ಖರ್ಗೆಗೆ ಶುರುವಾಗಿದೆ ಚಳಿ ಜ್ವರ

ಯಾದಗಿರಿ: ಗುರುಮಠಕಲ್ ಕ್ಷೇತ್ರದಿಂದ ಅತಿ ಹೆಚ್ಚು ಜನ ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದು, ಇದೇ ಐದು ದಶಕ ಈ ಕ್ಷೇತ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ನ ಡಾ.ಮಲ್ಲಿಕಾರ್ಜುನ ಖರ್ಗೆ ಸಾಧನೆ. ಜನತೆ ಈಗ ಸಾಕಷ್ಟು ಜಾಣರಾಗಿದ್ದು, ಒಳ್ಳೆಯದು ಕೆಟ್ಟದ್ದು ಯೋಚನೆ ಮಾಡುತ್ತಿದ್ದಾರೆ ಎಂದು ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯಥರ್ಿ ಡಾ.ಉಮೇಶ ಜಾಧವ್ ಆರೋಪಿಸಿದರು.

ಹತ್ತಿಕುಣಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗುರುಮಠಕಲ್ ಜನತೆ ಸ್ವಾಭಿಮಾನದಿಂದ ಜೀವನ ಸಾಗಿಸಲು ಒಂದಾದರೂ ಕೈಗಾರಿಕೆ ಸ್ಥಾಪನೆ ಮಾಡಲಿಲ್ಲ. ಅವರಿಗೆ ಈ ಭಾಗದ ಅಭಿವೃದ್ಧಿಯೇ ಬೇಕಾಗಿಲ್ಲ. ಸಂವಿಧಾನದ 371(ಜೆ) ಜಾರಿಗಾಗಿ ಮಾಜಿ ಸಚಿವ ವೈಜನಾಥ ಪಾಟೀಲ್, ದಿ.ವಿಶ್ವನಾಥರಡ್ಡಿ ಮುದ್ನಾಳ್ ಶ್ರಮಿಸಿದ್ದಾರೆ. ಆದರೆ ಅದನ್ನು ತಾವೇ ಮಾಡಿದ್ದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದ ಜನತೆ ನನಗೆ ಒಮ್ಮೆ ಆಶೀರ್ವದಿಸಿ ಕಳಿಸಿದರೆ ಗುರುಮಠಕಲ್ ಕ್ಷೇತ್ರವನ್ನು ಮಾದರಿಯಾಗಿ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸುವ ನಿಟ್ಟಿನಲ್ಲಿ ನನ್ನನ್ನು ಗೆಲ್ಲಿಸಿ. ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದರು.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ ಜಾಧವ್ ಹೆಸರು ಘೋಷಣೆಯಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚಳಿ ಜ್ವರ ಶುರುವಾಗಿದೆ. ಖರ್ಗೆ ಹಳೇ ಎತ್ತಿದ್ದಂತೆ. ಇಂಥ ಎತ್ತು ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ ಜಾಧವ್ ಎಂಬ ಕಿಲಾರಿ ಎತ್ತನ್ನು ಕರೆತಂದಿದ್ದೇನೆ. ಈ ಎತ್ತಿಗೆ ನೀವು ಅಧಿಕಾರಕ್ಕೆ ತನ್ನಿ, ಯಾವ ರೀತಿ ದುಡಿಯಲಿದೆ ಎಂಬುದು ತಿಳಿಯುತ್ತದೆ ಎಂದು ತಮ್ಮದೇ ಆದ ಶೈಲಿಯಲ್ಲಿ ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದ್ದು, ಮುಂದಿನ ಎರಡು ದಶಕ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯ ಸಕರ್ಾರ ಕೋಮಾದಲ್ಲಿದ್ದು, ಕೇಂದ್ರದಲ್ಲಿ ಬಿಜೆಪಿ ಸಕರ್ಾರ ರಚನೆಯಾದ 24 ಗಂಟೆಗಳಲ್ಲಿ ಸಕರ್ಾರ ಪತನಗೊಂಡು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ. ದೇವೇಗೌಡ ಹಾವು ಮುಂಗುಸಿ ಇದ್ದಂತೆ. ಅವರನ್ನು ಕಂಡರೆ ಇವರಿಗಾಗುವುದಿಲ್ಲ. ಇವರನ್ನು ಕಂಡರೆ ಅವರಿಗೆ ಆಗುವುದಿಲ್ಲ ಎಂದು ಕಿಚಾಯಿಸಿದರು.

ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ 1972ರಿಂದ ಇದುವರೆಗೆ ಬಂಜಾರ ಸಮುದಾಯದ ಸಹಾಯದಿಂದಲೇ ಗೆದ್ದಿದ್ದಾರೆ. ಆದರೆ ಆ ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಅಭಿವೃದ್ಧಿ ಪರವಾಗಿರುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಹತ್ತಿಕುಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಪ್ರಮುಖರಾದ ಖಂಡಪ್ಪ ದಾಸನ, ಸಾಯಿಬಣ್ಣ ಬೋರಬಂಡಾ, ಶರಣಗೌಡ ಬಾಡಿಯಾಳ ಇತರರಿದ್ದರು. ಕಾಂಗ್ರೆಸ್-ಜೆಡಿಎಸ್ ತೊರೆದು ಹಲವು ಕಾರ್ಯಕರ್ತರು ಬೆಜೆಪಿಗೆ ಸೇರ್ಪಡೆಗೊಂಡರು.

Leave a Reply

Your email address will not be published. Required fields are marked *