24.9 C
Bangalore
Wednesday, December 11, 2019

VIDEO| ಆಯುಷ್ಮಾನ್​ ಭವ ಮೂಲಕ ಸೆಂಚುರಿ ಬಾರಿಸಿದ ಗುರುಕಿರಣ್​: ಸಂಗೀತ ಮಾಂತ್ರಿಕನ ಸಿನಿ ಜರ್ನಿಯ ಕಿರುನೋಟ ಇಲ್ಲಿದೆ…

Latest News

ವಿಷ್ಣು‌ ಸೇನಾ‌ ಸಮಿತಿಯಿಂದ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಆಯೋಜನೆ

ಬಳ್ಳಾರಿ: ಚಿತ್ರನಟ ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ ಹಿನ್ಮೆಲೆಯಲ್ಲಿ ವಿಷ್ಣು ಸೇನಾ ಸಮಿತಿಯಿಂದ ಡಿ.29ರಂದು ನಗರ ಹಾಗೂ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.29ರಂದು...

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ “ಆಯುಷ್ಮಾನ್​ ಭವ” ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ.

ಆಯುಷ್ಮಾನ್​ ಭವ ಗುರುಕಿರಣ್​ ಸಂಗೀತ ನಿರ್ದೇಶನದ ನೂರನೇ ಸಿನಿಮಾ. ಇದೇ ಖುಷಿಯಲ್ಲಿ ಟ್ವೀಟ್​ ಮಾಡಿರುವ ಗುರುಕಿರಣ್​ ಇಂದು ನನ್ನ ನೂರನೇ ಚಿತ್ರ “ಆಯುಷ್ಮಾನ್​ ಭವ” ಬಿಡುಗಡೆಯಾಗುತ್ತಿದೆ ಆಶೀರ್ವದಿಸಿ ಎಂದು ಶುಕ್ರವಾರ ಟ್ವೀಟ್​ ಮೂಲಕ ಸಿನಿರಸಿಕರನ್ನು ಕೇಳಿಕೊಂಡಿದ್ದಾರೆ.

1998ರಲ್ಲಿ ಉಪೇಂದ್ರ ನಿರ್ದೇಶನದ “ಎ” ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್​ವುಡ್​ಗೆ ಗುರುಕಿರಣ್​ ಪದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ವಿಭಿನ್ನ ರೀತಿಯ ಹಾಡುಗಳನ್ನು ನೀಡಿ ಚಿತ್ರರಂಗದಲ್ಲಿ ಹೊಸತನ ತಂದಂತಹ ಕೀರ್ತಿ ಗುರುಗೆ ಸಲ್ಲುತ್ತದೆ. ಅಲ್ಲಿಂದ ಹಿಂದೆ ತಿರುಗಿ ನೋಡದ ಗುರುಕಿರಣ್​ ಬ್ಯಾಕ್​ ಟು ಬ್ಯಾಕ್​ ಯಶಸ್ವಿ ಚಿತ್ರಗಳನ್ನು ನೀಡಿದರು.

‘ಎ’ ಸಿನಿಮಾದಿಂದ ಸಂಗೀತ ಜರ್ನಿ ಶುರುಮಾಡಿದ ಗುರುಕಿರಣ್​ ಉಪೇಂದ್ರ, ಅಸುರ, ಮಜ್ನು, ಅಪ್ಪು, ನಿನಗಾಗಿ, ಧ್ರುವ, ಹಾಲಿವುಡ್​, ಕುಟುಂಬ, ಅಭಿ, ಪಾರ್ಥ, ಗೋಕರ್ಣ, ಕಂಠಿ, ಓಂಕಾರ, ಆಪ್ರಮಿತ್ರ, ಮೌರ್ಯ, ಸತ್ಯ ಇನ್​ ಲವ್​, ಜೋಗಿ ಹಾಗೂ ಆಪ್ತ ರಕ್ಷಕ ಸೇರಿ ಹಲವು ಯಶಸ್ವಿ ಚಿತ್ರಗಳಿಗೆ ಮ್ಯೂಸಿಕ್​ ನೀಡಿದ್ದಾರೆ.

ಮೈಲಾರಿ ಚಿತ್ರದ ಉತ್ತಮ ಸಂಗೀತ ನಿರ್ದೇಶನಕ್ಕಾಗಿ 2011ರ ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ ಆಪ್ತಮಿತ್ರ ಚಿತ್ರಕ್ಕಾಗಿ 2004ರಲ್ಲಿ ಫಿಲ್ಮಫೇರ್​ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗುರುಕಿರಣ್​ ಪಡೆದುಕೊಂಡಿದ್ದಾರೆ.

ಸದ್ಯ ಆಯುಷ್ಮಾನ್ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ನೂರು ಚಿತ್ರವನ್ನು ಗುರುಕಿರಣ್​ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಮುಂಬರುವ ದಶರಥ ಹಾಗೂ ಬುದ್ಧಿವಂತ- 2 ಚಿತ್ರಕ್ಕೆ ಮ್ಯೂಸಿಕ್​ ನೀಡುವ ಮೂಲಕ ತಮ್ಮ ಸಂಗೀತ ಜರ್ನಿಯನ್ನು ಮುಂದುವರಿಸಿದ್ದಾರೆ. ಸಂಗೀತ ಮಾತ್ರದಲ್ಲದೇ ಹಾಡುಗಳಿಗೆ ಧ್ವನಿ ನೀಡುವ ಮೂಲಕ ರಂಜಿಸಿದ್ದಾರೆ. ಕೆಲ ಚಿತ್ರದಲ್ಲಿ ಅತಿಥಿ ಪಾತ್ರಗಳನ್ನು ಮಾಡುವ ಮೂಲಕ ಗುರುಕಿರಣ್​ ಎಲ್ಲರ ಮನದಲ್ಲಿ ನೆಲೆಸಿದ್ದಾರೆ. ಇವರ ಮನರಂಜನೆಯ ಕಾಯಕ ಹೀಗೆ ಮುಂದುವರಿಯಲಿ ಎಂಬುದು ಎಲ್ಲರ ಆಶಯವಾಗಿದೆ.

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...