ಹಗರಿಬೊಮ್ಮನಹಳ್ಳಿ: ಪುರುಷರಂತೆ ಮಹಿಳೆಯರಿಗೂ ಸಾಧಿಸುವ ಅವಕಾಶಗಳಿದ್ದು, ಸದ್ಭಳಕೆಮಾಡಿಕೊಳ್ಳಬೇಕು ಎಂದು ವಿವಿ ಸಂಘದ ಎಂ.ಪಿ.ಪ್ರಕಾಶ್ ಇಂಗ್ಲೀಷ್ ಮೀಡಿಯಂ ಶಾಲೆ ಪ್ರಾಚಾರ್ಯೆ ಎಸ್.ಮಧುಮತಿ ಹೇಳಿದರು.
ಪಟ್ಟಣದ ಹಳೇ ಊರಿನ ಶ್ರೀ ಕಲ್ಲೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ತಾಲೂಕು ಮಹಿಳಾ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಇತಿಹಾಸದಲ್ಲೂ ಮಹಿಳೆಯರ ಸಾಧನೆಗಳು ಮೈಲುಗಲ್ಲಾಗಿವೆ. ಅವರ ಹಾದಿಯಲ್ಲಿ ನಾವು ಸಾಗಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ರೊಟ್ಟಿ ಕೊಟ್ರಪ್ಪ ಮಾತನಾಡಿ, ಒಂದು ಕಾಲದಲ್ಲಿ ಹೆಣ್ಣು ಹುಟ್ಟುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಪುರುಷ ಪ್ರಧಾನ ಸಮಾಜ ಇತ್ತು. ಆದರೆ, ಇಂದು ಸಮಾಜದಲ್ಲಿ ಮಹಿಳೆಯರಿಗೂ ಸಮಾನತೆ ಕಲ್ಪಿಸಿಕೊಟ್ಟಿದೆ. ಬಾಲ್ಯವಿವಾಹ, ಮೂಢನಂಬಿಕೆಗಳಿಂದ ಹೊರಬನ್ನಿ ಎಂದು ಸಲಹೆ ನೀಡಿದರು.
ಬಹುಮಾನ ವಿತರಣೆ
ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರಿಗಾಗಿ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ನಿಂಬೆಹಣ್ಣು ಚಮಚ ಓಟ: ಎಂ.ಭಾಗ್ಯಶ್ರೀ (ಪ್ರಥಮ), ಬಿ.ಶಿವಲೀಲಾ ಮಜ್ಗಿ (ದ್ವಿತೀಯ), ಬಿ.ಮಂಗಳಾ (ತೃತೀಯ), ಕೈಮುಟ್ಟದೆ ಬಿಸ್ಕತ್ ತಿನ್ನುವ ಸ್ಪರ್ಧೆ: ಗೌರಿ ಅಂಗಡಿ(ಪ್ರಥಮ), ವಿದ್ಯಾ ಕರಡೆಕಲ್ (ದ್ವಿತೀಯ), ಗೀತಾ ಮಾಲ್ವಿ (ತೃತೀಯ), ಮ್ಯೂಜಿಕಲ್ ಚೇರ್: ಕೆ.ಪುಷ್ಪಾವತಿ(ಪ್ರಥಮ), ವೀಣಾ ನಾಲ್ವಾಡ್(ದ್ವಿತೀಯ), ಮಜ್ಗಿ ಸಾಕ್ಷಿ(ತೃತೀಯ) ಸ್ಥಾನ ಪಡೆದರು.
ಬಣಜಿಗ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷೆ ಪಟ್ಟೇದ್ ಕಸ್ತೂರಿ ಮಂಜುನಾಥ ಮಾತನಾಡಿದರು. ಪದಾಧಿಕಾರಿ ಪಾರ್ವತಿ ಚಿನಿವಾಲರ, ಬಣಜಿಗ ಸಂಘದ ರಾಚಪ್ಪ, ಪ್ರಮುಖರಾದ ಪಟ್ಟೇದ್ ವಿಶ್ವಪತಿ, ಬಿ.ವೀರೇಶ, ಅಂಬರೀಷ ಯಡ್ರಮ್ಮನಹಳ್ಳಿ, ಸಿ.ಪ್ರಭಾವತಿ, ಯಡ್ರಮ್ಮನಹಳ್ಳಿ ಶೋಭಾ ಅಂಗಡಿ, ಪಿ.ಮಂಜುಳಾ, ಪಂಕಜಾ ಪ್ರಸಾದ್, ಶಶಿಕಲಾ ಇತರರಿದ್ದರು.