ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಶ್ರಮಿಸಿ

ಎಚ್.ಡಿ.ಕೋಟೆ: ವಿಶ್ವಕರ್ಮ ಸಮಾಜದ ಸಂಘಟನೆಯಲ್ಲಿ ರಾಜಕಾರಣ ಮಾಡದೆ ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ತಾಲೂಕು ಆಡಳಿತ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಮುಖಂಡರು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಸಮಾಜದ ಅಭಿವೃದ್ಧಿ ವಿಷಯ ಬಂದಾಗ ರಾಜಕೀಯವನ್ನು ಬದಿಗಿಟ್ಟು ಪರಸ್ಪರ ಸಹಕಾರದಿಂದ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಅದು ಬಿಟ್ಟು ಸಮಾಜ ಒಡೆಯುವ ಕೆಲಸವನ್ನು ಯಾವ ಸಮಾಜದವರು ಮಾಡಬಾರದು ಎಂದರು.

ತಹಸೀಲ್ದಾರ್ ಆರ್.ಮಂಜುನಾಥ್ ಮಾತನಾಡಿ, ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಮಹತ್ವದಾಗಿದ್ದು ಅವರನ್ನು ಸದಾ ಎಲ್ಲರೂ ಸ್ಮರಿಸಬೇಕು. ಸಮಾಜದವರು ಆರ್ಥಿಕವಾಗಿ ಹಿಂದುಳಿದ ಕಾರಣ ವಿಶ್ವಕರ್ಮ ಜಯಂತಿಯನ್ನು ಸಮಾಜದಿಂದ ಆಚರಿಸುವುದು ಕಷ್ಟ ಎಂದು ಸರ್ಕಾರವೇ ಆಚರಿಸುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಸದಸ್ಯರಾದ ಅಂಕನಾಯಕ, ಸ್ಟ್ಯಾನಿ, ಪುರಸಭೆ ಸದಸ್ಯರಾದ ರಾಜು ವಿಶ್ವಕರ್ಮ, ಎಚ್.ಸಿ.ನರಸಿಂಹಮೂರ್ತಿ, ಪ್ರೇಮ್, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಸೋಮಾಚಾರ್, ಮೈಮುಲ್ ನಿರ್ದೇಶಕ ಕೆ.ಈರೇಗೌಡ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ, ಮುಖ್ಯಶಿಕ್ಷಕ ಚಂದ್ರಶೇಖರ್, ಮುಖಂಡರಾದ ವೆಂಕಟಾಚಲ, ಜಿ.ರವಿ, ಬಸಪ್ಪ, ಪರಶಿವಮೂರ್ತಿ, ಜೀವಿಕ ಬಸವರಾಜು, ಗೋವಿಂದಚಾರ್ ಇದ್ದರು.

Leave a Reply

Your email address will not be published. Required fields are marked *