HAGGA REVIEW: ನಾಗೇಕೊಪ್ಲದ ‘ಹಗ್ಗ’ದ ರಹಸ್ಯ!

ಚಿತ್ರ: ಹಗ್ಗ
ನಿರ್ದೇಶನ: ಅವಿನಾಶ್
ನಿರ್ಮಾಣ: ರಾಜ್ ಭಾರದ್ವಾಜ್
ತಾರಾಗಣ: ಅನು ಪ್ರಭಾಕರ್, ಹರ್ಷಿಕಾ ಪೂಣಚ್ಚ, ಸಿ.ವೇಣು, ಅವಿನಾಶ್, ತಬಲಾ ನಾಣಿ, ಪ್ರಿಯಾ ಹೆಗ್ಡೆ ಮತ್ತಿತರರು.
ಶಿವ ಸ್ಥಾವರಮಠ
ಪ್ರತಿ ಗ್ರಾಮಗಳು ರಹಸ್ಯ, ಕುತೂಹಲ ಸಂಗತಿಗಳನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿರುತ್ತವೆ. ಅಂತಹದ್ದೆ ನಾಗೇಕೊಪ್ಲ ಎಂಬ ಗ್ರಾಮವೊಂದು ಹಿಡಿದಿಟ್ಟುಕೊಂಡಿರುವ ‘ಹಗ್ಗ’ದ ರಹಸ್ಯವನ್ನು ಚಿತ್ರದ ಕಥೆಯ ಮೂಲಕ ನಿರೂಪಿಸಿದ್ದಾರೆ ನಿರ್ದೇಶಕ ಅವಿನಾಶ್.

ನಾಗೇಕೊಪ್ಲದಲ್ಲಿ ಮಗು ಜನಿಸಿದರೆ, ಆ ಗ್ರಾಮದಲ್ಲಿ ಮಹಿಳೆಯೊಬ್ಬರ ಸಾವು ಸಂಭವಿಸುತ್ತಿರುತ್ತದೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿದ್ದರೂ ಕಾರಣವೇನು? ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಇದನ್ನೇ ಭೇದಿಸಬೇಕೆಂದು ನಾಯಕ ರಾಮ್ (ವೇಣು) ಮಾಧ್ಯಮದ ಮೊರೆ ಹೋಗುತ್ತಾನೆ. ಆಗ ವರದಿಗಾರ್ತಿಯಾಗಿದ್ದ ರಿತಿಕಾ (ಹರ್ಷಿಕಾ ಪೂಣಚ್ಚ) ನುಗ್ಗೆಕೊಪ್ಲಕ್ಕೆ ಬರುತ್ತಾರೆ. ಗ್ರಾಮಸ್ಥರ ಬಳಿ ಮಾಹಿತಿ ಸಂಗ್ರಹಿಸಿದ ಬಳಿಕ ನಾಯಕ ಮತ್ತು ನಾಯಕಿ ಇಬ್ಬರೂ ಊರಿನಲ್ಲಿ ಸಂಭವಿಸುತ್ತಿರುವ ಸಾವಿನ ರಹಸ್ಯವನ್ನು ಭೇದಿಸುವುದೇ ಚಿತ್ರದ ಕಥೆ.

ಅವಿನಾಶ್ ‘ಹಗ್ಗ’ದ ಕಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರೂಪಿಸಬಹುದಿತ್ತು. ಮೊದಲರ್ಧದಲ್ಲಿ ನಾಯಕ-ನಾಯಕಿಯ ಪ್ರಣಯದ ಕಥೆಯನ್ನೇ ಹೇಳಿದ್ದಾರೆ. ಆದರೆ, ಮೊದಲಿಗೆ ಒಂದಷ್ಟು ಕಥೆಯ ರೋಚಕತೆಯನ್ನು ಸೃಷ್ಟಿಸುವ ಅವಕಾಶ ಇತ್ತು. ಕೊನೆಯ 30 ನಿಮಿಷಗಳು ಮಾತ್ರ ಹಗ್ಗದ ಸುತ್ತ ಕಥೆ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೆ ಕಥೆಯೂ ನಿಧಾನ ಎನಿಸುತ್ತದೆ. ಗರಿಷ್ಠ ಪಾತ್ರಗಳನ್ನು ಬಳಸಿಕೊಂಡಿರುವುದು ಗಮನಾರ್ಹ.

ನಟಿ ಅನು ಪ್ರಭಾಕರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ವಸ ವಿನ್ಯಾಸ, ವರ್ಣಾಲಂಕಾರಕ್ಕೆ ಒಪ್ಪಿದ್ದಾರೆ. ಅವರ ಪಾತ್ರವನ್ನು ಇನ್ನಷ್ಟು ಬಳಸಿಕೊಳ್ಳುವ ಅವಕಾಶ ಇತ್ತು. ಇನ್ನು ನಾಯಕ ವೇಣು ನಟನೆಯಲ್ಲಿ ಮಾಗಬೇಕಿದೆ. ಹರ್ಷಿಕಾ ಪೂಣಚ್ಚ, ಭವಾನಿ ಪ್ರಕಾಶ್ ಹೆಚ್ಚು ಗಮನ ಸೆಳೆಯುತ್ತಾರೆ. ತಬಲಾ ನಾಣಿಯ ಹಾಸ್ಯ ಕಚಗುಳಿ ಇಡುತ್ತದೆ. ಅವಿನಾಶ್, ಪ್ರಿಯಾ ಹೆಗ್ಡೆ ಪಾತ್ರಗಳು ಬಂದು ಹೋಗುತ್ತವಷ್ಟೇ. ‘ಹಗ್ಗ’ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಕೊನೆಯ ಮೂವತ್ತು ನಿಮಿಷ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆಗ ಕೇಳಿಬರುವ ಹಿನ್ನೆಲೆ ಸಂಗೀತ, ಕಲಾತ್ಮಕ ಸೆಟ್ ಗಮನಸೆಳೆಯುತ್ತವೆ.

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…