Friday, 16th November 2018  

Vijayavani

Breaking News

ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್​ಡಿಕೆ ಬಜೆಟ್​ಗೆ ಅಪಸ್ವರ

Wednesday, 11.07.2018, 12:58 PM       No Comments

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್​ಗೆ ಅಪಸ್ವರ ಕೇಳಿ ಬಂದಿದೆ. ಮಾಜಿ ಸಚಿವ ಎಚ್.ಕೆ. ಪಾಟೀಲ್​ ಅವರು ಸಭೆಯಲ್ಲಿ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಎಚ್​ಡಿಕೆ ಮಂಡಿಸಿದ ಬಜೆಟ್​ನಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್​ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳನ್ನು ನಿರ್ಲಕ್ಷಿಸಲಾಗಿದೆ. ಹೀಗೆ ಆದರೆ ಕಾಂಗ್ರೆಸ್​ನ ಗತಿ ಏನು? ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ತನ್ನ ಭದ್ರಕೋಟೆಗಳನ್ನು ಕಳೆದುಕೊಳ್ಳಲಿದೆ. ಈ ಬಜೆಟ್​ ಆಧರಿಸಿ ಯಾವ ಮುಖ ಹೊತ್ತುಕೊಂಡು ಲೋಕಸಭೆ ಚುನಾವಣೆಯಲ್ಲಿ ಮತ ಕೇಳುವುದು. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್​ ಕತೆ ಏನು ಎಂದು ಎಚ್​.ಕೆ. ಪಾಟೀಲ್​ ಅವರು ಪ್ರಶ್ನಿಸಿದ್ದಾರೆ.

ಎಚ್​ಡಿಕೆ ಹೇಳಿದ್ದಕ್ಕೆಲ್ಲಾ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಅವರು ತಲೆಯಾಡಿಸುತ್ತಿದ್ದಾರೆ. ಸಿಎಂ ಹೇಳಿದ್ದಕ್ಕಲ್ಲಾ ಇವರು ಓಕೆ ಅಂದರೆ ಮುಂದಿನ ಪರಿಣಾಮ ಏನಾಗುತ್ತೆ ಗೊತ್ತಾ? ಕಾಂಗ್ರೆಸ್​ ನಿಲುವುಗಳಿಗೆ ಜೆಡಿಎಸ್​ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪಕ್ಷ ಮುಖ್ಯ, ಅಧಿಕಾರ ಇಂದು ಬರುತ್ತೆ ನಾಳೆ ಹೋಗುತ್ತೆ. ಕಾಂಗ್ರೆಸ್​ನ ಬುಡ ಅಲ್ಲಾಡದಂತೆ ನೋಡಿಕೊಳ್ಳಿ ಎಂದು ಎಚ್​.ಕೆ. ಪಾಟೀಲ್​ ಪರಮೇಶ್ವರ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Back To Top