ಚೆನ್ನೈ: ಅತಿಕಿರಿಯ ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್ಗೆ ತವರಿನ ತಮಿಳುನಾಡು ಸರ್ಕಾರದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶುಕ್ರವಾರ 5 ಕೋಟಿ ರೂ. ಬಹುಮಾನ ಪ್ರಕಟಿಸಿದ್ದಾರೆ. ಈ ಬಹುಮಾನದೊಂದಿಗೆ ಗುಕೇಶ್ರನ್ನು ಗೌರವಿಸಲು ಖುಷಿಯಾಗುತ್ತಿದೆ. ಈ ಐತಿಹಾಸಿಕ ಸಾಧನೆ ದೇಶಕ್ಕೆ ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ ಎಂದು ಸ್ಟಾಲಿನ್ ಎಕ್ಸ್ನಲ್ಲಿ ತಿಳಿಸಿದ್ದಾರೆ. ವಿಶ್ವ ಚಾಂಪಿಯನ್ಷಿಪ್ ಸಿದ್ಧತೆಗಾಗಿಯೂ ತಮಿಳುನಾಡು ಸರ್ಕಾರ ಗುಕೇಶ್ಗೆ 85 ಲಕ್ಷ ರೂ. ನೀಡಿ ನೆರವಾಗಿತ್ತು.
ಕರ್ನಾಟಕ ಸರ್ಕಾರ ಅಭಿನಂದನೆ
ಬೆಳಗಾವಿ: ನೂತನ ಚೆಸ್ ವಿಶ್ವ ಚಾಂಪಿಯನ್ ಗುಕೇಶ್ಗೆ ಕರ್ನಾಟಕ ಸರ್ಕಾರ ಅಭಿನಂದನೆ ಸಲ್ಲಿಸಿದೆ. ಶುಕ್ರವಾರ ವಿಧಾನಸಭೆ ಕಲಾಪದ ಕೊನೆಯಲ್ಲಿ ಸ್ಪೀಕರ್ ಯುಟಿ ಖಾದರ್, ಗುಕೇಶ್ ಸಾಧನೆಯ ಬಗ್ಗೆ ಸದನದ ಗಮನಸೆಳೆದಾಗ ಸಚಿವ ಕೃಷ್ಣ ಬೈರೇಗೌಡ, ಸರ್ಕಾರದ ಪರವಾಗಿ ಗುಕೇಶ್ಗೆ ಅಭಿನಂದನೆ ಸಲ್ಲಿಸಲು ಸಂತೋಷವಾಗುತ್ತಿದೆ ಎಂದರು.
ತಡವಾಗಿ ಬಂದ ಯಶಸ್ವಿ ಜೈಸ್ವಾಲ್; ಹೋಟೆಲ್ನಲ್ಲೇ ಬಿಟ್ಟುಹೋದ ಟೀಮ್ ಇಂಡಿಯಾ ಬಸ್!