ಏಷ್ಯನ್​​ ಕುಸ್ತಿ ಚಾಂಪಿಯನ್​​ಶಿಪ್​​ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಗುರ್​​ಪ್ರೀತ್​

ಕ್ಸಿಯಾನ್​​: ಭಾರತದ ಯುವ ಕುಸ್ತಿ ಪಟು ಗುರ್​​ಪ್ರೀತ್​ ಸಿಂಗ್​​ ಅವರು ಏಷ್ಯನ್​​​ ಕುಸ್ತಿ ಚಾಂಪಿಯನ್​​ಶಿಪ್​​ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಶನಿವಾರ ಇಲ್ಲಿ ನಡೆದ ಪುರುಷರ 77 ಕೆ.ಜಿ ಗ್ರೀಕೊ ರೋಮನ್​​​ ಶೈಲಿಯಲ್ಲಿ ಗುರುಪ್ರೀತ್​​ ಸಿಂಗ್​​ ರಜತ ತಮ್ಮದಾಗಿಸಿಕೊಂಡರು. ಫೈನಲ್​​​ನಲ್ಲಿ ಕೊರಿಯಾದ ಹೈಯಾನೊ ಕಿಮ್​​​​​ ಎದುರು 0-8 ಅಂತರಗಳಿಂದ ಸೋಲಿಗೆ ಶರಣಾಗಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾದರು.

ಟೂರ್ನಿಯ ಆರಂಭದಿಂದಲೂ ಯಶಸ್ವಿ ಹೋರಾಟ ನಡೆಸುವಲ್ಲಿ ಸಫಲವಾಗಿದ್ದ ಗುರ್​​ ಪ್ರೀತ್​ ಅಂತಿಮ ಸುತ್ತಿನಲ್ಲಿ ನೀರಸ ಆಟವಾಡಿದ್ದಾರೆ. ಕ್ವಾರ್ಟರ್​​ ಫೈನಲ್​ನಲ್ಲಿ ಕತಾರ್​​ನ ಭಕಿತ್​​ ಶರೀಫ್​​​​​​​​​​​ ಕ ಬಾದ್ರಾ(10-0) ಅವರನ್ನು ಮಣಿಸಿದರೆ, ನಾಲ್ಕರ ಘಟ್ಟದಲ್ಲಿ ಕಜಕಿಸ್ತಾನದ ತಮೀರ್​​ಲಾನ್​​​​ (6-5) ಅವರನ್ನು ಸೋಲಿಸಿ ಫೈನಲ್​​ ಪ್ರವೇಶಿಸಿದ್ದರು.

130 ಕೆ.ಜಿ ಕಂಚಿನ ಪದಕ ಪಂದ್ಯದಲ್ಲಿ ಭಾರತದ ಪ್ರೇಮ್​​​​​​​​​​​ ಅವರು ಕಜಕಿಸ್ತಾನದ ದಮೀರ್​​​​​ ಅವರ ಎದುರು ಹೋರಾಟ ನಡೆಸಲಿದ್ದಾರೆ. ಇನ್ನೂ ಭಾರತದ ಮನ್​​ಜೀತ್​​ ಮತ್ತು ವಿಕ್ರಮ್​​​​​ ಕ್ವಾರ್ಟರ್​​ ಫೈನಲ್​​ನಲ್ಲಿ ಪರಾಭವಗೊಂಡಿದ್ದಾರೆ. (ಏಜನ್ಸೀಸ್​​​​​)