ಮಗಳ ಸ್ನೇಹಿತೆಯನ್ನೇ ಅತ್ಯಾಚಾರ ಮಾಡಿದ ವ್ಯಕ್ತಿ ಬಂಧನ

ಗುಡಗಾಂವ್ : 45 ವರ್ಷದ ಉದ್ಯಮಿಯೊಬ್ಬನನ್ನು ತಮ್ಮ ಮಗಳ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

18 ವರ್ಷದ ಯುವತಿ ಗುರುವಾರ ರಾತ್ರಿ ತನ್ನ ಗೆಳತಿಯ ಮನೆಯಲ್ಲಿ ತಂಗಿದ್ದಾಗ ಆರೋಪಿ ಆಕೆಗೆ ತಂಪು ಪಾನೀಯವನ್ನು ನೀಡಿ ಆತನ ಕೊಠಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ರಜೆಯ ಮೇರೆಗೆ ಬಂದಿದ್ದಳು. ಈ ವೇಲೆ ಆರೋಪಿಯ ಮಗಳು ಮನೆಗೆ ಬರುವಂತೆ ಆಹ್ವಾನ ನೀಡಿದ್ದಳು ಎಂದು ಗುಡಗಾಂವ್‌ ಪೊಲೀಸ್‌ ಪಿಆರ್‌ಒ ಸುಭಾಶ್‌ ಬೋಕನ್‌ ತಿಳಿಸಿದ್ದಾರೆ.

ಈ ಕುರಿತು ಯುವತಿ ಮಹಿಳಾ ಪೊಲೀಸ್‌ ಠಾಣೆಗೆ ಆರೋಪಿ ವಿರುದ್ಧ ಅಚ್ಯಾಚಾರದ ಪ್ರಕರಣ ದಾಖಲಿಸಿದ್ದಾಳೆ. ಅದಾದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)