ಕುರಿ ಮೇಲೆ ಚಿರತೆ ದಾಳಿ

ಗುಂಡ್ಲುಪೇಟೆ: ತಾಲೂಕಿನ ದೇಪಾಪುರ ಗ್ರಾಮದ ಮನೆಯೊಂದರಲ್ಲಿ ಕಟ್ಟಿದ್ದ ಕುರಿ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ.

ಗ್ರಾಮದ ಬೆಳ್ಳಪ್ಪ ಎಂಬುವರು ತಮ್ಮ ಜಮೀನಿನ ಮನೆಯಲ್ಲಿ ನಾಲ್ಕು ಕುರಿಗಳನ್ನು ಕಟ್ಟಿಹಾಕಿದ್ದರು. ಮೇ 29ರ ಮಧ್ಯರಾತ್ರಿ ಚಿರತೆಯೊಂದು ದಾಳಿ ನಡೆಸಿದೆ. ಕುರಿಗಳ ಅರಚುವಿಕೆಯಿಂದ ಎಚ್ಚರಗೊಂಡ ಮನೆಯವರು ಹೊರಬಂದು ನೋಡಿದಾಗ ಚಿರತೆ ದಾಳಿಗೆ ಕುರಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.