ಪೋರಿಯರಿಗೆ ಫ್ಲವರ್ ಹೇರ್​ಬ್ಯಾಂಡ್

ಹೇರ್​ಬ್ಯಾಂಡ್​ಗಳು ಮಕ್ಕಳ ಮುಖಕ್ಕೆ ಹೊಸದೇ ಆದ ಕಳೆ ನೀಡುತ್ತವೆ. ಇಂದು ವಿಧ ವಿಧವಾದ ಹೇರ್​ಬ್ಯಾಂಡ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಸಣ್ಣದಾದ ತಂತಿಯ ಹೇರ್​ಬ್ಯಾಂಡ್​ನಿಂದ ಹಿಡಿದು ಮುತ್ತು, ಕುಂದನ್​ನ ಹೇರ್​ಬ್ಯಾಂಡ್​ಗಳು ಟ್ರೆಂಡ್​ನಲ್ಲಿವೆ. ಇತ್ತೀಚೆಗೆ ಹೂವಿನ ಹೇರ್​ಬ್ಯಾಂಡ್ ಹೆಚ್ಚು ಚಾಲ್ತಿಯಲ್ಲಿದೆ. ಫಂಕ್ಷನ್ಸ್, ಫೋಟೋಶೂಟ್, ಡಾನ್ಸ್ ಮಾಡುವಾಗ ಹೂವಿನ ಹೇರ್​ಬ್ಯಾಂಡ್ ಬಳಸಲಾಗುತ್ತದೆ. ಅಚ್ಚರಿ ಎಂದರೆ ಕೃತಕ ಪ್ಲಾಸ್ಟಿಕ್ ಅಥವಾ ಇತರ ವಸ್ತುಗಳಿಂದ ಮಾಡಿರದ ಹೇರ್​ಬ್ಯಾಂಡ್ ಬಳಸದೆ, ಗುಲಾಬಿ, ಮಲ್ಲಿಗೆ, ಸೂರ್ಯಕಾಂತಿ ಮುಂತಾದ ಹೂವುಗಳಿಂದ ತಯಾರಿಸಿದ ಹೇರ್​ಬ್ಯಾಂಡ್ ಕೂಡ ಇತ್ತೀಚೆಗೆ ಬಳಕೆಯಲ್ಲಿದೆ. ಪ್ಲಾಸ್ಟಿಕ್, ಬಟ್ಟೆಯಿಂದ ತಯಾರಿಸಿದ

ಹೇರ್​ಬ್ಯಾಂಡ್​ಗಳನ್ನು ಹೆಚ್ಚು ಕಾಲ ಇಡಬಹುದು, ಜತೆಗೆ ಪದೇಪದೆ ಬಳಸಬಹುದು. ಇಂತಹ ಹೇರ್​ಬ್ಯಾಂಡ್​ಗಳು ಹೆಣ್ಣುಮಕ್ಕಳನ್ನು ಏಂಜೆಲ್ ತರಹ ಕಾಣುವಂತೆ ಮಾಡುತ್ತವೆ. ಕೃತಕ ಹೂವಿನ ಹೇರ್​ಬ್ಯಾಂಡ್​ಗಳನ್ನು ಡ್ರೆಸ್​ಗೆ ಮ್ಯಾಚ್ ಆಗುವಂತೆ ಹಾಕಿಕೊಳ್ಳಬಹುದು.

ದಿನದಿಂದ ದಿನಕ್ಕೆ ಫ್ಯಾಷನ್​ಲೋಕದಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಅಪ್​ಡೇಟ್ ಆಗುತ್ತಿರುತ್ತಾರೆ. ನಮಗೆ ಗೊತ್ತಿರದ ಸ್ಟೈಲ್ ನಿಮಗೆ ಗೊತ್ತಿರಬಹುದು. ಅಂಥವನ್ನು[email protected]ಗೆ ಬರೆದು ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ.

Leave a Reply

Your email address will not be published. Required fields are marked *