ನಾನು ಕೊಟ್ಟ ಅನುದಾನಗಳನ್ನೆಲ್ಲ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ: ರಾಮನಗರದಲ್ಲಿ ಎಚ್​ಡಿ ಕುಮಾರಸ್ವಾಮಿ ವಾಗ್ದಾಳಿ

blank
blank

ರಾಮನಗರ: ರಾಜ್ಯ ಸರ್ಕಾರವು ನಾನು ಕೊಟ್ಟ ಅನುದಾನಗಳನ್ನು ಸ್ಥಗಿತಗೊಳಿಸಿದೆ, ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಕೈಲಾಂಚದ​ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಿರುವ ಎಲ್ಲ ಅನುದಾನಗಳನ್ನು ಸ್ಥಗಿತಗೊಳಿಸಲಾಗಿದೆ. ಅನುದಾನಗಳ ಕಡಿತದ ಬಗ್ಗೆ ಆಯಾ ಇಲಾಖೆಯ ಸಚಿವರು, ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರ ಎಲ್ಲ ಫೈಲ್​ಗಳು ಸಿಎಂ ಬಳಿ ಇದೆ. ಅವರು ಅದಕ್ಕೆ ಸಹಿ ಹಾಕಬೇಕಷ್ಟೇ. ಅವರು ಯಾವಾಗ ಆ ಫೈಲ್​ಗಳಿಗೆ ಸಹಿ ಹಾಕುತ್ತಾರೋ ಎಂದು ಕಾಯುತ್ತಿದ್ದೇನೆ.” ಎಂದು ಹೇಳಿದ್ದಾರೆ.

ತಮ್ಮ ಪಕ್ಷದ ಬಗ್ಗೆ ಮಾತನಾಡಿರುವ ಅವರು, ನಮ್ಮ ಜೆಡಿಎಸ್​ ಪಕ್ಷ ಯಾವಾಗಲೂ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಡಿದೆ. 2008ರಲ್ಲೂ ನಮಗೆ ಬಿಜೆಪಿ ಸರ್ಕಾರದಿಂದ ತೊಂದರೆಯಾಗಿತ್ತು. ಕ್ಷೇತ್ರಗಳ ಅಭಿವೃದ್ಧಿಗೆ ಬಿಜೆಪಿಯಿಂದ ಯಾವುದೇ ಸಹಕಾರವಿರಲಿಲ್ಲ. ಈಗಲೂ ಅದೇ ರೀತಿ ಆಗುತ್ತಿದೆ. ಮುಂದೆ ಏನು ಮಾಡುತ್ತಾರೋ ಕಾದು ನೋಡೋಣ ಎಂದು ಹೇಳಿದ್ಧಾರೆ.

ಪಕ್ಷವನ್ನು ದೇವೇಗೌಡರ ನೇತೃತ್ವದಲ್ಲಿಯೇ ಮುಂದುವರಿಸುವುದಾಗಿ ತಿಳಿಸಿರುವ ಅವರು ಬಿಜೆಪಿಯ ದ್ವೇಷ ರಾಜಕಾರಣದ ಬಗ್ಗೆ ವಿಧಾನಸಭೆಯ ಕಲಾಪದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…