More

    ಸಿದ್ಧನಕೊಳ್ಳ ಶ್ರೀಮಠ ಭಾವೈಕ್ಯದ ಸಂಕೇತ

    ಗುಡೂರ: ಪುಣ್ಯ ಕ್ಷೇತ್ರ ಸಿದ್ಧನಕೊಳ್ಳದ ಸಿದ್ಧೇಶ್ವರ ಶ್ರೀಮಠ ಭಾವೈಕ್ಯದ ಮಠವಾಗಿದೆ ಎಂದು ಮಾಜಿ ಶಾಸಕ ಡಾ.ವಿಜಯಾನಂದ ಕಾಶಪ್ಪನವರ ಹೇಳಿದರು.

    ಸಮೀಪದ ಸಿದ್ಧನಕೊಳ್ಳದಲ್ಲಿ ಸಿದ್ಧಪ್ಪಜ್ಜನ ರಾಷ್ಟ್ರೀಯ ಉತ್ಸವಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು. ಸಿದ್ಧೇಶ್ವರ ರಥೋತ್ಸವಕ್ಕೆ ಉದ್ಯಮಿ ಡಾ.ಸಿ.ಕೆ. ಮೌಲಾ ಶರೀಫ್ ರಥಕ್ಕೆ ಪುಷ್ಪಾರ್ಪನೆ ಮಾಡಿದರು. ಇದು ಭಾವೈಕ್ಯದ ಸಂಕೇತವಾಗಿದೆ. ಶ್ರೀಮಠ ಎಲ್ಲ ಜಾತಿ ಜನಾಂಗದ ಭಕ್ತರನ್ನು ಹೊಂದಿದೆ. ಸೂಳೆಭಾವಿಯ ಯುವ ನಟ ಪ್ರವೀಣ ಪತ್ರಿ ಅವರಿಗೆ ಬಾಲಿವುಡ್ ಚಿತ್ರರಂಗದಲ್ಲಿ ಭಗವಂತ ಉಜ್ವಲ ಭವಿಷ್ಯ ನೀಡಲಿ ಎಂದು ಹಾರೈಸಿದರು.

    ಉದ್ಯಮಿ ಡಾ.ಸಿ.ಕೆ. ಮೌಲಾ ಶರೀಫ್ ಮಾತನಾಡಿ, ಡಾ. ಶಿವಕುಮಾರ ಶ್ರೀಗಳು ಸಿದ್ಧಶ್ರೀ ರಾಷ್ಟ್ರೀಯ ಉತ್ಸವದಲ್ಲಿ ಕಲಾವಿದರನ್ನು ಗೌರವಿಸುವುದು, ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

    ಗುಳೇದಗುಡ್ಡ ಮರಡಿ ಮಠದ ಕಾಡಸಿದ್ಧೇಶ್ವರ ಸ್ವಾಮಿಗಳು, ಮೂರನಾಳ ಕ್ಷೇತ್ರದ ಮೇಘರಾಜೇಂದ್ರ ಸ್ವಾಮಿಗಳು, ಡಾ.ಶಿವಕುಮಾರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ವೀರಣ್ಣ ಕರಿಹೊಳಿ, ನಟ ಪ್ರವೀಣ ಪತ್ರಿ, ಗಾಯಕಿ ಮಧುಶ್ರೀ ಭಟ್ಟಾಚಾರ್ಯ, ಡಾ.ಕಿರಣ ಮುಂಡಗೋಡ, ಮಹಾಂತೇಶ ಹಳ್ಳೂರ, ಅಭಯ ವಿರಕ್ತಮಠ ಇತರರು ಇದ್ದರು.

    ವೀರ ಯೋಧನ ಕುಟುಂಬಕ್ಕೆ ಪ್ರಶಸ್ತಿ ಹಣ
    ಸಂಗೀತ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಅವರಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಾಯಕಿ ಮಧುಶ್ರೀ, ಸಿದ್ಧನಕೊಳ್ಳ ಪವಿತ್ರ ಕ್ಷೇತ್ರವಾಗಿದೆ. ಸಿದ್ಧಶ್ರೀ ಪ್ರಶಸ್ತಿ ಪಡೆದಿದ್ದು ಸಂತಸವಾಗಿದೆ. ಪ್ರಶಸ್ತಿ ಜತೆಗೆ ಬಂದಿರುವ 25,000 ರೂ. ಹಣವನ್ನು ಇತ್ತೀಚೆಗೆ ಹುತಾತ್ಮರಾದ ಗದಗ ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದ ವೀರಯೋಧ ವಿರೇಶ ಕುರಹಟ್ಟಿ ಅವರ ಕುಟುಂಬಕ್ಕೆ ನೀಡುತ್ತೇನೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೋಧರ ಸೇವೆ ಅಪಾರ. ಹುತಾತ್ಮ ಯೋಧರ ಕುಟುಂಬಕ್ಕೆ ನಾವೆಲ್ಲರೂ ಗೌರವ ಸಲ್ಲಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts