ಯಾವನ್ರೀ ಅವನು ಶ್ರೀನಿವಾಸ್ ಪ್ರಸಾದ್ ಎಂದು ಕಿಡಿಕಾರಿದ ಸಚಿವ ರೇವಣ್ಣ

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿರುದ್ಧ ಹಾಸನ ಬಿಜೆಪಿ ಶಾಸಕ ಹಾಗೂ ಶ್ರೀನಿವಾಸ್ ಪ್ರಸಾದ್ ಲಘುವಾಗಿ ಟೀಕಿಸಿದ್ದ ಹಿನ್ನೆಲೆಯಲ್ಲಿ ತಂದೆಯನ್ನು ಟೀಕಿಸಿದ್ದಕ್ಕೆ ಕೆಂಡಾಮಂಡಲವಾಗಿರುವ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಯಾವನ್ರೀ ಅವನು ಶ್ರೀನಿವಾಸ್ ಪ್ರಸಾದ್? ದೇವೇಗೌಡರು ಸುಮ್ಮನೆ ದೆಹಲಿಗೆ ಓಡಾಡ್ಕೊಂಡು ಇಲ್ಲ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವನು ಯಡಿಯೂರಪ್ಪನನ್ನು ಚರ್ಚೆಗೆ ಕರೆಯಲಿ. ದೇವೇಗೌಡರು ಏನು ಕೆಲಸ ಮಾಡಿದ್ದಾರೆ, ಇಲ್ಲ ಎನ್ನುವುದು ಚರ್ಚೆ ಆಗಲಿ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಬಿಜೆಪಿಯವರಿಗೆ ನಾಚಿಕೆ ಆಗ್ಬೇಕು. 18 ಮಂದಿ ಸಂಸದರಿದ್ದರೂ ಕಾವೇರಿ, ಮಹದಾಯಿ ಹೋರಾಟ ಮಾಡಿಲ್ಲ. ಈಗ ಟಿವಿ ಮುಂದೆ ಟೀಕೆ ಮಾಡುತ್ತಾರೆ. ಶಿವಮೊಗ್ಗವನ್ನು ಯಡಿಯೂರಪ್ಪ ಅವರ ಮಕ್ಕಳಿಗೆ ಬರೆದುಕೊಟ್ಟಿದ್ದಾರಾ? ಅಚಾನಕ್ಕಾಗಿ ಶಾಸಕನಾದೆ ಹೀಗೆ ಮಾತನಾಡುತ್ತಾರೆ. ಈ ಬಾರಿ ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ. ದೇವೇಗೌಡರ ಸಾಧನೆ ಬಗ್ಗೆ ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಎಸೆದರು.

ಬಿಜೆಪಿಗೆ ನಾಚಿಕೆಯಾಗಬೇಕು. ಈ ರಾಜ್ಯವನ್ನು ಬಿಜೆಪಿಗೆ ಬರೆದುಕೊಟ್ಟಿಲ್ಲ. ಪ್ರಧಾನಿಗೆ ಬರೆದುಕೊಟ್ಟ ಅಸತ್ಯವನ್ನೆಲ್ಲ ಹೇಳಿಸುತ್ತಿದ್ದಾರೆ. ಬಿಜೆಪಿಯ ನಾಲ್ಕೂವರೆ ವರ್ಷದ ಆಡಳಿತ ಹೇಗಿದೆ ಎಂಬುದನ್ನು ಜನ ನೋಡಿದ್ದಾರೆ. ಹೀಗಿದ್ದರೂ ರೈತರ ಸಾಲಮನ್ನಾ ಮಾಡಿಲ್ಲ. ಅವರಿಗೆ ಸಂಸ್ಕೃತಿ ಇಲ್ಲ. ಅಂತವರ ಬಗ್ಗೆ ಮಾತನಾಡಿದರೆ ನಾವು ಪೊಳ್ಳೆಂದು ಹೋಗುತ್ತೇವೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿಯು ತಾನಾಗೆ ಹೋಗುತ್ತದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

One Reply to “ಯಾವನ್ರೀ ಅವನು ಶ್ರೀನಿವಾಸ್ ಪ್ರಸಾದ್ ಎಂದು ಕಿಡಿಕಾರಿದ ಸಚಿವ ರೇವಣ್ಣ”

Comments are closed.