Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಗುಜರಾತ್ ಲೋಕಲ್​ನಲ್ಲಿ ಕಮಲ ಕಹಳೆ

Wednesday, 30.11.2016, 1:19 PM       No Comments

ಅಹ್ಮದಾಬಾದ್: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರಿ ಗೆಲುವು ಕಂಡ ಬೆನ್ನಿಗೇ, ಗುಜರಾತ್ನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಆಡಳಿತವಿದ್ದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಪಕ್ಷಕ್ಕೆ ಈ ಗೆಲುವು ಹುಮ್ಮಸ್ಸು ತುಂಬಿದೆ ಎಂಬುದು ಗಮನಾರ್ಹ ಸಂಗತಿ. ಹಿಂದಿನ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್ ಈ ಬಾರಿ ಸಂಪೂರ್ಣ ನೆಲಕಚ್ಚಿದೆ. ಮುಂದಿನ ವರ್ಷ ಐದು ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಜೆಪಿಗೆ ಈ ಗೆಲುವು ಮಹತ್ವದ್ದಾಗಿದೆ.

ಗುಜರಾತ್ನ ನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯಿತಿಗಳ 126 ಸ್ಥಾನಗಳ ಪೈಕಿ ಬಿಜೆಪಿ ಒಟ್ಟು 109 ಸ್ಥಾನಗಳನ್ನು ಗೆದ್ದುಕೊಂಡಿದೆ. ನೋಟು ರದ್ದತಿ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಕೇವಲ 17 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ ಹಿಡಿತದಲ್ಲಿದ್ದ 40 ಸೀಟುಗಳು ಈ ಬಾರಿ ಬಿಜೆಪಿ ಪಾಲಾಗಿವೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಗುಜರಾತ್ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. 31 ಜಿಲ್ಲಾ ಪಂಚಾಯಿತಿಗಳ ಪೈಕಿ 21ರಲ್ಲಿ, 230 ತಾಲೂಕು ಪಂಚಾಯಿತಿಗಳ ಪೈಕಿ 110ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಗ್ರಾಮಾಂತರ ಪ್ರದೇಶಗಳಲ್ಲಿ ಭಾರಿ ಹಿನ್ನಡೆ ಕಂಡಿತ್ತು. ನಗರ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಿಜೆಪಿ 56 ನಗರಸಭೆಗಳ ಪೈಕಿ 40 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಜನತೆಗೆ ಮೋದಿ ಧನ್ಯವಾದ: ದೇಶದಲ್ಲಿ ನಡೆದ ವಿವಿಧ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕೆಲ ದಿನಗಳಿಂದ ದೇಶದಲ್ಲಿ ಸ್ಥಳೀಯ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳ ಫಲಿತಾಂಶ ಬಂದಿದ್ದು, ಇದರಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಇದು ದೇಶದ ಜನತೆಗೆ ಅಭಿವೃದ್ಧಿ ಬೇಕು, ಅವರು ಎಂದಿಗೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. -ಏಜೆನ್ಸೀಸ್

ತಮ್ಮದೇ ಕ್ಷೇತ್ರದಲ್ಲಿ ಸೋಲುಂಡರು

ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿವಿಧ ಪಕ್ಷದ ನಾಯಕರು ಪಕ್ಷದ ಹಿರಿಯ ನಾಯಕರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ ಮುಂಡೆ ಅವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ರಾಜ್ಯ ನೀರಾವರಿ ಸಚಿವ ಬಾಬಾನ್ರಾವ್ ಲೋನಿಕಾ ಅವರ ಪತ್ನಿ ಮಂಡಾ ಅವರು ಪರ್ತರ್ ಮುನ್ಸಿಪಲ್ ಕೌನ್ಸಿಲ್ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದಾರೆ.

ಗುಜರಾತ್ನಲ್ಲಿ ವರ್ಚಸ್ಸಿಗಿಲ್ಲ ಪೆಟ್ಟು

ಮೋದಿ ಪ್ರಧಾನಿಯಾದ ನಂತರದಲ್ಲಿ ಗುಜರಾತ್ ಸಿಎಂ ಸ್ಥಾನಕ್ಕೆ ಆನಂದಿ ಬೆನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಬಿಜೆಪಿಗೆ ಭಾರಿ ಹಿನ್ನೆಡೆ ಎಂದು ವಿಶ್ಲೇಷಿಸಲಾಗಿತ್ತು. ಜತೆಗೆ ಕಳೆದೊಂದು ವರ್ಷಗಳಲ್ಲಿ ಗುಜರಾತ್ನಲ್ಲಿ ನಡೆಯುತ್ತಿರುವ ಪಟೇಲ್ ಹಾಗೂ ದಲಿತ ಸಮುದಾಯದ ಪ್ರತಿಭಟನೆ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಎಂದೇ ಹೇಳಲಾಗಿತ್ತು. ಆದರೆ ಈ ಲೆಕ್ಕಾಚಾರ ಈಗ ಸಂಪೂರ್ಣ ತಲೆಕೆಳಗಾಗಿದೆ.

ಮಹಾರಾಷ್ಟ್ರದಲ್ಲೂ ಬದಲಾದ ಅದೃಷ್ಟ

ಈ ವರ್ಷ ಜನವರಿ ತಿಂಗಳಲ್ಲಿ ಮಹಾರಾಷ್ಟ್ರದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಒಟ್ಟೂ 345 ಸ್ಥಾನಗಳ ಪೈಕಿ ಕಾಂಗ್ರೆಸ್ 105 ಸ್ಥಾನ ಗಳಿಕೆ ಮಾಡಿಕೊಳ್ಳುವ ಮೂಲಕ ಗೆಲುವಿನ ನಗು ಬೀರಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಕೇವಲ 39 ಸ್ಥಾನಗಳಿಕೆ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು. ಆದರೆ ಈ ಬಾರಿಯ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 3,705 ಸ್ಥಾನಗಳ ಪೈಕಿ ಬಿಜೆಪಿ 851 ಸ್ಥಾನಗಳನ್ನು ಗೆದ್ದಿದೆ. ಕಳೆದ ಭಾರಿ ಜಯದ ನಗೆ ಬೀರಿದ್ದ ಕಾಂಗ್ರೆಸ್ ಈ ಬಾರಿ 643 ಸ್ಥಾನ ಗಳಿಕೆ ಮಾಡಿಕೊಳ್ಳುವ ಮೂಲಕ 4ನೇ ಸ್ಥಾನಕ್ಕೆ ಕುಸಿದಿದೆ.

ಎನ್ಡಿಎ ಸೇರ್ತಾರಾ ನಿತೀಶ್ ಕುಮಾರ್? ರಾಜಕೀಯ ವಲಯದಲ್ಲಿ ಚರ್ಚೆ ಶುರು

ನವದೆಹಲಿ: ಬಿಹಾರ ಸಿಎಂ, ಮಹಾಮೈತ್ರಿಕೂಟದ ನೇತೃತ್ವ ವಹಿಸಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಬಿಜೆಪಿಯತ್ತ ವಾಲುತ್ತಿದ್ದಾರೆಯೇ? ಬಿಹಾರ ರಾಜಕೀಯದಲ್ಲಿ ಈ ಪ್ರಶ್ನೆ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಹಾಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಹಾಗೂ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ನೋಟು ನಿಷೇಧಕ್ಕೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದರೆ, ನಿತೀಶ್ ಕುಮಾರ್ ಮಾತ್ರ ಪ್ರಧಾನಿ ಮೋದಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ನಿತೀಶ್ ಕುಮಾರ್ಗೆ ಕರೆ ಮಾಡಿ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ರ್ಚಚಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಭಿನ್ನಮತ?: ಇತ್ತೀಚಿನ ದಿನಗಳಲ್ಲಿ ಆರ್ಜೆಡಿ ಹಾಗೂ ಜೆಡಿಯು ನಡುವೆ ಸಾಕಷ್ಟು ಭಿನ್ನಮತ ಏರ್ಪಟ್ಟಿದೆ ಎಂಬ ಮಾತು ಕೇಳಿಬರುತ್ತಿದೆ. ಬಿಹಾರದಲ್ಲಿ ಭಾರಿ ಪ್ರವಾಹ ಉಂಟಾಗಿದ್ದಾಗ ಸಂತ್ರಸ್ತರ ರಕ್ಷಣೆಗೆ ನಿತೀಶ್ ತ್ವರಿತ ಕ್ರಮಕ್ಕೆ ಸೂಚನೆ ನೀಡಿದ್ದರು. ನಾಯಕರು ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಅಗತ್ಯ ನೆರವು ಒದಗಿಸುವಂತೆ ಸೂಚಿಸಿದ್ದರು. ಆದರೆ ಲಾಲು ಬೆಂಬಲಿಗರು ಇದನ್ನು ನಿರ್ಲಕ್ಷಿಸಿದ್ದರು. ‘ಸಾಮಾನ್ಯವಾಗಿ ಗಂಗಾನದಿ ಬಳಿಗೆ ಜನರು ಹೋಗುತ್ತಾರೆ. ಈಗ ಗಂಗಾ ನದಿಯೇ ಜನರ ಮನೆ ಬಾಗಿಲಿಗೆ ಬಂದಿದೆ. ಇದು ನಿಮ್ಮ ಅದೃಷ್ಟ’ ಎಂದು ಲಾಲು ಪ್ರಸಾದ್ ಜನರಿಗೆ ಉಡಾಫೆಯ ಉತ್ತರ ಕೊಟ್ಟಿದ್ದರು.

ರಾಜ್ಯಾದ್ಯಂತ ಮದ್ಯ ನಿಷೇಧಿಸಿ ಸಿಎಂ ನಿತೀಶ್ ಕುಮಾರ್ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಈ ನಿರ್ಧಾರ ಆರ್ಜೆಡಿ ನಾಯಕರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಕಳಂಕ ರಹಿತ ಇಮೇಜ್ ಹೊಂದಲು ನಿತೀಶ್ ಯತ್ನಿಸುತ್ತಿದ್ದಾರೆ. ಆದರೆ ಆರ್ಜೆಡಿಯೊಂದಿಗೆ ಗುರುತಿಸಿಕೊಂಡರೆ ಇದು ಬಹುತೇಕ ಅಸಾಧ್ಯ ಎನ್ನುವುದು ನಿತೀಶ್ ಅವರಿಗೆ ಈಗ ಮನವರಿಕೆಯಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಲಾಲು ಆಪ್ತ, ಭೂಗತ ಪಾತಕಿ ಮಹ್ಮದ್ ಶಹಾಬುದ್ದೀನ್ ಬಿಡುಗಡೆ ನಂತರ ನಡೆದ ಬೆಳವಣಿಗೆಗಳು ನಿತೀಶ್ ಹಾಗೂ ಲಾಲು ನಡುವೆ ವೈಮನಸ್ಸು ಹೆಚ್ಚುವಂತೆ ಮಾಡಿದೆ. ಭಿನ್ನಮತ ಹೆಚ್ಚಾಗಿ ಆರ್ಜೆಡಿಯಿಂದ ಮೈತ್ರಿ ಕಡಿದುಕೊಳ್ಳಬೇಕಾದ ಸ್ಥಿತಿ ನಿರ್ವಣವಾದರೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಬಹುದು ಎಂಬುದು ನಿತೀಶ್ ತಂತ್ರಗಾರಿಕೆ ಎನ್ನಲಾಗುತ್ತಿದೆ.

243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಅಧಿಕಾರಕ್ಕೆ ಬರಲು 122 ಶಾಸಕರ ಬೆಂಬಲ ಬೇಕು. 80 ಶಾಸಕರನ್ನು ಹೊಂದಿದ ಆರ್ಜೆಡಿ ಅತಿ ದೊಡ್ಡ ಪಕ್ಷವಾಗಿದೆ. ಜೆಡಿಯು 71 ಶಾಸಕರನ್ನು ಹೊಂದಿದೆ. ಬಿಜೆಪಿ 53 ಹಾಗೂ ಕಾಂಗ್ರೆಸ್ 27 ಶಾಸರನ್ನು ಹೊಂದಿದೆ. ಜೆಡಿಯು ಹಾಗೂ ಬಿಜೆಪಿ ಸೇರಿದರೆ 124 ಸದಸ್ಯ ಬಲ ಸಿಗಲಿದ್ದು, ಸರ್ಕಾರ ರಚಿಸಬಹುದಾಗಿದೆ.

ಮೈತ್ರಿ ಪುನರ್ ಪರಿಶೀಲಿಸಿ

ಕಾಂಗ್ರೆಸ್ ಹಾಗೂ ಆರ್ಜೆಡಿ ಜತೆಗಿನ ಮೈತ್ರಿಯನ್ನು ಪುನರ್ಪರಿಶೀಲಿಸುವಂತೆ ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ, ಸಿಎಂ ನಿತೀಶ್ಗೆ ಸಲಹೆ ನೀಡಿದ್ದಾರೆ. ಅಪರಾಧ ಹಾಗೂ ಭ್ರಷ್ಟಾಚಾರಕ್ಕೆ ಆರ್ಜೆಡಿ ಕುಖ್ಯಾತಿ ಪಡೆದಿದೆ. ಕಾಂಗ್ರೆಸ್ ಆಡಳಿತದಲ್ಲಿ ಹಗರಣಗಳೇ ಹೆಚ್ಚಾಗಿವೆ. ಈ ಪಕ್ಷಗಳ ಜತೆ ಮೈತ್ರಿ ಮುಂದುವರಿಸಿದಲ್ಲಿ ರಾಜಕೀಯವಾಗಿ ನಿತೀಶ್ಗೆ ಭಾರಿ ಹಿನ್ನಡೆ ಉಂಟಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ನಿತೀಶ್ ಕುಮಾರ್ ಎನ್ಡಿಎ ಸೇರ್ಪಡೆಗೆ ಮುಂದಾದರೆ ಸ್ವಾಗತಿಸು ತ್ತೇನೆ. ಲಾಲು ಪ್ರಸಾದ್ ನೇತೃತ್ವದ ಆರ್ಜೆಡಿ ಜತೆಗಿನ ಮೈತ್ರಿ ಸಿಎಂ ನಿತೀಶ್ಗೆ ಹಿನ್ನಡೆ ಉಂಟುಮಾಡಿದೆ.

| ರಾಮ್ ವಿಲಾಸ್ ಪಾಸ್ವಾನ್ ಕೇಂದ್ರ ಸಚಿವ, ಎಲ್ಜೆಪಿ ಮುಖ್ಯಸ್ಥ

ಶೀಘ್ರ ಕಾನೂನಾಗಲಿದೆ ಆದಾಯ ತೆರಿಗೆ ತಿದ್ದುಪಡಿ ವಿಧೇಯಕ

ನವದೆಹಲಿ: ಉಭಯಸದನಗಳ ಕಲಾಪ ಒಂಭತ್ತನೇ ದಿನಕ್ಕೆ ಕಾಲಿರಿಸಿದ್ದು, ವಿಪಕ್ಷಗಳ ಗದ್ದಲದ ಮಧ್ಯೆಯೇ ನೂತನ ಆದಾಯ ತೆರಿಗೆ ತಿದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಬುಧವಾರಕ್ಕೆ ಮುಂದೂ ಡಿಕೆಯಾಗಿವೆ. ಮಂಗಳ ವಾರ ನೂತನ ತೆರಿಗೆ ತಿದ್ದುಪಡಿ ವಿಧೇಯಕ ಯಾವುದೇ ಚರ್ಚೆ ಇಲ್ಲದೆ ಲೋಕಸಭೆಯಲ್ಲಿ ಕೆಲವೇ ನಿಮಿಷಗಳಲ್ಲಿ ಅನುಮೋದನೆಯಾಗಿದೆ. ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಾತನಾಡಿ, ಕೇಂದ್ರವು 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮ ಕಾಳಧನಿಕರು ತಮ್ಮಲ್ಲಿನ ಕಪ್ಪುಹಣವನ್ನು ಬಿಳಿಮಾಡಿಕೊಳ್ಳಲು ನಾನಾ ಹಾದಿ ಹುಡುಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಬಡವರ ಜನ್ಧನ್ ಖಾತೆಗೂ ಹಣ ತುಂಬುವ ಮೂಲಕ ಅದನ್ನು ದುರುಪ ಯೋಗಪಡಿಸಿಕೊಳ್ಳುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ತೆರಿಗೆ ವಿಧೇಯಕಕ್ಕೆ ಎರಡನೇ ತಿದ್ದುಪಡಿ ಮಾಡಿದೆ ಎಂದು ಹೇಳಿದರು. ಹಣಕಾಸು ವಿಧೇಯಕ ರೂಪದಲ್ಲಿ ಮಸೂದೆ ಮಂಡನೆಯಾಗಿರುವುದರಿಂದ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವ ಅಗತ್ಯವಿಲ್ಲ. ರಾಜ್ಯಸಭೆಯಲ್ಲಿ ಅನುಮೋದನೆಯಾಗದಿದ್ದರೂ, ವಿಧೇಯಕ ಕಾನೂನಾಗಿ ಜಾರಿಗೆ ಬರಲಿದೆ.

ಬ್ಯಾಂಕ್ ವಹಿವಾಟಿನ ವಿವರ ನೀಡಲು ಪ್ರಧಾನಿ ಸೂಚನೆ

ನವದೆಹಲಿ: ಬಿಜೆಪಿಯ ಎಲ್ಲ ಶಾಸಕ, ಸಂಸದರು ನವೆಂಬರ್ 8ರಿಂದ ಡಿಸೆಂಬರ್ 31ರವರೆಗೆ ಬ್ಯಾಂಕ್ ವ್ಯವಹಾರಗಳ ಮಾಹಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಸಲ್ಲಿಸುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. 500, 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ದಿನದಿಂದ ಬ್ಯಾಂಕ್ಗಳಲ್ಲಿ ಠೇವಣಿ, ನೋಟು ಬದ ಲಾವಣೆ, ವಿಥ್ಡ್ರಾ ಮಾಡಿದ ಎಲ್ಲ ಮಾಹಿತಿಗಳನ್ನು ನೀಡುವಂತೆ ಪಕ್ಷದ ಶಾಸಕ, ಸಂಸದರಿಗೆ ತಿಳಿಸಿದ್ದಾರೆ.

8/11ರ ನೋಟು ನಿಷೇಧ ಘೊಷಣೆಯಾಗುವ ಕುರಿತು ಪಕ್ಷದ ಮುಖಂಡರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸಂಸದೀಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ, ಧೈರ್ಯವಿದ್ದರೆ ಬಿಜೆಪಿ ಜನಪ್ರತಿನಿಧಿಗಳು ಏಪ್ರಿಲ್ 1ರಿಂದ ನವೆಂಬರ್ 8ರವರೆಗಿನ ಬ್ಯಾಂಕ್ ವಹಿವಾಟುಗಳ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ಆಂಧ್ರ ಸಂಸದನ ಭಿನ್ನ ಪ್ರತಿಭಟನೆ

ಎನ್ಡಿಎ ಮಿತ್ರಕೂಟದ ಆಂಧ್ರಪ್ರದೇಶದ ಟಿಡಿಪಿ ಸಂಸದ ರೊಬ್ಬರು ತನ್ನದೇ ಶೈಲಿಯಲ್ಲಿ ಸಂಸತ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಚಿತ್ತೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಡಾ. ಶಿವಪ್ರಸಾದ್, ಅರ್ಧ ಕಪ್ಪು ಮತ್ತು ಅರ್ಧ ಬಿಳಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಕೆಲ ಕಾಳಧನಿಕರ ಚಿತ್ರಗಳ ಸ್ಟಿಕರ್ಗಳನ್ನು ತನ್ನ ಬಟ್ಟೆಗೆ ಅಂಟಿಸಿಕೊಂಡಿದ್ದರು. ವಿಪಕ್ಷಗಳ ಗದ್ದಲ ಆರಂಭಕ್ಕೂ ಮೊದಲೇ ಸಂಸದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಳಿ ತೆರಳಿ ನೋಟು ನಿಷೇಧಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದರು.

ಮೈಸೂರು ಪ್ರೆಸ್ನಲ್ಲಿ 7 ದಿನ ಕೆಲಸ

ಮೈಸೂರು: ನೋಟುಗಳ ಬೇಡಿಕೆ ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ನ ಮೈಸೂರಿನ ನೋಟು ಮುದ್ರಣ ಘಟಕದ ನೌಕರರು ವಾರದ ಎಲ್ಲ ದಿನ 24 ಗಂಟೆಯೂ ಸರದಿ ಪಾಳಿಯಲ್ಲಿ ಕೆಲಸ ಮಾಡಲು ತೀರ್ವನಿಸಿದ್ದಾರೆ. ಈ ಮೊದಲು ವಾರದಲ್ಲಿ ಐದು ದಿನ ಮಾತ್ರ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ನ.8ರಂದು ಗರಿಷ್ಠ ಮುಖ ಬೆಲೆ ನೋಟು ರದ್ದು ಮಾಡಿದ ಬಳಿಕ ವಾರದಲ್ಲಿ ಆರು ದಿನಗಳ ಕಾಲ ಕೆಲಸ ಮಾಡುತ್ತಿದ್ದರು. ತದನಂತರ ನ.27ರಿಂದ ದಿನದ 24 ಗಂಟೆಯೂ ಸರದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಿರುವ ಸಿಬ್ಬಂದಿ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ನ ಮೈಸೂರಿನ ನೋಟು ಮುದ್ರಣ ನೌಕರರ ಸಂಘದ ಸಭೆಯಲ್ಲಿ ತೆಗೆದುಕೊಂಡ ಈ ನಿರ್ಣಯದ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಜೇಟ್ಲಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಬಿಜೆಪಿ ಮುಖಂಡರು ತಮ್ಮ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದಕ್ಕಿಂತ ಮೊದಲು ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಬ್ಯಾಂಕ್ ವ್ಯವಹಾರಗಳ ಕುರಿತು ಘೊಷಿಸಿಕೊಳ್ಳಲು ಧೈರ್ಯವಿಲ್ಲ. ಆಡಳಿತ ವೈಖರಿಯಲ್ಲಿ ಮೋದಿ ತುಘಲಕ್ ಮತ್ತು ಹಿಟ್ಲರ್ರನ್ನು ಮೀರಿಸುತ್ತಿದ್ದಾರೆ.

| ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಸಿಎಂ

 

Leave a Reply

Your email address will not be published. Required fields are marked *

Back To Top