ಧಾರವಾಡ: ಇಲ್ಲಿಯ ಭಾರತಿನಗರದಲ್ಲಿರುವ ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಮದನ್ ಇ.ಜಿ. ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈ ವರ್ಷದ ಧ್ಯೇಯವಾಗಿರುವ ಸುವರ್ಣ ಭಾರತ -ಪರಂಪರೆ ಮತ್ತು ಪ್ರಗತಿ ಎಂಬ ವಿಷಯದಡಿಯಲ್ಲಿ ದೇಶಕ್ಕಾಗಿ ಸೈನಿಕರು ಮಾಡುತ್ತಿರುವ ಸೇವೆಯನ್ನು ಸ್ಮರಿಸಿದರು.
ದೇಶದ ಭವಿಷ್ಯದ ನಾಯಕರಾಗುವ ವಿದ್ಯಾರ್ಥಿಗಳು ಶಿಸ್ತನ್ನು ಬೆಳೆಸಿಕೊಂಡು ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದರು.
ಕಾಲೇಜಿನ ಉಪಪ್ರಾಚಾರ್ಯ ಮಹಾಲಿಂಗ ಕಮತಗಿ, ಆಡಳಿತಾಧಿಕಾರಿ ಸಾಜೀದ್, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಕುಮಾರ ಪೂಜಾರ ನಿರೂಪಿಸಿದರು.