ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಸಿಐಎಸ್‌ಎಫ್ ಸಿಬ್ಬಂದಿ ತನ್ನ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು (gun fire) ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ಟೇಬಲ್ ಬಿಹಾರ ಮೂಲದ ಹಾಲಿ ಮಲ್ಲಾಪುರ ನಿವಾಸಿ ಹರವಿಂದ್ರ ಕುಮಾರ್ ರಾಮ್(28) ಮೃತ ವ್ಯಕ್ತಿ. ಕೈಗಾ ಅಣು ವಿದ್ಯುತ್ ಕೇಂದ್ರದ ಉದ್ಯೋಗಿಗಳು ವಾಸಿಸುವ ಟೌನ್‌ಶಿಪ್ ಸುತ್ತಲಿನ ತನ್ನ ಕರ್ತವ್ಯ ಮುಗಿಸಿ ಸಾಯಂಕಾಲ ಇಲಾಖೆಯ ವಾಹನದಲ್ಲಿ ಕ್ವಾಟ್ರಸ್ ಕಡೆಗೆ ಮರಳುವಾರ ಸಂಚರಿಸುವ ಕಾರಿನಲ್ಲಿಯೇ ಸಿಐಎಸ್‌ಎಫ್ ಟೌನ್‌ಶಿಪ್ ಗೇಟ್ ಬಳಿ ಘಟನೆ ನಡೆದಿದೆ.
ಇಲಾಖೆಯ ಕಾರಿನಲ್ಲಿ ಒಬ್ಬ ಚಾಲಕ ಹಾಗೂ ಎಎಸ್‌ಐ ಮುಂದೆ ಕುಳಿತಿದ್ದರು. ಹಿಂದೆ ಕುಳಿತಿದ್ದ ಹರವಿಂದರ್ ರೈಫಲ್‌ನಿಂದ ಗುಂಡು ಹಾರಿದೆ. ಹರವಿಂದ್ರ ಕುಮಾರ್ ತಲೆ ಛಿದ್ರವಾಗಿದೆ. ವಾಹನ ನಿಲ್ಲಿಸಿ ನೋಡುವುದರೊಳಗೆ ಅವರು ಮೃತಪಟ್ಟಿದ್ದರು.
Gun Fire: ಅನುಮಾನ
ಅವರ ರೈಫಲ್‌ನಿಂದ ಅಕಸ್ಮಾತ್ತಾಗಿ ಗುಂಡು ಹಾರಿದೆಯೇ ..?ಅಥವಾ ಉದ್ದೇಶಪೂರ್ವಕವಾಗಿ ಆತ ಗುಂಡು ಹಾರಿಸಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಥವಾ ಬೇರೆ ಯಾರೋ ಪ್ರಚೋದನೆ ನೀಡಿದರೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆಂಕಟೇಶನೇ ಕಾಪಾಡಲಿ ಈ ಸೇತುವೆ!https://www.vijayavani.net/let-venkatesh-protect-this-bridge