More

  ಇಂದು ಸಾರ್ಥಕ ನಮನ ಕಾರ್ಯಕ್ರಮ- ಮಾಜಿ ಸಿಎಂ ಸಿದ್ದರಾಮಯ್ಯಗೆ ಸನ್ಮಾನ

  ಹಗರಿಬೊಮ್ಮನಹಳ್ಳಿ: ಮೂರು ದಶಕಗಳ ಬೇಡಿಕೆ ಈಡೇರಿಸಿ ಮಾಲವಿ ಜಲಾಶಯ ನಿರ್ಮಾಣಕ್ಕೆ 150 ಕೋಟಿ ರೂ. ಅನುದಾನ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜ.3 ರಂದು ಸಾರ್ಥಕ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ಭೀಮಾನಾಯ್ಕ ತಿಳಿಸಿದರು.

  ಪಟ್ಟಣದಲ್ಲಿ ಸಾರ್ಥಕ ನಮನ ಕಾರ್ಯಕ್ರಮದ ವೇದಿಕೆ ನಿರ್ಮಾಣ ಕಾರ್ಯ ಸೋಮವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ಎರಡು ಸಾವಿರ ಕೋಟಿ ರೂ. ಅನುದಾನ ಬಂದಿತ್ತು. ಮಾಲವಿ ಜಲಾಶಯ ಮತ್ತು ಚಿಲವಾರ ಬಂಡಿ ಏತ ನೀರಾವರಿ ಯೋಜನೆಗಳಿಗೆ 228 ಕೋಟಿ ರೂ. ಅನುದಾನ ನೀಡಿದ್ದರು ಎಂದು ಸ್ಮರಿಸಿದರು.

  ಮಾಜಿ ಸಿಎಂ ಆಗಮನದಿಂದಾಗಿ ಕಾಂಗ್ರೆಸ್‌ನಲ್ಲಿ ಉತ್ಸಾಹ ಮೂಡಿಸಿದೆ. 60 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಪ್ರತಿ ಹೋಬಳಿಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದು ಭೀಮನಾಯ್ಕ ಅಭಿಮಾನಿ ಬಳಗದಿಂದ 15 ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ಅಶೋಕ ನಾಯ್ಕ ಪ್ರಕಾಶನದಿಂದ ಪಿಯು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಗ್ರಾಮರ್ ಪುಸ್ತಕ ವಿತರಿಸಲಾಗುತ್ತಿದೆ. ಸಂಜೆ ರಾಜೇಶ್ ಕೃಷ್ಣನ್ ತಂಡದಿಂದ ಅರ್ಕೆಸ್ಟ್ರಾ, ಕೋಗಳಿ ಕೊಟ್ರೇಶ್ ಮತ್ತು ಡಾ.ಬಸವರಾಜ ಬೆಣ್ಣಿ ಅವರಿಂದ ಹಾಸ್ಯ ಸಂಜೆ ನಡೆಯಲಿದೆ ಎಂದರು.

  ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೋರಿ ಗೋಣಿ ಬಸವರಾಜ, ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ವಿ.ಮರಿರಾಮಪ್ಪ, ಮುಖಂಡರಾದ ಅಕ್ಕಿ ತೋಟೇಶ್, ಹಾಲ್ದಾಳ್ ವಿಜಯಕುಮಾರ್, ಹುಡೇದ್ ಗುರುಬಸವರಾಜ, ಕೆ.ಮೈಲಾರಪ್ಪ, ಉಪ್ಪಾರ ಬಾಳಪ್ಪ, ಸೆರೆಗಾರ ಹುಚ್ಚಪ್ಪ, ಚಿಂತ್ರಪಳ್ಳಿ ದೇವೆಂದ್ರಪ್ಪ, ಅಡವಿ ಆನಂದೇವನಹಳ್ಳಿ ಪ್ರಭು, ಜಂದಿಸಾಬ್ ಇನ್ನಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts