ಎಚ್.ಡಿ.ಕೋಟೆ: ತಾಲೂಕಿನ ಮೇಟಿಕುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮೇಟಿಕುಪ್ಪೆ ಗುರುಸ್ವಾಮಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೇಟಿಕುಪ್ಪೆ ಗುರುಸ್ವಾಮಿ ಮತ್ತು ಮತ್ತೊಬ್ಬ ಗುರುಸ್ವಾಮಿ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಒಂಬತ್ತು ಮತಗಳನ್ನು ಪಡೆದು ಬಹುಮತದಿಂದ ಮೇಟಿಕುಪ್ಪೆ ಗುರುಸ್ವಾಮಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ಗುರುಸ್ವಾಮಿ ನಾಲ್ಕು ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷರಾಗಿ ಸುರೇಂದ್ರನಾಯಕ್ ಅವಿರೋಧವಾಗಿ ಆಯ್ಕೆಯಾಗಿದರು. ಮತದಾನ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಮಾದಪ್ಪ, ಬಸವಾಚಾರಿ, ಎಂ.ಎಸ್.ಮಾದಪ್ಪ, ಬಸವರಾಜನಾಯಕ, ಎಸ್.ಎಂ.ಚಂದ್ರ, ಮುರಳೀಧರ, ಡಿ.ಗುರುಸ್ವಾಮಿ, ಸುರೇಂದ್ರ ನಾಯಕ, ಗೌರಿ, ನಿಂಗಮ್ಮ, ಎ.ಟಿ.ನಾಗರಾಜು ಹಾಗೂ ಗುರುಸ್ವಾಮಿ ಭಾಗಿಯಾಗಿದ್ದರು.
ಗ್ರಾಮದ ಎಂ.ಎಸ್.ಕೂಸಪ್ಪ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಮಾಜಿ ಸದಸ್ಯ ಶಿವನಂಜಪ್ಪ, ದೇವಪ್ಪ, ನಂಜಪ್ಪ, ಮಲ್ಲೇಶ್, ಶ್ರೀಕಂಠಪ್ಪ, ದೇವಣ್ಣ, ಕಾಳಿಂಗೇಗೌಡ, ಸಿ.ಕೆ.ರವಿ, ಸಂತೋಷ್, ವೆಂಕಟೇಗೌಡ, ಕುಮಾರ, ನಾಗರಾಜು, ಮಂಜುನಾಥ, ಶೇಖರ ಇದ್ದರು.