ಬಸವಕಲ್ಯಾಣ: ದುಡಿಮೆ ಇಲ್ಲದೆ ತಿನ್ನುವ ಅಧಿಕಾರ ಯಾರಿಗೂ ಇಲ್ಲ. ಎಲ್ಲಿ ಪ್ರಾಮಾಣಿಕವಾದ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಬೆವರು ಹನಿಗಳು ಸುರಿಯುತ್ತವೆಯೋ ಅಲ್ಲಿ ಹೊಸ ಇತಿಹಾಸ ಸೃಷ್ಟಿಸಬಹುದಾಗಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ ೨೦೧೫ -೧೬ನೇ ಸಾಲಿನ ೯ನೇ ಬ್ಯಾಚ್ ವಿದ್ಯಾರ್ಥಿಗಳಿಂದ ಸೋಮವಾರ ಆಯೋಜಿಸಿದ್ದ ಗುರುವಂದನೆ ಹಾಗೂ ೭೧೩ನೇ ತುಲಾಭಾರ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪರಿಶ್ರಮದಲ್ಲಿ ಪರಮಾತ್ಮನನ್ನು ಕಾಣಬೇಕು. ಸಮಾಜದಿಂದ ಕೇವಲ ಫಲಾಪೇಕ್ಷೆ ಬಯಸುವ ವ್ಯಕ್ತಿಗಳಾಗದೆ ಸಮಾಜಕ್ಕೆ ಫಲ ನೀಡುವಂತಹ, ಸಮಾಜದ ಉನ್ನತಿಗೆ ಶ್ರಮಿಸುವಂತಹ ಆದರ್ಶ ವ್ಯಕ್ತಿತ್ವ ನಮ್ಮದಾಗಬೇಕು ಎಂದರು.
ಅಂಬರೀಶ ಕನಕಪುರ ಮಾತನಾಡಿದರು. ಪ್ರವೀಣ ರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿನಾಥ ಹಿರೇಮಠ ಹಾರಕೂಡ, ಪರಮೇಶ್ವರ ಹೊಳಕುಂದೆ, ಡಾ.ರಾಜಶೇಖರ ಮದ್ರಿ, ಪ್ರಹ್ಲಾದ ಚೌವ್ಹಾಣ್ ಮತ್ತು ಶಾಲೆಯ ೯ನೇ ಬ್ಯಾಚ್ ವಿದ್ಯಾರ್ಥಿಗಳು ಇದ್ದರು.
ಅಂಬಾದಾಸ ಸಸ್ತಾಪುರ, ಅಂಬರೀಶ ಕನಕಪುರ ನಿರೂಪಣೆ ಮಾಡಿ ವಂದಿಸಿದರು. ಕಾರ್ತಿಕಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.