ಸಿನಿಮಾ

ಹಗರಿಬೊಮ್ಮನಹಳ್ಳಿ ಬಿರುಬಿಸಿಲಿನಲ್ಲಿ ಬಿರುಸಿನ ಮತದಾನ

ಹಗರಿಬೊಮ್ಮನಹಳ್ಳಿ: ವಿಧಾನಸಭೆ ಕ್ಷೇತ್ರ ಚುನಾವಣೆ ನಿಮಿತ್ತ ತಾಲೂಕಿನಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ವಿವಿಧ ಪಕ್ಷದ ಮುಖಂಡರು ಮತದಾನ ಕೇಂದ್ರಗಳಿಗೆ ಪೂಜೆ ಸಲ್ಲಿಸಿದರು.

ಶೇ. 81.17 ಮತದಾನವಾಗಿದ್ದು ಜಿಲ್ಲೆಗೆ ಅತಿ ಹೆಚ್ಚು ಮತದಾನವಾದ ವಿಧಾನ ಸಭೆ ಕ್ಷೇತ್ರವಾಗಿದೆ. ಉತ್ಸಾಹದಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಹೊಸ ಮತದಾರರು ಯುವಕರು ತಮ್ಮ ಮತಚೀಟಿಯನ್ನು ತೆಗೆದುಕೊಂಡು ಬಂದು ಮತಗಟ್ಟೆಯಲ್ಲಿ ಮೊದಲನೇ ಮತದಾನ ಮಾಡಿದರು.

ಇದನ್ನೂ ಓದಿ:ಶಿರಾದಲ್ಲಿ ಮೊಳಗಿದ ಕಾಂಗ್ರೆಸ್ ಕಹಳೆ ; ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಶಕ್ತಿಪ್ರದರ್ಶನ ಮಾಡಿದ ಜಯಚಂದ್ರ

ಬಿರುಬಿಸಿಲಿನಲ್ಲಿ ಆಯಾ ಭಾಗದ ಪಕ್ಷಗಳ ಮುಖಂಡರು ಮತದಾರರನ್ನು ಪರಿಶೀಲಿಸಿ ಮತ ಚಲಾಯಿಸುವಲ್ಲಿ ನಿರತರಾಗಿದ್ದರು.ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವಿದ್ದರೂ ಸಹ ಬಹುತೇಕ ಮತಗಟ್ಟೆಯಲ್ಲಿ ವೃದ್ಧರು ಮತಚಲಾಯಿಸಿದ್ದು ಕಂಡು ಬಂತು. ತಾಲೂಕಿನ ಉಲುವತ್ತಿ ಗ್ರಾಮದಲ್ಲಿ 14 ದಿನದ ಬಾಣಂತಿ ಮತಗಟ್ಟೆಗೆ ಕಂದಮ್ಮ ಜತೆಗೆ ಆಗಮಿಸಿ ಮತಚಲಾಯಿಸಿದರು.

ಒಟ್ಟು 252 ಮತಕೇಂದ್ರಗಳಲ್ಲಿ ಚುನಾವಣೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪಾರದರ್ಶಕ ಚುನಾವಣೆ ನಿರ್ವಹಸಿದರು. ಕೇಂದ್ರಗಳಿಂದ 100 ಮೀಟರ್ ದೂರದಲ್ಲಿಯೇ ಪಕ್ಷದ ಮುಖಂಡರುಗಳಿಗೆ ಅವರವರ ಅಭ್ಯರ್ಥಿಗಳಿಗೆ ಮತಯಾಚನೆಗೆ ಅವಕಾಶ ನೀಡಲಾಗಿತ್ತು. ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಬಿರು ಬಿಸಿಲಿನಲ್ಲಿಯೂ ಸಹ ಮತದಾರ ಒಲೈಕೆಗೆ ಮುಂದಾಗಿದ್ದರು.

Latest Posts

ಲೈಫ್‌ಸ್ಟೈಲ್