ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಅಂದ್ರು ನಿರ್ದೇಶಕ ಗುರುಪ್ರಸಾದ್​

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ನಟ, ನಿರ್ದೇಶಕರ ವಿರುದ್ಧ ಬರುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಗುರುಪ್ರಸಾದ್​ ಮೀ ಟೂ ಬಗ್ಗೆ ನಾನ್​ ಬಾಯ್ಬಿಟ್ರೆ ಏನೇನೋ ಆಗುತ್ತೆ ಎಂದು ಹೇಳಿದ್ದಾರೆ.

ಆರೋಪ ಮಾಡಿರುವವರು ಅವರು ಮಾಡಿರುವುದನ್ನು ಅನುಭವಿಸುತ್ತಾರೆ. ನಾನು ಬಾಯ್ ಬಿಟ್ರೆ ಏನೇನೋ ಆಗುತ್ತೆ. ವಾದಗಳೇ ಮಾಡ್ತೀವಿ ಅಂದ್ರೆ ತುಂಬಾ ಮಾತನಾಡುತ್ತೀವಿ ಎಂದು ಎರಡನೇ ಸಲ, ಮಠ ಖ್ಯಾತಿಯ ಗುರು ಪ್ರಸಾದ್​ ಹೇಳಿದ್ದಾರೆ.

ಮಧ್ಯಂತರ ಆದೇಶ ತೀರ್ಪು ಸಾಧ್ಯತೆ
ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ ಅವರ ಮೀ ಟೂ ಕೇಸ್​ ಕುರಿತು ಇಂದು ಮಧ್ಯಂತರ ಆದೇಶ ಕುರಿತು ತೀರ್ಪು ಸಾಧ್ಯತೆಯಿದೆ. ನಗರದ ಮೇಯೊಹಾಲ್​ ಕೋರ್ಟ್​ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಅರ್ಜಿ ವಿಚಾರಣೆ ನಡೆಯಲಿದ್ದು, ಎಫ್​ಐಆರ್​ ತಡೆ ಕೋರಿ ಅರ್ಜುನ್​ ಸರ್ಜಾ ಇಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)