More

  ಡೆಡ್ಲಿ ಅಫೇರ್ ಮೂಲಕ ಗುಂಜನ್ ಎಂಟ್ರಿ

  ಬೆಂಗಳೂರು: ಸ್ಯಾಂಡಲ್​ವುಡ್​ಗೆ ಮಾಡೆಲಿಂಗ್ ಮತ್ತಿತರ ಗ್ಲಾಮರ್ ಕ್ಷೇತ್ರಗಳಿಂದ ಬರುವವರ ಸಂಖ್ಯೆಯೇ ಹೆಚ್ಚು. ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡುವ ಕನಸು ಹೊತ್ತವರಿಗೆ ಗ್ಲಾಮರ್ ಕ್ಷೇತ್ರ ಉತ್ತಮ ವೇದಿಕೆ ಕೂಡ. ಇಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡವರು ಮಾಡೆಲಿಂಗ್ ಚೆಲುವೆ ಗುಂಜನ್ ಅರಸ್. ರೂಪದರ್ಶಿ ಆಗಿ ಹೆಸರು ಮಾಡಿರುವ ಇವರು, ‘ಡೆಡ್ಲಿ ಅಫೇರ್’ ಚಿತ್ರದ ನಾಯಕಿ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದಿದ್ದಾರೆ.

  ಬಾಂಬೆ ಮೂಲದ ಗುಂಜನ್ ಅರಸ್, ‘ಗಂದಿಬಾತ್’ ವೆಬ್​ಸಿರೀಸ್, ತೆಲುಗಿನ ‘ವೈಫ್ ಐ’ ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಸೆಲೆಬ್ರೆಟಿಗಳೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರಬೇಕು ಎಂಬ ಮಾತಿದೆ. ಇದನ್ನು ಗುಂಜನ್ ಅರಸ್ ಚಾಚೂತಪ್ಪದೇ ಪಾಲಿಸಿದ್ದಾರೆ. ಅದರಲ್ಲೂ ಇನ್​ಸ್ಟಾಗ್ರಾಮ್ಲ್ಲಿ ಹೆಚ್ಚು ಸಕ್ರಿಯರಾಗಿರುವ ಇವರು ಲಕ್ಷಾಂತರ ಫಾಲೋವರ್ಸ್ ಹೊಂದಿ ‘ಇನ್ಸ್​ಸ್ಟಾಗ್ರಾಂ ಸ್ಟಾರ್’ ಎನಿಸಿಕೊಂಡಿದ್ದಾರೆ. 2018ರಲ್ಲಿ ‘ಯೂಥ್ ಐಕಾನ್ ಆಫ್ ದಿ ಇಯರ್’ ಅವಾರ್ಡ್ ಪಡೆದಿರುವ ಗುಂಜನ್, ಯುನಿಸೆಫ್ ಪೀಸ್ ಅಂಬಾಸಡರ್ ಕೂಡ ಆಗಿದ್ದರು. ಅಲ್ಲದೆ, ಸಾಕಷ್ಟು ಆಡ್ ಫಿಲ್ಮ್ ಗಳಲ್ಲೂ ಗುರುತಿಸಿಕೊಂಡಿದ್ದಾರೆ. ‘ಡೆಡ್ಲಿ ಅಫೇರ್’ ಚಿತ್ರದಲ್ಲಿ ಇವರದ್ದು ಸೈಕೋ ತರಹದ ಪಾತ್ರ. ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಗುಂಜನ್ ಎಂತಹ ಪಾತ್ರಕ್ಕೂ ಸೈ ಎಂದಿದ್ದಾರೆ.

  ಚಿತ್ರಕ್ಕೆ ರಾಜೇಶ್ ಮೂರ್ತಿ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ನಿತಿನ್​ಕುಮಾರ್ ಸಂಗೀತ, ವಿನೋದ್ ಛಾಯಾಗ್ರಹಣ, ಮಹೇಶ್ವರಪ್ಪ ಸಾಹಿತ್ಯ, ಸತೀಶ್ ಸಂಕಲನ ಈ ಚಿತ್ರಕ್ಕಿದೆ. ಗುಂಜನ್ ಸೇರಿ ಸ್ವಪನ್ ಕೃಷ್ಣ, ರಾಹುಲ್ ಸೋಮಣ್ಣ, ರಾಜೇಶ್ ಮಿಶ್ರಾ, ಮಾಸ್ಟರ್ ವಿಶೃತ್ ಪ್ರಮುಖರು ಪಾತ್ರ ವರ್ಗದಲ್ಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts