ಸಂಬರಗಿ: ಗುರು-ಹಿರಿಯರ ಆಜ್ಞೆ ಪಾಲಿಸಿ, ತಂದೆ-ತಾಯಿ ದೇವರು ಎಂದು ನಂಬಿ ಅವರ ಆಶೀರ್ವಾದದಿಂದ ಮುನ್ನಡೆಯಬೇಕು ಎಂದು ಹಾಲುಮತ ಗುರುಪೀಠದ ಸರೂರ ಆಗತೀರ್ಥದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ ಹೇಳಿದರು.
ಸಮೀಪದ ನಾಗನೂರು ಪಿ.ಎ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಿದ್ಧಾಶ್ರಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿವಸಿದ್ಧ ಮಹಾರಾಜರ ಸನ್ಯಾಸ ದೀಕ್ಷೆ ಹಾಗೂ ಪಟ್ಟಾಧಿಕಾರ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ತಂದುಕೊಳ್ಳಿ, ಕೆಟ್ಟ ಆಲೋಚನೆಗಳಿಂದ ದೂರವಿರಿ ಎಂದರು.
ಕಾಜಿಬೀಳಗಿಯ ಕಾಶಿಲಿಂಗೇಶ್ವರ ಮಠದ ಸದಾಲಿಂಗೇಶ್ವರ ಮಹಾರಾಜರು ಮಾತನಾಡಿ, ವೃದ್ಧಾಪ್ಯದಲ್ಲಿ ಭಗವಂತನ ನಾಮಸ್ಮರಣೆ ಮಾಡಿದರೆ ಮುಕ್ತಿ ಪಡೆಯಲು ದಾರಿ ಸಿಗುತ್ತದೆ ಎಂದರು.
ಹಾಲುಮತ ಗುರುಪೀಠದ ಸರೂರದ ಮೃತ್ಯುಂಜಯ ಶಾಸ್ತ್ರಿ, ಜಂಬಗಿಯ ಸುರೇಶ ಮಹಾರಾಜರು, ಗ್ರಾಪಂ ಉಪಾಧ್ಯಕ್ಷ ಅಶೋಕ ಬಾಬು ಮಾಣಿ, ಪಾಂಡುರಂಗ ಕಾಂಬಳೆ, ಶ್ರೀಶೈಲ ಪಾಟೀಲ, ರಮೇಶ ಪಾಟೀಲ, ಬಸುಗೌಡ ಪಾಟೀಲ, ಶ್ರೀಧರ ಚೌಗುಲೆ ಇತರರು ಇದ್ದರು.