ಹೆಂಡತಿಯೊಂದಿಗೆ ಜಗಳವಾಡಿಕೊಂಡ ಆಸಾಮಿ 13 ವರ್ಷದ ಮಗಳಿಗೆ ಮಾಡಿದ್ದನ್ನು ಕೇಳಿದರೆ ಬೆಚ್ಚಿಬೀಳ್ತೀರ…

ನವದೆಹಲಿ: ಹೆಂಡತಿಯೊಂದಿಗೆ ಜಗಳವಾಡಿಕೊಂಡ ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದವನ ಮೇಲೆ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಈ ಕುರಿತು ಸಂತ್ರಸ್ತೆಯ ತಾಯಿ ದೂರನ್ನು ದಾಖಲಿಸಿದ್ದು, 39 ವರ್ಷದ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಶೋಧಕಾರ್ಯ ಕೈಗೊಂಡಿದ್ದಾರೆ.

ಗುರುಗ್ರಾಮದ ಡಿಎಲ್‌ಎಫ್‌ 3 ಪ್ರದೇಶದಲ್ಲಿ ಕುಟುಂಬ ವಾಸವಾಗಿತ್ತು. ಚಾಲಕನಾಗಿದ್ದ ಆರೋಪಿಯ ಹೆಂಡತಿ ಮನೆಗೆಲಸ ಮಾಡಿಕೊಂಡಿದ್ದಳು. ಏ. 19ರಂದು ಮನೆಗೆ ಬಂದಾತ ನನ್ನೊಂದಿಗೆ ಜಗಳವಾಡಿ ಬಾಟಲ್‌ನಿಂದ ತಲೆಗೆ ಹೊಡೆದ. ಬಳಿಕ ಕೋಪಗೊಂಡು ಟೆರೇಸ್‌ ಮೇಲೆ ಹೋಗಿ ಮಗಳನ್ನು ಊಟ ಬಡಿಸುವಂತೆ ಕೇಳಿದ್ದಾನೆ. ಮುಂಜಾನೆ ತನ್ನ ಮೇಲೆ ಅತ್ಯಾಚಾರವಾಗಿರುವ ಕುರಿತು ಮಗಳು ವಿಚಾರ ತಿಳಿಸಿದಳು. ಆದರೆ ತನ್ನ ಪತಿ ಅಲ್ಲಿಂದ ಪರಾರಿಯಾಗಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಹಲವಾರು ಬಾರಿ ಕರೆ ಮಾಡಿದರೂ ಆತ ಕರೆಯನ್ನು ಸ್ವೀಕರಿಸಿಲ್ಲ. ನಿರಂತರ ಪ್ರಯತ್ನಿಸಿದಾಗ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಮತ್ತೊಮ್ಮೆ ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಹಾಗಾಗಿ ಪೊಲೀಸರಿಗೆ ವಿಷಯ ತಿಳಿಸಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಮದ್ಯದ ಚಟ ಹೊಂದಿದ್ದ ಆರೋಪಿ ದಿನನಿತ್ಯ ಕುಡಿದು ಹೆಂಡತಿ ಮಗಳನ್ನು ಹೊಡೆಯುತ್ತಿದ್ದ. ಸದ್ಯ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *