More

    ಬೈಲಹೊಂಗಲ: ಗುರು ಕೃಪೆಯಿಂದ ಸಾರ್ಥಕತೆ

    ಬೈಲಹೊಂಗಲ: ಈಶ್ವರನ ಅನುಗ್ರಹ ಪಡೆದ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಗುರುವಿನ ಕೃಪೆ ಹೊಂದಬೇಕು ಎಂದು ಸುಕ್ಷೇತ್ರ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.

    ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದಲ್ಲಿ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ, ಸದ್ಭಕ್ತರಿಂದ ಜರುಗಿದ ತಮ್ಮ 80ನೇ ವರ್ಷದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಿದ್ಧಾರೂಢರು, ಗುರುನಾಥರೂಢರು, ದೇವರಕೊಂಡ ಅಜ್ಜನವರು, ಇಂಚಲದ ಪರಂಪರೆಯ ಶಿವಯೋಗೀಶ್ವರರು, ರೇವಯ್ಯ ಶಿವಯೋಗಿಗಳು, ಸಿದ್ಧರಾಮ ಶಿವಯೋಗಿ ಮಹಾಪುರುಷರ ತಪಸ್ಸಿನ ಶಕ್ತಿ ಇಂಚಲದಲ್ಲಿ ನೆಲೆಯೂರಿದ್ದರಿಂದ ಸತ್ಸಂಗ, ಆಧ್ಯಾತ್ಮಿಕ ಚಿಂತನೆಗಳು, ಅನ್ನ, ಜ್ಞಾನ, ವಿದ್ಯಾ ದಾಸೋಹ ಸದಾ ನಡೆಯುತ್ತ ಭಕ್ತರ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತಿವೆ ಎಂದರು.

    ಬೈಲಹೊಂಗಲ ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಕಂಚನಳ್ಳಿಯ ಸುಬ್ರಮಣ್ಯ ಸ್ವಾಮೀಜಿ, ಗುಡಸ ಈಶ್ವರಾನಂದ ಸ್ವಾಮೀಜಿ, ಕುಳ್ಳೂರು ಬಸವಾನಂದ ಸ್ವಾಮೀಜಿ, ಹಳಕಟ್ಟಿ ನಿಜಗುಣ ಸ್ವಾಮೀಜಿ, ತುಂಗಳದ ಅನಸೂಯಾತಾಯಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ತಾಯಿ ಮಾತನಾಡಿದರು.

    ಸಂಸ್ಥೆಯ ಅಧ್ಯಕ್ಷ ಡಿ.ಬಿ. ಮಲ್ಲೂರ, ಮಾಜಿ ಅಧ್ಯಕ್ಷ ಎಸ್.ಎಂ. ರಾಹುತನವರ, ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಆನಂದ ಮಾಮನಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ರಾಜು ಜನ್ಮಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಪೂಜೇರ, ಗ್ರಾಪಂ ಅಧ್ಯಕ್ಷ ಸುರೇಶ ವಾರಿ, ಎಪಿಎಂಸಿ ಸದಸ್ಯ ಬಸನಾಯ್ಕ ಮಲ್ಲೂರ, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು ಸಹಸ್ರಾರು ಸದ್ಭಕ್ತರು ಇದ್ದರು. ಶ್ರೀಗಳ ತೊಟ್ಟಿಲೋತ್ಸವ, ಮಹಾಮಂಗಳಾರತಿ ಜರುಗಿತು. ಹಡಗಿನಾಳದ ಮಲ್ಲೇಶ ಶರಣರು ನಿರೂಪಿಸಿದರು. ಶಾಲಾ ಮಕ್ಕಳಿಂದ ಸ್ವಾಗತ ಗೀತೆ, ಪ್ರಾರ್ಥನೆ ಗೀತೆ ಜರುಗಿದವು.

    ಜ.27ರಿಂದ ವಿವಿಧ ಕಾರ್ಯಕ್ರಮ

    ಜ.27 ರಿಂದ 31 ವರೆಗೆ ಜರುಗಲಿರುವ ಶ್ರೀಗಳ ಸಹಸ್ರ ಚಂದ್ರದರ್ಶನ ಮಹೋತ್ಸವ, ಶ್ರೀಗಳ ಜಯಂತಿ ಕಾರ್ಯಕ್ರಮ, ನೂತನ ದೇವಿ ಮಂದಿರದ ಉದ್ಘಾಟನೆ, ಅಂಬಾಪರಮೇಶ್ವರಿ ನವದುರ್ಗಾ ಮೂರ್ತಿ ಪ್ರತಿಷ್ಠಾಪನೆ, ಶ್ರೀಗಳ 50 ನೇ ವರ್ಷದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಪೀಠಾರೋಹಣದ ಸುವರ್ಣ ಮಹೋತ್ಸವ, ಅಖಿಲ ಭಾರತ ವೇದಾಂತ ಪರಿಷತ್ ಸುವರ್ಣ ಮಹೋತ್ಸವ, ರಜತ, ಮಹಾರಥೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಲಿದ್ದು, ದೇಶದ ವಿವಿಧ ರಾಜ್ಯಗಳ ಮಠಾಧೀಶರ, ಮಹಾತ್ಮರನ್ನು ನೋಡುವ ಭಾಗ್ಯ ಭಕ್ತರದ್ದಾಗಲಿದೆ.

    ಭಕ್ತರು ತಮ್ಮ ಸಂತೋಷ ಹಂಚಿಕೊಳ್ಳಲು, ಸಾಧು- ಸಂತರ ಸಮಾಗಮ ನೋಡಲು, ಅಧ್ಯಾತ್ಮಿಕ ಚಿಂತನೆ ಮಾಡುವ ಕಾರ್ಯಕ್ರಮ ಇದಾಗಿದೆ. ಭಕ್ತರು ಸದಾ ಸತ್ಸಂಗದಲ್ಲಿ ಪಾಲ್ಗೊಂಡು ಆದರ್ಶ ಜೀವನ ಸಾಗಿಸಬೇಕು.
    | ಡಾ.ಶಿವಾನಂದ ಭಾರತಿ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts