Friday, 16th November 2018  

Vijayavani

Breaking News

ಗೀತಾ ಮಹದೇವಪ್ರಸಾದ್‌ರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Friday, 04.05.2018, 1:41 PM       No Comments

ಚಾಮರಾಜನಗರ: ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾಮಹದೇವಪ್ರಸಾದ್‌ರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಸಚಿವೆಯನ್ನು ತರಾಟೆಗೆ ತೆಗೆದುಕೊಂಡರು

ಗೀತಾ ಮಹದೇವಪ್ರಸಾದ್‌ ಅವರ ಆಪ್ತ ಯಶವಂತಕುಮಾರ್‌ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸುತ್ತಾರೆ. ಈ ಊರಿನಲ್ಲಿ ಗಲಭೆ ಆಗಿರುವುದರಿಂದ ಈ ಬಾರಿ ಚುನಾವಣೆಗೆ ಯಾರೊಬ್ಬರು ಮತದಾನ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿರುವ ಸಮಸ್ಯೆಗಳನ್ನು ನೋಡಿ ಎಂದ ಗ್ರಾಮಸ್ಥರ ಮನವಿಯನ್ನು ನಿರಾಕರಿಸಿದ ಸಚಿವೆ ಗೀತಾಮಹದೇವಪ್ರಸಾದ್‌, ಗ್ರಾಮಸ್ಥರ ತರಾಟೆಗೆ ಅಂಜಿ ಅಲ್ಲಿಂದ ತೆರಳಿದ್ದಾರೆ.

Leave a Reply

Your email address will not be published. Required fields are marked *

Back To Top