More

  ಗುರು-ಶಿಷ್ಯರ ಸಂಬಂಧ ಎಲ್ಲಕ್ಕಿಂತ ಮಿಗಿಲು

  ಹುಬ್ಬಳ್ಳಿ: ಸಂಕಲ್ಪ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ತೃತೀಯ ವರ್ಷದ ಸಂಭ್ರಮಾಚರಣೆ ನಿಮಿತ್ತ ಇಲ್ಲಿಯ ಜೆ.ಸಿ. ನಗರದ ನೌಕರ ಭವನದಲ್ಲಿ ಭಾನುವಾರ ಸಂಕಲ್ಪ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
  ಶಾಸ್ತ್ರೀಯ ನೃತ್ಯ ಗುರು ವಿದುಷಿ ವನಿತಾ ಮಹಾಲೆ ಉದ್ಘಾಟಿಸಿ ಮಾತನಾಡಿ, ಗುರು-ಶಿಷ್ಯರ ಸಂಬಂಧ ಎಲ್ಲಕ್ಕಿಂತ ಮಿಗಿಲು. ಗುರು ಪರಂಪರೆ ಉಳಿದಿರುವುದು ಕಲಾವಿದರಲ್ಲಿ ಮಾತ್ರ. ಕಲೆಯನ್ನು ಎಷ್ಟು ಗಾಢವಾಗಿ ಪ್ರೀತಿಸಬಲ್ಲರೋ ಅಷ್ಟು ಗುರು-ಶಿಷ್ಯರ ಸಂಬಂಧ ಗಟ್ಟಿಯಾಗಿ ನೆಲೆಗೊಳ್ಳಲಿದೆ. ಕಲಾವಿದರ ಜತೆಗೆ ಪೋಷಕರೂ ಕಲೆಯನ್ನು ಉಳಿಸಿಬೆಳೆಸಬೇಕು ಎಂದರು.
  ಡಾ. ಪ್ರಕಾಶ ಮಲ್ಲಿಗವಾಡ ಮಾತನಾಡಿ, ಜನಪದ ಮತ್ತು ಶಾಸ್ತ್ರೀಯ ನೃತ್ಯದ ಸಮ್ಮಿಲವು ಹುಬ್ಬಳ್ಳಿಯಲ್ಲಿ ಆಗಿದೆ. ಇದಕ್ಕೆ ಸಂಸ್ಥೆಯೂ ಕೈ ಹಾಕಿದೆ. ಹಿರಿಯ ಕಲಾವಿದರ ಮಾರ್ಗದರ್ಶನ ಪಡೆದು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
  ಪರಶುರಾಮ ಹರಿಕೇರಿ ಮಾತನಾಡಿದರು.
  ಸಂಸ್ಥೆಯ ಮುಖ್ಯಸ್ಥೆ ಸಹನಾ ಬನ್ನಿಗಿಡದ ವಾರ್ಷಿಕ ವರದಿ ಓದಿದರು.
  ಸಂಕಲ್ಪ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ, ಜನಪದ ನೃತ್ಯ, ವಚನ ನೃತ್ಯಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
  ಪ್ರಮುಖರಾದ ಪ್ರಶಾಂತ ಭಟ್, ನಾಗೇಂದ್ರ ಬನ್ನಿಗಿಡದ, ಪ್ರವೀಣ ಬಡಿಗೇರ, ಪೃಥ್ವಿ ಬನ್ನಿಗಿಡದ, ಮಮತಾ ಮಂಡಗಳ್ಳಿ, ಸಾಲಿಯಾನ ಸಂತೋಷ, ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts