ಬೆಂಗಳೂರು: (Sai Sudharsan ) ಸಾಯಿ ಸುದರ್ಶನ್ ಐಪಿಎಲ್ ಮೂಲಕ ಗಮನ ಸೆಳೆದ ಆಟಗಾರರಲ್ಲಿ ಒಬ್ಬರು. ಈ ಯುವ ಆಟಗಾರ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ, ಈ ಎಡಗೈ ಬ್ಯಾಟರ್ ಸಾಮಾಜಿಕ ಮಾಧ್ಯಮದಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.
ನನಗೆ ಆಪರೇಷನ್ ಮಾಡಿದ ವೈದ್ಯರು, ಬಿಸಿಸಿಐ ಮತ್ತು ನನ್ನ ಬೆಂಬಲಕ್ಕೆ ನಿಂತ ಗುಜರಾತ್ ಟೈಟಾನ್ಸ್ ಕುಟುಂಬಕ್ಕೆ ಧನ್ಯವಾದಗಳು ಎಂದು ಸಾಯಿ ಸುದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಶೀಘ್ರದಲ್ಲೇ ಬಲಶಾಲಿಯಾಗಿ ಮರಳಿ ಬರುತ್ತೇನೆ ಎಂದರು.
ಈ ವಿಷಯ ತಿಳಿದ ಅವರ ಅಭಿಮಾನಿಗಳು ಹಾಗೂ ಗುಜರಾತ್ ಟೈಟಾನ್ಸ್ ಅಭಿಮಾನಿಗಳು ಅವರು ಬೇಗ ಗುಣಮುಖರಾಗಲಿ ಎಂದು ಬಯಸಿದ್ದಾರೆ.
ಭಾರತ ತಂಡದ ಯುವ ಬ್ಯಾಟರ್ ಸಾಯಿ ಸುದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಸಾಯಿ ಇದೀಗ ವಿದೇಶದಲ್ಲಿ ಸರ್ಜರಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಯುವ ಆಟಗಾರ ಐಪಿಎಲ್ ನಲ್ಲಿ ಇದುವರೆಗೆ 25 ಪಂದ್ಯಗಳನ್ನು ಆಡಿದ್ದಾರೆ. 47ರ ಸರಾಸರಿಯಲ್ಲಿ 1034 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 6 ಅರ್ಧಶತಕಗಳಿವೆ. ಗರಿಷ್ಠ ಸ್ಕೋರ್ 103. ಏತನ್ಮಧ್ಯೆ, ಈ ಯುವ ಆಟಗಾರನನ್ನು ಐಪಿಎಲ್ ಮೆಗಾ ಹರಾಜು 2025 ರ ಮೊದಲು ಗುಜರಾತ್ ಟೈಟಾನ್ಸ್ 8.50 ಕೋಟಿಗೆ ಉಳಿಸಿಕೊಂಡಿದೆ.
23 ವರ್ಷದ ಸಾಯಿ ಸುದರ್ಶನ್ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರ. ಭಾರತದ ಪರ 3 ಏಕದಿನ ಪಂದ್ಯಗಳನ್ನಾಡಿರುವ ಸಾಯಿ 2 ಅರ್ಧಶತಕಗಳೊಂದಿಗೆ 127 ರನ್ ಕಲೆಹಾಕಿದ್ದಾರೆ. ಹಾಗೆಯೇ ಒಂದು ಟಿ20 ಪಂದ್ಯದಲ್ಲೂ ಕಾಣಿಸಿಕೊಂಡಿದ್ದಾರೆ.
Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!