ತಾವರಗೇರಾ: ರೇಣುಕಾಚಾರ್ಯರು ಎಲ್ಲ ಸಮುದಾಯದವರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಕುಷ್ಟಗಿ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯರು ಹೇಳಿದರು.
ಇದನ್ನೂ ಓದಿ:ಜಗದ್ಗುರು ರೇಣುಕಾಚಾರ್ಯರು ಯಾರ ಸ್ವತ್ತಲ್ಲ
ನಗರದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸೇವಾ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಡಶೇಸಿ ಗೆಜ್ಜೆಭಾವಿ ಮಠದ ಅಭಿನವ ಕರಿಬಸವ ಶಿವಾಚಾರ್ಯರು ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಬೇಕು. ರೇಣುಕಾಚಾರ್ಯರ ತತ್ವಗಳನ್ನು ಅಳವಡಿಸಿ ಕೊಳ್ಳಬೇಕು ಎಂದರು.
ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ ಹಿರೇಮಠ, ಕುಷ್ಟಗಿ ತಾಲೂಕು ಅಧ್ಯಕ್ಷ ಶಿವಕುಮಾರ ಗಂಧದಮಠ, ಕರ್ನಾಟಕ ರತ್ನ ಪ್ರಶಸ್ತಿ ವಿಜೇತ ಶಿವರಾಜ ಶಾಸ್ತ್ರಿ, ಪ್ರಮುಖರಾದ ಸವಿತಾ ಹಿರೇಮಠ, ರಾಚಯ್ಯ ಹಿರೇಮಠ, ಪಾಲಾಕ್ಷಯ್ಯಸ್ವಾಮಿ, ಬಸವರಾಜ ಸಾರಂಗ ಮಠ, ದೊಡ್ಡಬಸಯ್ಯ ಹಿರೇಮಠ, ಉಮೇಶ ಹಿರೇಮಠ, ಶ್ರೀಕರ ಭೂಸನೂರಮಠ, ಚಂದ್ರ ಶೇಖರಯ್ಯ ಹಿರೇಮಠ, ಮಲ್ಲಪ್ಪ ಜುಮಲಾಪೂರ, ಮಂಜುನಾಥ ಇತರರಿದ್ದರು.