More

    ಗಣರಾಜ್ಯೋತ್ಸವ ದಿನದಂದು ಅಸ್ಸಾಂನಲ್ಲಿ 5 ಕಡೆ ಸ್ಫೋಟ: ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ ಸಂಘಟನೆ ಮೇಲೆ ಶಂಕೆ

    ಗುವಾಹತಿ : ಗಣರಾಜ್ಯೋತ್ಸವದ ದಿನ ಅಸ್ಸಾಂನಲ್ಲಿ 5 ಕಡೆ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

    ಡಿಬ್ರುಗರ್​ನಲ್ಲಿ 2 ಐಇಡಿ, ಸೋನಾರಿ, ದುಲಿಯಾಜನ್​ ಮತ್ತು ದೂಮ್​ಡೋಮದಲ್ಲಿ ತಲಾ ಒಂದು ಗ್ರೆನೇಡ್ ಸ್ಫೋಟಿಸಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಒಂದು ಗಂಟೆಯ ಅವಧಿಯಲ್ಲಿ 5 ಪ್ರದೇಶಗಳಲ್ಲಿ ಸ್ಫೋಟ ನಡೆದಿದೆ. ಹೇಡಿಗಳು ಗಣರಾಜ್ಯೋತ್ಸವ ದಿನದಂದು ಗ್ರೆನೇಡ್​ ಸ್ಫೋಟಿಸಿದ್ದಾರೆ. ಜನರು ಭಯೋತ್ಪಾದಕ ಗುಂಪುಗಳನ್ನು ತಿರಸ್ಕರಿಸಿದ ಪರಿಣಾಮ ಭಯೋತ್ಪಾದಕರು ನಿರಾಸೆಗೊಂಡು ಈ ಕೃತ್ಯ ಎಸಗಿದ್ದಾರೆ. ಸ್ಫೋಟಕ್ಕೆ ಕಾರಣರಾದವರನ್ನು ಪತ್ತೆ ಮಾಡಿ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಟ್ವೀಟ್ ಮಾಡಿದ್ದಾರೆ.

    ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ಸ್ವತಂತ್ರ) ಸಂಘಟನೆ ಸ್ಫೋಟ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts