ಮಂಗನಕಾಯಿಲೆ ನಡುವೆ ಹಂದಿ ಜ್ವರ ಭೀತಿ

ಉಡುಪಿ: ಮಂಗನ ಕಾಯಿಲೆ ಭೀತಿ ನಡುವೆ ಹಂದಿ ಜ್ವರ (ಎಚ್1ಎನ್1) ಪತ್ತೆಯಾಗಿರುವುದು ಮಲೆನಾಡು, ಕರಾವಳಿ ಭಾಗದ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಇಬ್ಬರಿಗೆ ಹಂದಿ ಜ್ವರ ಸಂಬಂಧಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಸಾಗರ ಹಾಗೂ ಆಸುಪಾಸಿನ ಸುಮಾರು 128 ಜನರು ಇಲ್ಲಿಯವರೆಗೆ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಮತ್ತು ಜ್ವರ ಮರುಕಳಿಸಿದ್ದರಿಂದ 4 ಜನ ಮರು ಸೇರ್ಪಡೆಗೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ 53 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 77 ಜನರಿಗೆ ಮಂಗನ ಕಾಯಿಲೆ ಇರದ ಬಗ್ಗೆ ದೃಢವಾಗಿದೆ. 106 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು, 24 ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.