ಸಿನಿಮಾ

ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಜನ ನೀರುಪಾಲು

ಭರೂಚ್: ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಜನರು ಮೃತಪಟ್ಟಿರುವ ಘಟನೆ ಗುಜರಾತ್​ನ ಭರೂಚ್ ಜಿಲ್ಲೆಯ ವಾಗ್ರಾ ತಾಲೂಕಿನ ಮುಲ್ಲರ್ ಗ್ರಾಮದ ಹತ್ತಿರ ನಡೆದಿದೆ. ವಿಹಾರಕ್ಕೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್​ ಇಬ್ಬರು ಬದುಕುಳಿದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್‌ ಆಕ್ರೋಶ…!

ಮೃತಪಟ್ಟವರನ್ನು ಗೋಹಿಲ್ ಕುಟುಂಬದ ರಾಜೇಶ್(33), ಯೋಗೇಶ್(19), ತುಳಸಿಬೆನ್(20), ಜಾನ್ವಿ(3), ಆರ್ಯ(2) ಮತ್ತು ರಿಂಕಲ್(15) ಎಂದು ಗುರುತಿಸಲಾಗಿದೆ. ವಾಯುವಿಹಾರಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದ ಗೋಹಿಲ್​ ಕುಟುಂಬದ ಮಕ್ಕಳು ದಡದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಸಮುದ್ರದ ನೀರು ಏಕಾಏಕಿ ಹೆಚ್ಚಾದ ಪರಿಣಾಮ ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ತಕ್ಷಣವೇ ಅವರನ್ನು ರಕ್ಷಿಸಲು ಉಳಿದ ಕುಟುಂಬ ಸದಸ್ಯರು ಪ್ರಯತ್ನಿಸಿದ್ದು, ಇದೇ ವೇಳೆ ನೀರಿನಲ್ಲಿ ಮುಳುಗಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಒಟ್ಟು 8 ಮಂದಿ ನೀರಿನಲ್ಲಿ ಮುಳುಗಿದ್ದಾರೆ. ಈ ಪೈಕಿ 6 ಮಂದಿ ನೀರು ಪಾಲಾಗಿದ್ದು, ಬದುಕುಳಿದ ಇನ್ನಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್