More

  ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

  ಗುಂಡ್ಲುಪೇಟೆ: ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಮರು ಸೋಮವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ಶ್ರದ್ಧಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

  ಬೆಳಗ್ಗೆ 10 ಗಂಟೆಗೆ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡ ಶ್ವೇತ ವಸ್ತ್ರಧರಿಸಿದ ಮಕ್ಕಳು, ಯುವಕರು ಹಾಗೂ ಪುರುಷರು ಪರಸ್ಪರ ಶುಭಾಶಯ ಕೋರಿದರು. ಮೌಲಾನ ಮುಫ್ತಿ ಜಬೀರ್ ಹಸ್ರತ್ ಸಾಬ್ ಮಾತನಾಡಿ, ತ್ಯಾಗ ಹಾಗೂ ಬಲಿದಾನದ ಆಚರಣೆಯಾದ ಬಕ್ರೀದ್ ಮನುಷ್ಯನು ಸೃಷ್ಟಿಕರ್ತನ ಆಜ್ಞಾಪಾಲಕನಾಗಿ ಒಳಿತು, ಕೆಡಕುಗಳ ಬಗ್ಗೆ ತಿಳಿಯಲು ಸ್ವಯಂ ನಿಯಂತ್ರಣ ಹೊಂದಬೇಕು ಎಂದು ತಿಳಿಸುತ್ತದೆ ಎಂದರು.

  ನಂತರ ಸಾಮೂಹಿಕ ಪ್ರಾರ್ಥನೆ ನಡೆಸಿ ಅನಾಥರು ಹಾಗೂ ಬಡವರಿಗೆ ಆಹಾರ ಮತ್ತು ವಸ್ತ್ರಗಳನ್ನು ಕೊಡುಗೆ ನೀಡಿದರು. ಧಾರ್ಮಿಕ ಮುಖಂಡರಾದ ಅಬ್ದುಲ್ ಕರೀಂ ಹಸ್ರತ್, ಜಾಮೀಯಾ ಮಸೀದಿ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

  See also  ಗೂಡ್ಸ್ ವಾಹನ ಪಲ್ಟಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts