ಗುಜರಾತಿನಲ್ಲಿ ನಾಪತ್ತೆ… 11 ವರ್ಷದ ಬಳಿಕ ಕೋಲ್ಕತದಲ್ಲಿ ಕೋಮಾದಿಂದ ಎಚ್ಚರಗೊಂಡ ಮಹಿಳೆ!

ಅಹಮದಾಬಾದ್​: ಗುಜರಾತಿನ ಗೋದ್ರಾ ಜಿಲ್ಲೆಯ ಪಂಚಮಹಲ್‌ನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಬರೋಬ್ಬರಿ 11 ವರ್ಷಗಳ ಬಳಿಕ ಕೋಲ್ಕತದಲ್ಲಿ ಕೋಮಾದಿಂದ ಎಚ್ಚರಗೊಂಡಿರುವ ಅಚ್ಚರಿ ಪ್ರಕರಣ ವರದಿಯಾಗಿದೆ. ಪೊಲೀಸರ ನೆರವಿನಿಂದ ಗೋಧ್ರಾದ ಭಾಮೈಯ್ಯ ಎಂಬ ಹಳ್ಳಿಯಲ್ಲಿ ನೆಲೆಸಿರುವ ತನ್ನ ಕುಟುಂಬವನ್ನು ಮರು ಸೇರುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾಳೆ. ಗೀತಾ ಬರಿಯಾ ಎಂಬಾಕೆ 2013ರಲ್ಲಿ ಕಣ್ಮರೆಯಾಗಿದ್ದರು. ಸಾಕಷ್ಟು ಹುಡುಕಾಟ ನಡೆಸಿದ ಕುಟುಂಬ, ಕಾಲಾನಂತರದಲ್ಲಿ ಆಕೆಯ ಮರಳುತ್ತಾಳೆ ಎಂಬ ಭರವಸೆಯನ್ನೇ ಕಳೆದುಕೊಂಡಿತು. ಮೃತಪಟ್ಟಿರಬಹುದೆಂದು ಭಾವಿಸಿತ್ತು. ಹೀಗಿರುವಾಗ ಇತ್ತೀಚೆಗಷ್ಟೇ ಗೀತಾ ಬರಿಯಾ ಕುಟುಂಬ ಕೋಲ್ಕತ್ತಾದ ಮಾನಸಿಕ ಆರೋಗ್ಯ … Continue reading ಗುಜರಾತಿನಲ್ಲಿ ನಾಪತ್ತೆ… 11 ವರ್ಷದ ಬಳಿಕ ಕೋಲ್ಕತದಲ್ಲಿ ಕೋಮಾದಿಂದ ಎಚ್ಚರಗೊಂಡ ಮಹಿಳೆ!