ತಾಯಿ ಸತ್ತ ಬಳಿಕ 8 ವರ್ಷದ ಮಗಳಿಗೆ ಅಪ್ಪನಿಂದಲೇ…, ಬಾಲಕಿ ಬಿಚ್ಚಿಟ್ಟ ಕರಾಳ ಕತೆ

ಗುರುಗ್ರಾಮ: 8 ವರ್ಷದ ಮಗಳ ಮೇಲೆ ಹಲವಾರು ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ಕನೇ ತರಗತಿ ಓದುತ್ತಿದ್ದ ಬಾಲಕಿಯನ್ನು ತಂದೆಯೇ ಲೈಂಗಿಕ ಕಿರುಕುಳ ನೀಡಲು ಬಳಸಿಕೊಂಡ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಬಾಲಕಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡಿದ್ದ ನೆರೆಮನೆಯವರು ವಿಚಾರಿಸಿದಾಗ ತಂದೆಯಿಂದಲೇ ತಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ಎಂದು ಅಪರಾಧ ವಿಭಾಗದ ಎಸಿಪಿ ಶಮ್ಶೇರ್‌ ಸಿಂಗ್ ತಿಳಿಸಿದ್ದಾರೆ.

ಪಟೌಡಿ ಪ್ರದೇಶದಲ್ಲಿ ತನ್ನ ತಂದೆಯೊಂದಿಗೆ ವಾಸವಾಗಿದ್ದ ಬಾಲಕಿಯು ತನ್ನ ತಾಯಿ ಸತ್ತಂದಿನಿಂದಲೂ ತಂದೆಯಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಪ್ರತಿ ರಾತ್ರಿ ಕುಡಿದು ಬರುತ್ತಿದ್ದ ತಂದೆಯು ಹಲವಾರು ತಿಂಗಳಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ.

ಇದೀಗ ಬಾಲಕಿಯನ್ನು ರಕ್ಷಿಸಲಾಗಿದ್ದು, ಮಕ್ಕಳ ನಿಗಾ ಘಟಕಕ್ಕೆ ಕೌನ್ಸೆಲಿಂಗ್‌ಗಾಗಿ ಕಳುಹಿಸಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *