ಗುರು ದೇವರಿಗಿಂತ ದೊಡ್ಡವನು

Latest News

ಅಸಲಿ ಪೊಲೀಸರಿಗೆ ಸೆರೆಸಿಕ್ಕ ನಕಲಿ ಅಧಿಕಾರಿ: ಉದ್ಯಮಿಗೆ ಬೆದರಿಸಿ 24 ಲಕ್ಷ ರೂ. ಸುಲಿಗೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್​ಎಎಲ್...

ಯುವಕನ ಕೊಲೆ ಮಾಡಿದ್ದ ದಂಪತಿ ಬೆಳಗಾವಿಯಲ್ಲಿ ಸೆರೆ

ಆನೇಕಲ್: ಖಾಸಗಿ ಸಂಸ್ಥೆಯ ಉದ್ಯೋಗಿ ಭದ್ರಾವತಿಯ ಕಿರಣ್ ಕುಮಾರ್ (25) ಕೊಲೆ ಪ್ರಕರಣ ಭೇದಿಸಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆಯ ಸುರೇಖಾ (38)...

ತನ್ನದಲ್ಲದ ತಪ್ಪಿಗೆ ದಂಡ ಕಟ್ಟಿದ ಟೆಕ್ಕಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ 4 ವರ್ಷ ಕಾರು ಓಡಿಸಿದ್ದ, ಆರ್​ಟಿಒ ವಶದಲ್ಲಿ ಉದ್ಯಮಿ

ಬೆಂಗಳೂರು: ಪರಿಚಿತರೊಬ್ಬರ ಬೆನ್ಜ್ ಕಾರಿನ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು 7 ವರ್ಷಗಳಿಂದ 27 ಲಕ್ಷ ರೂ. ತೆರಿಗೆ ವಂಚಿಸಿ ಓಡಾಡುತ್ತಿದ್ದ ಮರ್ಸಿಡೀಸ್...

ಅಕ್ರಮ ಸಂಪತ್ತಿಗೆ ಅಧಿಕಾರಿಗಳ ಕಾವಲು

| ರಮೇಶ ದೊಡ್ಡಪುರ ಬೆಂಗಳೂರು ನಗರ ಪ್ರದೇಶದಲ್ಲಿ ವಸತಿ, ವಾಣಿಜ್ಯ ಪ್ರದೇಶಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ರಚಿಸಲಾಗಿರುವ ಕಾನೂನು ಪಾಲಿಸಿ ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕಬೇಕಾದ...

ಪೊಲೀಸ್ ಠಾಣೆಗಳಲ್ಲಿ ದಲಿತರ ದಿನ ಆಚರಣೆ ಕಡ್ಡಾಯ: ಪ್ರತಿ ತಿಂಗಳ 2ನೇ ಭಾನುವಾರ ಕಡ್ಡಾಯ, ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖೆ ಗರಂ

| ಕೀರ್ತಿನಾರಾಯಣ ಸಿ. ಬೆಂಗಳೂರು ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ‘ದಲಿತರ...

ಸಂಸಾರದಲ್ಲಿ ಎಲ್ಲೆಡೆ ಅಂಧಕಾರವೇ ತುಂಬಿದೆ. ಪ್ರತಿ ವ್ಯಕ್ತಿಯ ಮನ, ಜೀವನದಲ್ಲಿ ಅಂಧಕಾರ ಇದೆ. ಪ್ರತಿಜೀವಿಯೂ ಭ್ರಮಿತನಾಗಿ ಅಲೆಯುತ್ತಿದ್ದಾನೆ. ಯಾರು ಗುರುವಿನ ಉಪಾಸನೆಯನ್ನು ಮಾಡುವುದಿಲ್ಲವೋ, ಗುರು ಮನ್ನಿಸುವುದಿಲ್ಲವೋ ಅವನ ಜೀವನದಲ್ಲಿ ಸದಾ ಅಂಧಕಾರ ತುಂಬಿರುತ್ತದೆ. ಅವನ ಜೀವನದಲ್ಲಿ ಸೂರ್ಯನ ಉದಯವಾದರೂ, ಮನಸ್ಸಿನಲ್ಲಿ ಅಂಧಕಾರ ತುಂಬಿರುತ್ತದೆ.

ಈ ಜಗತ್ತಿನಲ್ಲಿ ಯಾರು ಅಲೆದಾಡುತ್ತಿದ್ದಾನೆಯೋ, ಯಾರು ದುಃಖವನ್ನು ಅನುಭವಿಸುತ್ತಿದ್ದಾನೆಯೋ, ಯಾರಿಗೆ ’ಗುರಿಯಿಲ್ಲದಂತಾಗಿರುತ್ತದೆಯೋ ಅದು ಕೇವಲ ಗುರುವನ್ನು ಮನ್ನಿಸದಿದ್ದ(ಒಪ್ಪದಿದ್ದ) ಕಾರಣದಿಂದ ಆಗಿದೆ. ಗುರುವಿದ್ದರೆ ನಮ್ಮ ಬಳಿ ಎಲ್ಲವೂ ಇದ್ದ ಹಾಗೆ. ಗುರುವಿಲ್ಲದಿದ್ದರೆ _ ಜೀವನವು ದುಃಖಮಯ, ಅಂಧಕಾರಮಯವಾಗಿರುತ್ತದೆ. ವ್ಯಕ್ತಿಯು ಗುರುವಿನ ಹೊರತು ದಿಗ್ಭ್ರಮಿತನಾಗುತ್ತಾನೆ. ದಿಕ್ಕಿಲ್ಲದವನಂತಾಗುತ್ತಾನೆ. ಗುರುವಿನ ಕಾರಣದಿಂದಲೇ ನಮ್ಮ ಜೀವನದಲ್ಲಿ ಸನ್ಮಾರ್ಗ, ಮೋಕ್ಷ ಮಾರ್ಗಗಳು ಪ್ರಶಸ್ತವಾಗುತ್ತದೆ. ಗುರುವು ದೇವರಿಗಿಂತಲೂ ದೊಡ್ಡವನು ಎಂದು ಹೇಳಲಾಗುತ್ತದೆ.

ರಾಗ-ದ್ವೇಷ ರಹಿತ, ರಾಜನೀತಿಗಳಿಂದ ಹೊರತಾದ, ಸ್ವಾರ್ಥರಹಿತರಾದ ಗುರುವೇ ಸರಿಯಾದ ಗುರಿ ತೋರುವವರಾಗುತ್ತಾರೆ. ರಾಗ- ದ್ವೇಷ ಸಹಿತರಾದ, ಸ್ವಾರ್ಥಿ ಗುರುವು ಎಂದೂ ಸರಿಯಾದ ದಾರಿ ತೋರುವುದಿಲ್ಲ. ಯಾರು ಜ್ಞಾನ-ಧ್ಯಾನದಲ್ಲಿ ಲೀನರಾಗಿರುತ್ತಾರೋ, ವಿಷಯಾಸಕ್ತಿಗಳಿಂದ ರಹಿತರಾಗಿರುತ್ತಾರೋ, ಆಡಂಬರ, ಪರಿಗ್ರಹಗಳಿಂದ ರಹಿತರಾಗಿರುತ್ತಾರೋ, ನಿಜವಾದ ಅರ್ಥದಲ್ಲಿ ಅವರೇ ಗುರು, ಸದ್ಗುರುವಾಗಿದ್ದಾರೆ. ಯಾರು ಎಲ್ಲರಿಗೂ ಸುಜ್ಞಾನವನ್ನು ನೀಡುತ್ತಾರೋ ಅವರು ಸದ್ಗುರುವಾಗಿದ್ದಾರೆ. ಯಾರು ಎಲ್ಲರಿಗೂ ದುಃಖದಿಂದ ಮುಕ್ತರಾಗುವುದನ್ನು ತಿಳಿಸುತ್ತಾರೋ ಅವರು ಸದ್ಗುರುವಾಗಿದ್ದಾರೆ. ಯಾರು, ಯಾರನ್ನೇ ಆಗಲಿ ದಾರಿ ತಪ್ಪುವುದನ್ನು ತಡೆಯುತ್ತಾರೋ ಅವರು ಸದ್ಗುರುಗಳಾಗಿದ್ದಾರೆ.

ಯಾರು ಪ್ರಪಂಚದಿಂದ, ದುಃಖದಿಂದ. ದಾರಿ ತಪ್ಪುವುದರಿಂದ ನಮ್ಮನ್ನು ರಕ್ಷಿಸುತ್ತಾರೋ ಅವರೇ ಸದ್ಗುರುಗಳಾಗಿದ್ದಾರೆ. ಯಾರು ಜ್ಞಾನ ನೀಡುತ್ತಾರೋ ಅವರು ಸದ್ಗುರುವಾಗಿದ್ದಾರೆ, ಯಾರು ಶಕ್ತಿ ನೀಡುತ್ತಾರೋ ಅವರು ಸದ್ಗುರುವಾಗಿದ್ದಾರೆ. ಯಾರು ಸಂಭಾಳಿಸುತ್ತಾರೆಯೋ ಅವರು ಸದ್ಗುರುವಾಗಿದ್ದಾರೆ. ಯಾರು ದೃಷ್ಟಿ ನೀಡುತ್ತಾರೋ ಅವರು ಸದ್ಗುರುವಾಗಿದ್ದಾರೆ. ಯಾರು ಗುರಿ ತೋರುತ್ತಾರೋ ಅವರು ಸದ್ಗುರುವಾಗಿದ್ದಾರೆ. ರಾಗ, ದ್ವೇಷ, ದುರ್ವ್ಯಸನ, ದುರಾಚಾರಯುಕ್ತರಾದವರು ಗುರುವಾಗಲು ಸಾಧ್ಯವಿಲ್ಲ ವಿಷಯ-ಕಷಾಯಯುಕ್ತರಾದವರು ಸದ್ಗುರುವಾಗಲು ಸಾಧ್ಯವಿಲ್ಲ.

ಪಂಚಮ ಕಾಲದ ವಿಷಮ ಕಾಲದಲ್ಲಿಯೂ ವಿಷಯಾಸಕ್ತಿಯಿಂದ ಅತೀತರಾದ ಗುರುವಿನ ದರ್ಶನವಾಗುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. ಈ ಕಲಿಕಾಲದಲ್ಲಿ ಚಿತ್ತವು ಚಂಚಲತೆಯಿಂದಿರುತ್ತದೆ, ಶರೀರವು ಆಹಾರಾಸಕ್ತಿ ಹೊಂದಿರುತ್ತದೆ, ಇಂಥದರಲ್ಲಿ ದಿಗಂಬರ ಮುನಿಗಳ ದರ್ಶನವಾಗುತ್ತಿರುವುದು. ಎಂತಹ ಚಮತ್ಕಾರವಾಗಿದೆ. ಇವರ ದರ್ಶನದಿಂದ ತೀರ್ಥಕ್ಷೇತ್ರದ ದರ್ಶನವಾದಂತೆ, ಇವರಾದರೋ ನಡೆದಾಡುವ ತೀರ್ಥಕ್ಷೇತ್ರವಾಗಿದ್ದಾರೆ. ಉಳಿದಂತೆ ತೀರ್ಥಕ್ಷೇತ್ರವು ಜಡತೀರ್ಥವಾಗಿದೆ.

ಸೌಭಾಗ್ಯದ ವಿಷಯವೆಂದರೆ. ನಾವು ಗುರುಪೂರ್ಣಿಮೆಯ ದಿನದಂದು ಕಾಡಿನಲ್ಲಿ ಇದೆಲ್ಲವನ್ನೂ ನೋಡುತ್ತಿದ್ದೇವೆ, ಪರ್ವ. ಆಚರಿಸುತ್ತಿದ್ದೇವೆ. ಭಗವಾನ್ ಮಹಾವೀರರು ತಮ್ಮ 30ನೇ ವರ್ಷದಲ್ಲಿ ದೀಕ್ಷೆ ಕೈಗೊಂಡರು, 12 ವರ್ಷ ತಪ ಆಚರಿಸಿದರು. ಕೇವಲ ಜ್ಞಾನವಾದ ನಂತರ ಸಮವಸರಣದ ರಚನೆಯಾಯಿತು, ಆದರೆ ದಿವ್ಯಧ್ವನಿ ಹೊರಡಲಿಲ್ಲ. ಎಲ್ಲ ಭವ್ಯ ಜೀವಿಗಳೂ ಸಮವಸರಣಕ್ಕೆ ಧಾವಿಸುತ್ತಿದ್ದರು. ತೀರ್ಥಂಕರ ಭಗವಾನರಿಗೆ ಕೇವಲ ಜ್ಞಾನವಾದರೂ ಅವರ ಧ್ದನಿ ಹೊರಟಿಲ್ಲ.

ಆದುದರಿಂದ ಆಚಾರ್ಯ ವಿದ್ಯಾಸಾಗರರು ಹೇಳುತ್ತಿರುತ್ತಾರೆ. ದೇವ-ಶಾಸ್ತ್ರ-ಗುರುವು ಹೀಗಿರಬೇಕು. ಗುರುವಿಗೆ ಶಿಷ್ಯ ದೊರೆಯವ ತನಕವೂ ಅವರ ಧ್ವನಿ ಹೊರಡುವುದಿಲ್ಲ. ತೀರ್ಥಂಕರ ಭಗವಾನರ ಜ್ಞಾನದ ನಂತರ ಅವರ ಸರ್ವಾಂಗಗಳಿಂದಲೂ ಉಪದೇಶವು ಹೊರಡುತ್ತಿತ್ತು. ಆದರೆ ಅದನ್ನು ಪ್ರತಿ ಜೀವಿಯ ಜ್ಞಾನದ ಅನುಸಾರ ತಿಳಿಸುವವರು ಯಾರು ಇರಲಿಲ್ಲ.

- Advertisement -

Stay connected

278,673FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...