21 C
Bengaluru
Thursday, January 23, 2020

ಒಂಟಿಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಗುಂಡ್ಲುಪೇಟೆ: ಅಪೂರ್ವ ಜೀವಸಂಕುಲ ಹೊಂದಿರುವ ತಾಲೂಕಿನ ಕಂದೇಗಾಲ ಸಮೀಪದ ಒಂಟಿಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಬೇಡ ಎಂಬ ಸ್ಥಳೀಯರ ಮನವಿಯನ್ನು ನಿರ್ಲಕ್ಷಿಸಿದ ಅಧಿಕಾರಿಗಳು ಕೇರಳ ಮೂಲದ ವ್ಯಕ್ತಿಗಳಿಗೆ ಅನುಮತಿ ನೀಡಿರುವುದು ಸುತ್ತಲಿನ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ಅಂಚಿನಲ್ಲಿರುವ ಗುಡ್ಡದ ಸಾಲಿನಲ್ಲಿ ನೂರಾರು ನೈಸರ್ಗಿಕ ಗುಹೆಗಳಿದ್ದು, ವನ್ಯಜೀವಿಗಳ ಆವಾಸಕ್ಕೆ ಯೋಗ್ಯವಾಗಿವೆ. ಅಲ್ಲದೆ ಇದೇ ಬೆಟ್ಟದ ಸಾಲಿನಲ್ಲಿ ಸಿದ್ದಪ್ಪಾಜಿಯವರ ದೇವಸ್ಥಾನವಿರುವ ಗದ್ದುಗಲ್ ಗುಹೆ, ಸ್ಕಂದಗಿರಿ ಪಾರ್ವತಾಂಬಾ ಬೆಟ್ಟ, ತ್ರಿಯಂಭಕಪುರ ಸಮೀಪದ ಕಣಿವೆ ಮಾದಪ್ಪ, ಗಣಪತಿ ದೇವಸ್ಥಾನ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ದೇವಸ್ಥಾನಗಳಿದ್ದು, ಸಮೀಪದ ಗ್ರಾಮಸ್ಥರು ವಾರ್ಷಿಕ ಆರಾಧನೆ ನಡೆಸುತ್ತಿದ್ದಾರೆ. ಸದ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಇಲ್ಲಿ ಗಣಿಗಾರಿಕೆ ನಡೆಸಲು ಕೆಲವು ವ್ಯಕ್ತಿಗಳಿಗೆ ಲೈಸೆನ್ಸ್ ನೀಡಿದ್ದು, ಬೆಟ್ಟದ ತುತ್ತತುದಿಯಲ್ಲಿರುವ ಬಂಡೆಗಳಿಗೂ ಸಿಡಿಮದ್ದು ಇಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ಪ್ರಾರಂಭಿಸುವ ಮೊದಲು ಸಮೀಪದ ಪಾರ್ವತಾಂಬಾ ದೇವಸ್ಥಾನದ ಆವರಣದಲ್ಲಿರುವ ಕೊಳದಲ್ಲಿ ನೀರು ಉಕ್ಕಿಹರಿದು ಅಂತರಗಂಗೆಯಲ್ಲಿ ಸೇರುತ್ತಿತ್ತು. ಅಲ್ಲದೆ ಒಂಟಿಗುಡ್ಡದ ಬಂಡೆಯಲ್ಲಿನ ಗುಂಬಗುಳಿ ಎಂಬ ಕುಳಿಯಲ್ಲಿ ಯಾವಾಗಲೂ ನೀರು ದೊರಕುತ್ತಿತ್ತು. ಕಡು ಬೇಸಿಗೆಯಲ್ಲಿಯೂ ಮೇಕೆಗಳು, ದನಗಾಹಿಗಳು ಇಲ್ಲಿನ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದರು. ಸುತ್ತಲಿನ ರೈತರು ಗುಂಬೆ(ಮಣ್ಣಿನ ಮಡಿಕೆ)ಯಲ್ಲಿ ಜಮೀನುಗಳಿಗೆ ಕೊಂಡೊಯ್ಯುತ್ತಿದ್ದರು.

ಸುಮಾರು 10 ವರ್ಷಗಳ ಕಾಲ ಗಣಿಗಾರಿಕೆ ನಡೆಸಿ ಸಿಕ್ಕಸಿಕ್ಕಲ್ಲಿ ಕಲ್ಲು ಸಿಡಿಸಿದ ಪರಿಣಾಮವಾಗಿ ಗುಂಬಗುಳಿ ನಾಶವಾಗಿದೆ. ಕೊಳದಲ್ಲಿ ನೀರು ಬತ್ತಿಹೋಗಿದ್ದು, ಶಿವನಿಗೆ ಅಭಿಷೇಕ ಮಾಡಲು ಕೊಳವೆಬಾವಿಯ ನೀರನ್ನೇ ಅವಲಂಬಿಸುವಂತಾಗಿದೆ. ಅಲ್ಲದೆ ನೈಸರ್ಗಿಕ ಜಲಮೂಲಗಳು ನಾಶವಾಗಿ ಸುತ್ತಲೂ ಅಂತರ್ಜಲ ಸಮಸ್ಯೆ ಎದುರಾಗಿದೆ. ಸಾವಿರ ಅಡಿ ಎತ್ತರದ ಬಂಡೆಯಲ್ಲಿ ದೊರಕುತ್ತಿದ್ದ ನೀರು ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ಸಿಗುತ್ತಿಲ್ಲ. ಮತ್ತೆ ಇಲ್ಲಿ ಗಣಿಗಾರಿಕೆ ಪ್ರಾರಂಭವಾದರೆ ಮುಂದೇನಾಗುವುದೋ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾತ್ರ ಕಂಡು ಬರುವ ಆನೆಹುಲ್ಲು, ಗುಲಗಂಜಿ ಸೇರಿದಂತೆ ಅಪೂರ್ವ ಸಸ್ಯಸಂಪತ್ತು ಇಲ್ಲಿದೆ. ನವಿಲುಗಳು, ಕಾಡುಬೆಕ್ಕು, ಪುನಗುಬೆಕ್ಕು, ಸೀಳುನಾಯಿ, ಚಿರತೆ ಹುಲಿ ಸೇರಿದಂತೆ ಅಪೂರ್ವ ವನ್ಯಜೀವಿಗಳು ಹಾಗೂ ಜಾನುವಾರುಗಳಿಗೆ ಉತ್ತಮ ಮೇವು ದೊರಕುತ್ತದೆ. ವನ್ಯಜೀವಿಗಳಿಗೆ ಅಗತ್ಯವಾದ ನೀರು ಬಂಡೆಗಳಲ್ಲಿಯೇ ದೊರಕುತ್ತಿದ್ದುದರಿಂದ ಅವು ಗ್ರಾಮಗಳತ್ತ ಬರುತ್ತಿರಲಿಲ್ಲ. ಆದರೆ ಗಣಿಗಾರಿಕೆ ನಡೆಸಲು ಬೇಸಿಗೆಯಲ್ಲಿ ಗೋಮಾಳಕ್ಕೆ ಬೆಂಕಿಹಚ್ಚುತ್ತಿದ್ದುದರಿಂದ ಇಲ್ಲಿಂದ ಹಬ್ಬಿದ ಬೆಂಕಿ ಸುತ್ತಲಿನ ಬಫರ್ ವಲಯವನ್ನು ಸುಟ್ಟುಹಾಕುತ್ತಿತ್ತು. ಗಣಿಗಾರಿಕೆಯಿಂದ ಇಲ್ಲಿ ನೆಲೆಸಿದ್ದ ವನ್ಯಜೀವಿಗಳು ಗ್ರಾಮಗಳತ್ತ ದಾಳಿ ನಡೆಸುತ್ತಿದ್ದು ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗಿತ್ತು.
ನಾಲ್ಕು ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆಯನ್ನು ಸ್ಥಳೀಯರೇ ತಡೆಗಟ್ಟಿದ ಪರಿಣಾಮ ಗುಡ್ಡದಲ್ಲಿ ದಟ್ಟವಾದ ಹುಲ್ಲು, ಗಿಡಮರಗಳು ಬೆಳೆಯುತ್ತಿವೆ. ಜೇನುಗಳು ಗೂಡುಕಟ್ಟುತ್ತಿವೆ. ಗುಡ್ಡದ ಸುತ್ತಲೂ ಇರುವ ಬಂಡೆಗಳಲ್ಲಿ ಹೆಜ್ಜೇನುಗಳು ನೂರಾರು ಕಡೆಗಳಲ್ಲಿ ಭಾರಿ ಗೂಡುಕಟ್ಟಿಕೊಂಡಿವೆ. ಹಿಂದೆ ದನಗಾಹಿಗಳು ಮಧ್ಯಾಹ್ನದ ಊಟಕ್ಕೆ ಮನೆಯಿಂದ ರೊಟ್ಟಿಕೊಂಡೊಯ್ದು ಜೇನು ಬೆರೆಸಿ ತಿನ್ನುತ್ತಿದ್ದರು ಎನ್ನಲಾಗುತ್ತಿದೆ. ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಸಸಿ ನೆಡುವ ಅರಣ್ಯ ಇಲಾಖೆ ಗುಡ್ಡದಲ್ಲಿ ಗಣಿಗಾರಿಕೆ ನಡೆಸದಂತೆ ಸರ್ಕಾರಕ್ಕೆ ಪತ್ರ ಬರೆದು ಈಗ ಬೆಳೆಯುತ್ತಿರುವ ಗಿಡಗಳನ್ನು ಉಳಿಸಿಕೊಂಡರೆ ಸಾಕಾಗಿದೆ. ಸಿದ್ದಗಂಗೆ ಬೆಟ್ಟಕ್ಕೆ ಹೋಗಿ ಶಿವಗಂಗೆಯನ್ನು ಸ್ಪರ್ಶಿಸಿ ಪುಳಕಗೊಳ್ಳುವ ಪ್ರವಾಸಿಗರು ನಮ್ಮದೇ ಗುಡ್ಡದಲ್ಲಿ ಸಾವಿರಾರು ಅಡಿ ಎತ್ತರದ ಬಂಡೆಯ ಮೇಲಿದ್ದ ಜಲಮೂಲವನ್ನು ಉಳಿಸಿಕೊಳ್ಳಲು ಮುಂದಾಗಿಲ್ಲ ಎಂದು ಮೊಳ್ಳಯ್ಯನಹುಂಡಿ ಗ್ರಾಮಸ್ಥರಾದ ಶಾಂತಪ್ಪ, ಪ್ರಕಾಶ್ ಹಾಗೂ ಇತರರು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಇದೇ ಗುಡ್ಡದಲ್ಲಿ ವಿಷಪ್ರಾಶನದಿಂದ ಒಂದು ಹುಲಿ ಹಾಗೂ ಒಂದು ಚಿರತೆ ಸಾವಿಗೀಡಾಗಿದ್ದು, ಇನ್ನೂ ಹತ್ತಾರು ಚಿರತೆಗಳು ಹಾಗೂ ಹುಲಿಗಳು ಇಲ್ಲಿ ವಾಸವಾಗಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಗಣಿಗಾರಿಕೆಯಿಂದ ಚದುರುಹೋಗಿದ್ದ ಜೇನು ಮತ್ತೆ ಆಗಮಿಸಿ ಗೂಡು ಕಟ್ಟುತ್ತಿವೆ. ಇದನ್ನು ಅರಣ್ಯ ಇಲಾಖೆಯು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ವೈದ್ಯಕೀಯ ಸಸ್ಯಗಳನ್ನು ನೆಟ್ಟು ದೈವಿವನವನ್ನಾಗಿ ಅಭಿವೃದ್ಧಿಪಡಿಸಬೇಕು.
ವಿದ್ಯಾಶಂಕರ್, ಪರಿಸರ ಪ್ರೇಮಿ

ಇಲ್ಲಿ ಗಣಿಗಾರಿಕೆ ನಡೆಸಲು ಕೇರಳ ಮೂಲದ ವ್ಯಕ್ತಿಗಳಿಗೆ ಗಣಿ ಇಲಾಖೆಯು ಸ್ಥಳೀಯರ ಆಕ್ಷೇಪಣೆಯನ್ನು ನಿರ್ಲಕ್ಷಿಸಿ ಅನುಮತಿ ನೀಡಿದೆ. ಅಲ್ಲದೆ ಸ್ಫೋಟದ ಬಳಕೆಗೂ ಅನುಮತಿ ನೀಡಿದೆ. ಗ್ರಾಮಸ್ಥರ ಮನವಿಯ ಮೇರೆಗೆ ಜೀವವೈವಿಧ್ಯ ತಾಣವಾದ ಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡದಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ನಾನು ಸ್ಥಳೀಯರ ಜತೆಗೂಡಲಿದ್ದೇನೆ.
ಸಿ.ಎಸ್.ನಿರಂಜನಕುಮಾರ್, ಶಾಸಕರು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...