More

    ವರನ ತಂದೆಯಂದಿಗೆ ವಧುವಿನ ತಾಯಿ ನಾಪತ್ತೆ ಪ್ರಕರಣ: ಓಡಿಹೋಗಿದ್ದ ಜೋಡಿ ಏಕಾಏಕಿ ಪೊಲೀಸರಿಗೆ ಶರಾಣಾಗಿದ್ದೇಕೆ?

    ಅಹಮದಾಬಾದ್​: ವರನ ತಂದೆಯೊಂದಿಗೆ ವಧುವಿನ ತಾಯಿ ಓಡಿಹೋಗಿದ್ದ ಪ್ರಕರಣ ಇತ್ತೀಚೆಗಷ್ಟೇ ಗುಜರಾತ್​ನ ಸೂರತ್​ನಲ್ಲಿ ಬೆಳಕಿಗೆ ಬಂದು ಎಲ್ಲ ಹುಬ್ಬೇರಿಕೆಗೆ ಕಾರಣವಾಗಿತ್ತು. ವಿಪರ್ಯಾಸವೆಂದರೆ ಈ ಪ್ರಕರಣದಿಂದ ಅವರಿಬ್ಬರ ಮಕ್ಕಳ ಮದುವೆ ಕೂಡ ರದ್ದಾಗಿತ್ತು. ನಾಪತ್ತೆಯಾದ ಹಲವು ದಿನಗಳ ಬಳಿಕ ಇದೀಗ ಪೊಲೀಸರ ಮುಂದೆ ಶರಣಾಗಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕುತೂಹಲ ಮನೆ ಮಾಡಿದೆ.

    ಸೂರತ್ ಕತರ್​ಗಾಮ್​ನ ಜವಳಿ ಉದ್ಯಮಿ ಹಿಮ್ಮತ್​ ಪಟೇಲ್​ ಮಗನಿಗೂ ಮತ್ತು ನವಸಾರಿ ಮೂಲದ ಶೋಭ್ನಾ ರಾವಲ್​ ಮಗಳಿಗೂ ಫೆಬ್ರವರಿ ಎರಡನೇ ವಾರದಲ್ಲಿ ಮದುವೆ ನಿಶ್ಚಯವಾಗಿತ್ತು. ಎರಡು ಕುಟುಂಬಗಳು ಮದುವೆ ತಯಾರಿಯಲ್ಲಿರುವಾಗಲೇ ಹಿಮ್ಮತ್ ಪಟೇಲ್​ ಮತ್ತು ಶೋಭ್ನಾ ರಾವಲ್​ ಪರಾರಿಯಾಗಿದ್ದರು. ಇದು ಎರಡು ಕುಟುಂಬಗಳಿಗೂ ಶಾಕ್​ ನೀಡಿತ್ತು. ಅಲ್ಲದೆ, ಮದುವೆಯನ್ನು ರದ್ದುಪಡಿಸಿದ್ದರು.

    ಜನವರಿ 10ರಿಂದ ನಾಪತ್ತೆಯಾಗಿದ್ದಾರೆ ಎಂದು ಉಭಯ ಕುಟುಂಬಗಳು ದೂರು ನೀಡಿದ್ದವು. ಪ್ರಕರಣ ಬೆನ್ನತ್ತಿದ ಪೊಲೀಸರು ಅವರಿಗಾಗಿ ಹುಡುಕಾಡುತ್ತಿದ್ದರು. ಇದರ ನಡುವೆ ನಮ್ಮಿಂದ ಎರಡು ಕುಟುಂಬಗಳು ಅವಮಾನಕ್ಕೀಡಾಗುತ್ತವೆ ಎಂಬುದನ್ನು ಅರಿತು, ಅವರಾಗಿಯೇ ಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ.

    ಇದೆಲ್ಲಾ ಶುರುವಾಗಿದ್ದು ಬಾಲ್ಯದಲ್ಲೇ
    ಶೋಭ್ನಾ ರಾವಲ್​, ನವಸಾರಿಗೆ ಸ್ಥಳಾಂತರವಾಗುವ ಮುನ್ನ ಪಟೇಲ್​ ಮತ್ತು ರಾವಲ್​ ಕತರ್​ಗಾಮ್​ನಲ್ಲಿ ಅಕ್ಕಪಕ್ಕದ ಮನೆಯವರಾಗಿದ್ದರು. ಹದಿಹರೆಯದಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅನೇಕ ಬಾರಿ ಓಡಿಹೋಗಲು ಯತ್ನಿಸಿದ್ದರು. ಆದರೆ ಸಾಮಾಜಿಕ ಒತ್ತಡದಿಂದ ಇಬ್ಬರ ಮದುವೆ ಸಾಧ್ಯವಾಗಲಿಲ್ಲ. ಬಳಿಕ ರಾವಲ್​ರನ್ನು ಡೈಮಂಡ್​ ದಲ್ಲಾಳಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.

    ಬೇರೆಯಾಗಿದ್ದ ಜೋಡಿ ಹಲವು ವರ್ಷಗಳ ಬಳಿಕ ಮಕ್ಕಳ ಮದುವೆ ನಿಶ್ಚಯದ ವೇಳೆ ಜತೆಯಾದರು. ಮಕ್ಕಳ ಮದುವೆ ನಿಶ್ಚಯವೂ ಆಗಿತ್ತು. ಇದರ ನಡುವೆ ಇಬ್ಬರು ಓಡಿಹೋಗಿದ್ದು, ಎಲ್ಲರಿಗೂ ಶಾಕ್​ ಆಗಿತ್ತು. ಇದೀಗ ಪರಸ್ಪರ ಅರ್ಥ ಮಾಡಿಕೊಂಡು ಪೊಲೀಸರಿಗೆ ಶರಣಾಗಿದ್ದಾರೆ. ಇತ್ತ ಮಕ್ಕಳ ಮದುವೆ ರದ್ದಾಗಿದ್ದು, ಮುಂದೆ ಏನಾಗಲಿದೆ ಎಂದು ಕಾದನೋಡಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts