲಿ’ ಎಂದು ಪಾಲಕರು ನೀಡುವ ವಿವಿಧ ಸವಲತ್ತುಗಳು ಅವರನ್ನು ದಿಕ್ಕು ತಪ್ಪಿಸುತ್ತಿವೆ. ಹೈಸ್ಕೂಲ್​ಗೆ ಕಾಲಿಡುತ್ತಿರುವ ಹಾಗೆ ಅವರ ಕೈಗೆ ಮೊಬೈಲ್ ನೀಡುವ, ಹುಟ್ಟಿನಿಂದಲೇ ಪ್ರತಿಬಾರಿಯ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್ ನೀಡುವ ಪಾಲಕರು ‘ಖುಷಿ ಎಂದರೆ, ಸುಖವೆಂದರೆ ವಸ್ತುಗಳಲ್ಲಿ ಮಾತ್ರ ಕಾಣಲು ಸಾಧ್ಯ’ ಎನ್ನುವ ಪರಿಕಲ್ಪನೆಯನ್ನು ಮಕ್ಕಳಲ್ಲಿ ಹುಟ್ಟುಹಾಕುತ್ತಿದ್ದಾರೆ. ಯಾವುದೇ ಕಾರ್ಯಕ್ರಮ, ರಿಯಾಲಿಟಿ ಶೋ, ವಿವಿಧ ಸ್ಪರ್ಧೆಗಳು, ಅಷ್ಟೇ ಏಕೆ? ಶಾಲೆ ಕಾಲೇಜುಗಳಲ್ಲೂ ಆಡಂಬರವೇ ತುಂಬಿ ತುಳುಕುತ್ತಿರುವ ಈ ದಿನಗಳಲ್ಲಿ ನಿಜವಾದ ಸೌಂದರ್ಯವೆಂದರೆ ಏನು ಎನ್ನುವ ಅರಿವನ್ನು ಮಕ್ಕಳಲ್ಲಿ ಮೂಡಿಸಲು ಪ್ರಯತ್ನಿಸುವವರು ಯಾರು? ಇಲ್ಲಿ ಪಾಲಕರ ಪಾತ್ರವೇ ಮುಖ್ಯವಾಗುತ್ತದೆ.

ಆಕರ್ಷಣೆಗಳ ವರ್ತುಲ…

ಮಕ್ಕಳು ನೋಡುವುದರಿಂದ ಬಹುಬೇಗ ಆಕರ್ಷಿತರಾಗುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಹೀಗಿದ್ದಾಗ್ಯೂ ಅವರಿಗೆ ಕೆಟ್ಟ ಸಂದೇಶ ಇರುವ ಸಿನಿಮಾ, ಧಾರಾವಾಹಿ, ಜಾಹೀರಾತು, ಹಾಸ್ಯವೆಂದು ಹೇಳಿಕೊಳ್ಳುವ ಡಬ್ಬಲ್ ಮೀನಿಂಗ್ ಸಂಭಾಷಣೆಗಳನ್ನು ಕೇಳಿಸುತ್ತಲೇ, ನೋಡಿಸುತ್ತಲೇ ಇರುತ್ತೇವೆ. ಇವೆಲ್ಲ ಅವರ ಮೇಲೆ ಅತಿಯಾದ ಪರಿಣಾಮ ಬೀರುತ್ತಿವೆ. ಮಕ್ಕಳು ಕಾರ್ಟೂನ್ ನೋಡುತ್ತಿದ್ದಾರೆ ಎಂದು ನಾವು ಸಮಾಧಾನಪಟ್ಟುಕೊಳ್ಳುವಂತಿಲ್ಲ. ಅವುಗಳ ಮಧ್ಯೆ ಬರುವ ಜಾಹೀರಾತುಗಳೇ ಅವರಲ್ಲಿ ಅಸಹಜ ಭಾವನೆಗಳನ್ನು ಬಿತ್ತಲು ಸಾಕು. ಮೂರನೇ ಕ್ಲಾಸಿನ ಬಾಲಕನೊಬ್ಬ ‘ನಾನೂ ಸೆಂಟ್ ಹಾಕಿಕೊಂಡರೆ ನನ್ನ ಬಳಿಯೂ ಹುಡುಗಿಯೊಬ್ಬಳು ಹಾಗೆಯೇ ಬಂದು ಹಿಡಿದುಕೊಳ್ತಾಳಾ’ ಎಂದು ಅಮ್ಮನ ಬಳಿ ಪ್ರಶ್ನೆ ಹಾಕುತ್ತಾನೆ ಎಂದರೆ ಅವುಗಳ ಪ್ರಭಾವದ ತೀವ್ರತೆಯನ್ನು ಗುರುತಿಸಬಹುದು.

ಸ್ಪಾಟ್​ಲೈಟ್ ಸಿಂಡ್ರೋಮ್

‘ಎಲ್ಲರೂ ನಮ್ಮನ್ನು ಒಂದಲ್ಲ ಒಂದು ರೀತಿ ಗಮನಿಸುತ್ತಿದ್ದಾರೆ, ಡ್ರೆಸ್ ಹೇಗಿದೆ, ಹೇಗೆ ಮಾತನಾಡುತ್ತೇವೆ ಎಂದೆಲ್ಲ ನೋಡುತ್ತಿದ್ದಾರೆ ಎನ್ನುವ ಭಾವನೆ ಹರೆಯದವರಲ್ಲಿ ಹೆಚ್ಚು. ಆಗ ಇಡೀ ದೇಹ ಹಾಗೂ ದೇಹಭಾಷೆಯ ಕಡೆಗೆ ಆದ್ಯತೆ ಇರುತ್ತದೆ. ಎಲ್ಲೇ ಹೋದರೂ ಇದೇ ಭಾವನೆ ಮುಂದುವರಿದು ಬಾಹ್ಯ ಸ್ವರೂಪವೇ ಮುಖ್ಯವಾಗುತ್ತದೆ. ಇದನ್ನು ಸ್ಪಾಟ್​ಲೈಟ್ ಸಿಂಡ್ರೋಮ್ ಎನ್ನುತ್ತಾರೆ. ಇದು ಎಲ್ಲರಲ್ಲೂ ಸಹಜ. ಆದರೆ, ಎಲ್ಲರೂ ನನ್ನನ್ನು ಮೆಚ್ಚಿಕೊಳ್ಳಬೇಕು, ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎನ್ನುವ ತುಡಿತ ಆರಂಭವಾದರೆ ಅದು ಅತಿರೇಕ. ಅಂಥ ಸಮಯದಲ್ಲಿ ತಮ್ಮಲ್ಲಿರುವ ನೈಜ ಶಕ್ತಿಯನ್ನು ಉದ್ದೀಪಿಸಿ, ಅದರ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು. ಆಗ ಇಂಥ ಭ್ರಮೆಗಳು ಕಳಚಿಕೊಳ್ಳುತ್ತವೆ. ಆದರೆ, ಇಂದಿನ ಯುವಮಂದಿಗೆ ಪ್ರೇರಣೆಗಳು ಕಡಿಮೆ. ನಮ್ಮ ಸುತ್ತಲ ಪ್ರಪಂಚವನ್ನು ಗಮನಿಸಿದರೂ ಸಾಕು, ಎಷ್ಟೋ ಪ್ರೇರಣಾದಾಯಕ ವ್ಯಕ್ತಿತ್ವದವರು ಸಿಗುತ್ತಾರೆ. ಇಂದಿನ ಸಿನಿಮಾ, ಜಾಹೀರಾತು, ಧಾರಾವಾಹಿಗಳು ಸಹಜವಾಗಿ ಬೆಳೆಯಬೇಕಾದ ಮಕ್ಕಳಲ್ಲಿ ಅಸಹಜ ಭಾವನೆಗಳನ್ನು ಬಿತ್ತುತ್ತಿವೆ ಎನ್ನುವುದನ್ನು ನೋವಿನಿಂದಲೇ ಹೇಳಬೇಕಾಗುತ್ತದೆ. ಅವು ಸುಳ್ಳು ಭ್ರಮೆಗಳನ್ನು ಹುಟ್ಟಿಸುತ್ತಿವೆ. ಈ ಸಮಯದಲ್ಲಿ ಪಾಲಕರು, ಶಿಕ್ಷಕರು ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅದರೆಡೆಗೆ ಅವರು ಗಮನ ನೀಡುವಂತೆ ಮಾಡಲು ಶ್ರಮವಹಿಸಬೇಕಾಗಿದೆ’ ಎನ್ನುತ್ತಾರೆ ಆಪ್ತಸಮಾಲೋಚಕಿ ಶಾಂತಾ ನಾಗರಾಜ್.

ಪಾರ್ಲರ್​ಗಳಲ್ಲಿ ಕರಾಳಲೋಕ

ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಕಂಪನಿ ಅಥವಾ ಪ್ರತಿನಿಧಿಗಳೊಂದಿಗೆ ಬಹಳಷ್ಟು ಪಾರ್ಲರ್​ಗಳು ಹೊಂದಾಣಿಕೆ ಮಾಡಿಕೊಂಡಿರುತ್ತವೆ. ತಿಂಗಳಿಗೆ ಇಷ್ಟು ಹೇರ್ ಸ್ಟ್ರೈಟನಿಂಗ್, ಕಲರಿಂಗ್ ಮಾಡಿಸಿಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಳ್ಳುವ ಪಾರ್ಲರ್​ಗಳೂ ಇವೆ! ‘ಒಂದು ಬಿಳಿಕೂದಲು ಕಾಣಿಸಿಕೊಂಡಿದೆ’ ಎಂದು ಹುಡುಗಿಯರು ಆತಂಕ ತೋಡಿಕೊಂಡರೆ ಅವರ ಹಳ್ಳ ಅಲ್ಲಿಯೇ ಸಿದ್ಧವಾಯಿತು ಎಂದರ್ಥ. ಅತ್ಯಂತ ಸುಲಭವಾಗಿ ಕಲರಿಂಗ್ ಆಯ್ಕೆಯ ಬಗ್ಗೆ ಹೇಳಲಾಗುತ್ತದೆ. ಆದರೆ, ಹೇರ್ ಸ್ಟ್ರೈಟನಿಂಗ್ ಅಥವಾ ಕಲರಿಂಗ್ ಮಾಡಿಸಿಕೊಳ್ಳುತ್ತಿದ್ದರೆ ಎರಡು ವರ್ಷಗಳಲ್ಲಿ ಕಣ್ಣಿನ ತೊಂದರೆ ಬರುವುದು ಗ್ಯಾರಂಟಿ. ಏಕೆಂದರೆ, ಅದರಲ್ಲಿರುವ ಅಮೋನಿಯಾ ರೆಟಿನಾಗಳ ಮೇಲೆ ಪರಿಣಾಮ ಬೀರುತ್ತದೆ.

‘ಮುಖದ ಕೂದಲುಗಳ ನಿವಾರಣೆಗೆ ಲೇಸರ್ ಚಿಕಿತ್ಸೆ ಪಡೆಯುವುದು ಈಗ ಸಾಮಾನ್ಯ. ಇದನ್ನು ಡರ್ಮಟಾಲಜಿಸ್ಟ್​ಗಳ ಬಳಿಯೇ ಮಾಡಿಸಿಕೊಳ್ಳಬೇಕು. ಆದರೆ, ಕೇವಲ 18 ಸಾವಿರ ರೂ.ಗಳಿಗೆ ಲೇಸರ್ ಸಾಧನ ಸಿಗುತ್ತದೆ ಎಂದು ಎಲ್ಲ ಪಾರ್ಲರ್​ಗಳಲ್ಲೂ ಇಟ್ಟುಕೊಂಡಿರುತ್ತಾರೆ. ಈ ಚಿಕಿತ್ಸೆಯಲ್ಲಿ ಕೂದಲ ಬುಡ ನಾಶವಾಗಿರುವುದಿಲ್ಲ. ಹೀಗಾಗಿ, ಕೆಲ ಸಮಯದ ಬಳಿಕ ಮುಖದಲ್ಲಿ ಕಪ್ಪು ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇವುಗಳ ಬಗ್ಗೆ ಪಾರ್ಲರ್​ಗಳಲ್ಲಿ ಕೇಳಿದರೆ ಅದಕ್ಕೆ ಚಿಕಿತ್ಸೆ ಇಲ್ಲ ಎನ್ನುತ್ತಾರೆ. ವರ್ಷಕ್ಕೆ ಇಂಥ ನೂರಾರು ಪ್ರಕರಣಗಳು ನಮ್ಮಲ್ಲಿಗೆ ಬರುತ್ತವೆ. ಲೇಸರ್​ನಿಂದ ಮುಖದ ಚಿಕಿತ್ಸೆ ಪಡೆದಿರುವಾಗ ಅದನ್ನು ಗುಣಪಡಿಸುವುದು ಸುಲಭವಲ್ಲ. ಆದರೆ, 6-8 ತಿಂಗಳ ಕಾಲದ ನೈಸರ್ಗಿಕ ಚಿಕಿತ್ಸೆಯಿಂದ ಅಲ್ಪಮಟ್ಟಿಗೆ ಹೋಗಲಾಡಿಸಬಹುದು. ಇನ್ನು, ಹೇರ್ ಕಲರಿಂಗ್, ಸ್ಟ್ರೈಟನಿಂಗ್​ನಿಂದ ತಲೆಗೂದಲ ಬುಡ ಹಾನಿಗೀಡಾದ ಪ್ರಕರಣಗಳು ವಾರಕ್ಕೆ ಕನಿಷ್ಠ 2-3 ಬರುತ್ತಿವೆ. ಇಂಥ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ಬದಲಿಗೆ ಹುಡುಗಿಯರು ಸಹಜತೆಗೆ ಒತ್ತು ನೀಡಿದರೆ ಸಮಸ್ಯೆಯೇ ಇರುವುದಿಲ್ಲ’ ಎನ್ನುತ್ತಾರೆ ಬ್ಯೂಟಿ ಕನ್ಸಲ್ಟಂಟ್ ದೀಪಾ ನಾಗೇಶ್.

‘ಮುಖದ ಮೇಲಿನ ರಂಧ್ರಗಳ ನಿವಾರಣೆಗೂ ಈಗ ಕೆಮಿಕಲ್ ಕ್ಲೀನಿಂಗ್ ಎನ್ನುವ ಚಿಕಿತ್ಸೆ ಇದೆ. ಮೂರು ರೀತಿಯ ರಾಸಾಯನಿಕಗಳನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಬಳಸುತ್ತಾರೆ. ಇದು ಆಸಿಡ್​ಗಿಂತ ಸ್ಟ್ರಾಂಗ್ ಆದ ಮಿಶ್ರಣವಾಗುತ್ತದೆ. ಅತ್ಯಲ್ಪ ಪ್ರಮಾಣದಲ್ಲಿ ಬಳಸಿದರೂ ಚರ್ಮದ ಮೇಲಿನ ಪದರ ನಾಶವಾಗಿ ಕೆಂಪಗಾಗಿ ಬಿಡುತ್ತಾರೆ. ಬಿಸಿಲು, ಚಳಿ, ಸಣ್ಣ ಮೊಡವೆಯನ್ನೂ ತಡೆದುಕೊಳ್ಳುವ ಶಕ್ತಿ ಆ ಚರ್ಮಕ್ಕೆ ಇರುವುದಿಲ್ಲ. ಇಂಥವರು ಸಹ ವಾರಕ್ಕೆ ಕನಿಷ್ಠ ಮೂರು ಮಂದಿ ನಮ್ಮಲ್ಲಿಗೆ ಬರುತ್ತಾರೆ. ಇವೆಲ್ಲ ಅಪಾಯಕಾರಿ ಎನ್ನುವುದನ್ನು ಹುಡುಗಿಯರು ಮೊದಲು ಅರಿತುಕೊಳ್ಳಬೇಕು’ ಎನ್ನುವುದು ದೀಪಾ ನಾಗೇಶ್​ಅಭಿಪ್ರಾಯ.

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....