
ಧಾರವಾಡ: ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ಕೊಡಮಾಡುವ ಗುರುಕುಲ ವಿದ್ಯಾವಾಚಸ್ಪತಿ ಕವಿತಾಕೃಷ್ಣ (ಸಾಹಿತ್ಯ ಕ್ಷೇತ್ರ) ಪ್ರಶಸ್ತಿಗೆ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಬಿ. ಬಸೆಟ್ಟಿ ಭಾಜನರಾಗಿದ್ದಾರೆ. ಸಾಹಿತ್ಯ, ಸಮಾಜ ಸೇವೆ, ಸಂಘಟನೆ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.