ಗುರುಗುಂಟಾ: ವೀರಶೈವ ಲಿಂಗಾಯತ ಸಮಾಜದಿಂದ ಗ್ರಾಮದಲ್ಲಿ ಗುರುವಾರ ಬಸವ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.

ಸರ್ವಾಲಂಕೃತ ವಾಹನದಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆಗೆ ಅಮರೇಶ್ವರ ದೇವಸ್ಥಾನದ ಅಭಿನವ ಗಜದಂಡ ಶಿವಾಚಾರ್ಯರು ಹಾಗೂ ರಾಜಾ ಸೋಮನಾಥ ನಾಯಕ ಚಾಲನೆ ನೀಡಿದರು. ಸುಮಂಗಳೆಯರ ಕುಂಭ-ಕಳಸ, ಸಕಲ ವಾದ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಗುಂಡಣ್ಣ ಅರಳಿ, ವಿಶ್ವನಾಥ ಪಟ್ಟಣಶೆಟ್ಟಿ, ಚನ್ನಯ್ಯಸ್ವಾಮಿ, ಹೊರಪೇಟಮಠ, ಅಮರಯ್ಯ ಸ್ವಾಮಿ, ಮಲ್ಲಿಕಾರ್ಜುನ್ ಕಳಸದಗುಡಿ, ದೇವರಾಜ್ ಯಲಿಗಾರ್, ಅಮರೇಶ ಜಾನೇಕಲ್, ವಕೀಲರಾದ ನಾಗರಾಜ ಯಲಿಗಾರ್, ಶರಣಬಸವ ಪಟ್ಟಣಶೆಟ್ಟಿ, ಸಂಗಮೇಶ ಪಟ್ಟಣಶೆಟ್ಟಿ, ಎ.ಎನ್. ತಾತ, ಪಂಚಾಕ್ಷರಸ್ವಾಮಿ, ಬಸವರಾಜ ಸಜ್ಜನ್, ಚಂದ್ರಪ್ಪ ಹಡಪದ, ಬಸವರಾಜ ಬಲ್ಲಟಗಿ, ಸೋಮುಸ್ವಾಮಿ, ಆದೇಶ ಹಡಪದ, ಅಮರೇಶ ಹಡಪದ, ಮಹೇಶಗೌಡ ಇತರರಿದ್ದರು.