ಇಳಿಯಿತು ಭಾರ ಬದುಕು ಹಗುರ

ನವದೆಹಲಿ: 2019-20ನೇ ಸಾಲಿನ ಆರ್ಥಿಕ ವರ್ಷದ ಮೊದಲ ದಿನವಾದ ಸೋಮವಾರ(ಏ.1)ಕೇಂದ್ರ ಹಾಗೂ ರಾಜ್ಯ ಬಜೆಟ್​ನಲ್ಲಿ ಘೋಷಿಸಿರುವ ಕೆಲವು ತೆರಿಗೆ ಬದಲಾವಣೆ, ಜಿಎಸ್​ಟಿ ಪರಿಷ್ಕರಣೆ ಘೋಷಣೆಗಳು ಕಾರ್ಯರೂಪಕ್ಕೆ ಬರಲಿವೆ. ಪ್ರಮುಖವಾಗಿ ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿರುವ 5 ಲಕ್ಷ ರೂ.ಗೆ ಏರಿಕೆಗೊಂಡಿರುವ ಆದಾಯ ತೆರಿಗೆ ಮಿತಿ ಅನುಷ್ಠಾನಗೊಳ್ಳುತ್ತಿದ್ದು, ಇದರಿಂದ 3 ಕೋಟಿ ತೆರಿಗೆದಾರರಿಗೆ ಪ್ರಯೋಜನವಾಗಲಿದೆ. ಸ್ಟಾ್ಯಂಡರ್ಡ್ ಡಿಡಕ್ಷನ್ ಮಿತಿ ಯನ್ನು -ಠಿ; 40 ಸಾವಿರದಿಂದ -ಠಿ; 50 ಸಾವಿರಕ್ಕೆ ಹೆಚ್ಚಿಸಿರುವುದೂ ತುಸು ನಿರಾಳ ತರಲಿದೆ.

ಸ್ಟೇಟಸ್ ಮೇಲೆ ಇನ್​ಸೈಟ್! ಐಷಾರಾಮಿ ಜೀವನ ನಡೆಸುವವರು ಬೆಲೆ ಬಾಳುವ ವಸ್ತುಗಳೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡುವ ಮುಂಚೆ ಎರಡೆರಡು ಬಾರಿ ಯೋಚಿಸಿ. ಏಕೆಂದರೆ, ನೀವು ಖರೀದಿಸಿದ ಹೊಸ ಒಡವೆ, ಕಾರು ಇನ್ನಿತರ ದುಬಾರಿ ವಸ್ತುಗಳಿಗೆ ಬಳಸಿದ ಹಣ ಅಪಮಾರ್ಗದ್ದಾಗಿದ್ದರೆ ತೆರಿಗೆ ಸಂಕಷ್ಟ ಎದುರಾಗಬಹುದು. ಆದಾಯ ತೆರಿಗೆ ಇಲಾಖೆ ‘ಇನ್​ಸೈಟ್’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸ್​ಆಪ್, ಇನ್​ಸ್ಟಾಗ್ರಾಂಗಲ್ಲಿ ಪೋಸ್ಟ್ ಆಗುವ ಇಂಥ ಚಿತ್ರಗಳ ಮೇಲೆ ಏ. 1ರಿಂದ ಹದ್ದಿನ ಕಣ್ಣು ಇರಿಸುತ್ತದೆ. ತೆರಿಗೆಗಳ್ಳರ ಮೇಲೆ ವಿವಿಧ ಮೂಲಗಳಿಂದ ನಿಗಾ ಇರಿಸಲು ಮುಂದಾಗಿರುವ ಇಲಾಖೆ, ‘ಇನ್​ಸೈಟ್’ ಮೂಲಕವೂ ವ್ಯಕ್ತಿಗಳ ಜೀವನಶೈಲಿ, ಆದಾಯ ಮೂಲಗಳನ್ನು ಪರಿಶೀಲಿಸಲಿದೆ.

ಬ್ಯಾಂಕ್ ವಿಲೀನ: ಬ್ಯಾಂಕ್ ಆಫ್ ಬರೋಡಾ, ದೇನಾ ಹಾಗೂ ವಿಜಯ ಬ್ಯಾಂಕ್ ಮರ್ಜರ್ : ಏ.1ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಆಫ್ ಬರೋಡಾ, ದೇನಾ ಹಾಗೂ ವಿಜಯ ಬ್ಯಾಂಕ್​ಗಳು ವಿಲೀನಗೊಳ್ಳುತ್ತಿವೆ. ಈ ಮೂಲಕ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಬ್ಯಾಂಕ್ ಆಫ್ ಬರೋಡಾ ಪಾತ್ರವಾಗಲಿದೆ. ಎಲ್ಲ ಮೂರು ಬ್ಯಾಂಕ್​ಗಳ ಹಾಲಿ ಖಾತೆದಾರರ ಸಂಖ್ಯೆಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ವಿಲೀನ ಪ್ರಕ್ರಿಯೆಯಲ್ಲಿ ಬ್ಯಾಂಕ್ ಆಫ್ ಬರೋಡಾದ ಪ್ರತಿ 1000 ಷೇರಿಗೆ ವಿಜಯ ಬ್ಯಾಂಕ್​ಗೆ 402 ಇಕ್ವಿಟಿ ಷೇರುಗಳು ಮತ್ತು ದೇನಾ ಬ್ಯಾಂಕ್ 110 ಷೇರುಗಳು ಸಿಗುವಂತೆ ಒಪ್ಪಂದವಾಗಿದೆ. ಕಳೆದ ಸೆಪ್ಟೆಂಬರ್​ನಲ್ಲಿ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾಗೆ 5,042 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

2ನೇ ಮನೆ ಸಾಲಕ್ಕೂ ವಿನಾಯಿತಿ

ತೆರಿಗೆದಾರರು 2ನೇ ಮನೆ ನಿರ್ಮಾಣ ಅಥವಾ ಖರೀದಿಗೆ ಪಡೆದ ಸಾಲದ ಮೇಲಿನ ಬಡ್ಡಿ ಪಾವತಿಗೂ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ತೆರಿಗೆದಾರ ಎರಡು ಮನೆ ಹೊಂದಿದ್ದರೆ ತಾನಿಚ್ಛಿಸಿದ ಮನೆಯನ್ನು ಸ್ವಂತ ಬಳಕೆಗೂ ಮತ್ತು ಇನ್ನೊಂದು ಮನೆಯಿಂದ ಬರುವ ಬಾಡಿಗೆಯನ್ನು ಆದಾಯಕ್ಕೂ ತೋರಿಸಬಹುದು. ಅದೇ ರೀತಿ ವಾರ್ಷಿಕವಾಗಿ ಬಾಡಿಗೆ ಮೂಲಕ ಬರುವ -ಠಿ; 2.40 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕಡಿತ ಇರುವುದಿಲ್ಲ.

ಕಾರು ದುಬಾರಿ

ಆಟೋಮೊಬೈಲ್ ವಲಯದ ದಿಗ್ಗಜ ಮಹಿಂದ್ರಾ ಆಂಡ್ ಮಹಿಂದ್ರಾ ತನ್ನ ಕಾರುಗಳ ದರವನ್ನು -ಠಿ; 5 ಸಾವಿರದಿಂದ -ಠಿ; 73 ಸಾವಿರದವರೆಗೆ ಏರಿಕೆ ಮಾಡಿದೆ. ಡಟ್ಸನ್ ಕಾರಿನ ದರ

ಶೇ. 4 ಹೆಚ್ಚಳವಾಗಲಿದೆ. ಟಾಟಾ ಮೋಟಾರ್ಸ್ ಕಾರುಗಳ ದರ -ಠಿ; 25 ಸಾವಿರದವರೆಗೆ ಏರಲಿದೆ. ದ್ವಿಚಕ್ರ ಮೋಟಾರು ವಾಹನ ತಯಾರಿಸುವ ಕವಾಸಾಕಿ ಮೋಟಾರ್ಸ್ ಶೇ. 7 ದರ ಏರಿಸಲಿದೆ.

ಬದಲಾಗುವುದೇನು?

# ಭೌತಿಕ ಷೇರು ಪತ್ರ ಬಂದ್, ಡಿಜಿಟಲ್ ರೂಪದಲ್ಲಷ್ಟೇ ವಿತರಣೆ. ಈಗಾಗಲೇ ಹೊಂದಿರುವ ಭೌತಿಕ ಷೇರು ಪ್ರಮಾಣಪತ್ರವನ್ನು ಡಿಜಿಟಲ್ ಆಗಿ ಪರಿವರ್ತಿಸಿಕೊಳ್ಳಬಹುದು.

# 125ಸಿಸಿ ಸಾಮರ್ಥ್ಯದ ದ್ವಿಚಕ್ರ ಮೋಟಾರು ವಾಹನಕ್ಕೆ ಆಂಟಿ ಲಾಕ್ ಬ್ರೇಕ್ ಅಳವಡಿಕೆ ಮತ್ತು 125ಸಿಸಿಯೊಳಗಿನ ವಾಹನಗಳಿಗೆ ಕಾಂಬಿ ಬ್ರೇಕಿಂಗ್ ವ್ಯವಸ್ಥೆ ಕಡ್ಡಾಯ.

# ವಿದ್ಯುತ್ ಬಿಲ್ ಪ್ರೀಪೇಡ್ ವ್ಯವಸ್ಥೆ. ಮನೆಗಳಿಗೆ ಹೊಸ ಪ್ರೀಪೇಡ್ ಮೀಟರ್ ಅಳವಡಿಕೆ.

# ಎಕ್ಸ್​ಟ್ರನಲ್ ಬೆಂಚ್​ವಾರ್ಕ್​ಗೆ ಅನುಗುಣವಾಗಿ ಸಾಲದ ಬಡ್ಡಿ ದರ ನಿಗದಿ ಪಡಿಸಲು ಬ್ಯಾಂಕ್​ಗಳಿಗೆ ನೀಡಿರುವ ಆರ್​ಬಿಐ ಸೂಚನೆ ಕಡ್ಡಾಯ ಜಾರಿ. ಇದರಿಂದ ಬಡ್ಡಿ ದರ ತಗ್ಗಲಿದೆ.

# ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್​ಗಳ ಮೇಲಿನ ಜಿಎಸ್​ಟಿ ಶೇ. 12ರಿಂದ 5ಕ್ಕೆ ಇಳಿಕೆ ಮತ್ತು ಕೈಗೆಟಕುವ ದರದ ಮನೆಗಳ ಮೇಲಿನ ಜಿಎಸ್​ಟಿ ಶೇ. 8ರಿಂದ 1ಕ್ಕೆ ಇಳಿಕೆ

# ಇಪಿಎಫ್ ಚಂದಾದಾರರು ಉದ್ಯೋಗ ಬದಲಿಸಿದಾಗ ಪಿಎಫ್ ವರ್ಗಾವಣೆಗೆ ಪ್ರತ್ಯೇಕವಾಗಿ ಅರ್ಜಿ ನೀಡಬೇಕಿಲ್ಲ. ಆನ್​ಲೈನ್ ಮೂಲಕ ಮಾಹಿತಿ ನೀಡಿದರೆ, ಪಿಎಫ್ ಖಾತೆ ತಾನಾಗಿಯೇ ವರ್ಗಾವಣೆ ಆಗುತ್ತದೆ.

# ಮ್ಯೂಚುವಲ್ ಫಂಡ್​ಗೆ ಸಂಬಂಧಿಸಿದಂತೆ ಸೆಬಿ ಮಾರ್ಪಾಟು ಮಾಡಿರುವ ಕೆಲವು ನಿಯಮ ಜಾರಿ.

ಟಿಡಿಎಸ್ ಮಿತಿ ಹೆಚ್ಚಳ

ಠೇವಣಿಗೆ ದೊರೆಯುವ ಬಡ್ಡಿಯ ಆದಾಯಕ್ಕೆ ಮೂಲದಲ್ಲೇ ತೆರಿಗೆ ಕಡಿತದ (ಟಿಡಿಎಸ್) ಮಿತಿಯನ್ನು -ಠಿ; 10 ಸಾವಿರದಿಂದ -ಠಿ; 40 ಸಾವಿರಕ್ಕೆ ಏರಿಸಲಾಗಿದೆ. ಈವರೆಗೆ ಠೇವಣಿ ಮೇಲಿನ ಟಿಡಿಎಸ್ ತಪ್ಪಿಸಲು 15ಜಿ ಅರ್ಜಿ ನೀಡಬೇಕಿತ್ತು. ಇನ್ಮುಂದೆ ಈ ರಗಳೆ (ವಾರ್ಷಿಕ -ಠಿ; 40 ಸಾವಿರದವರೆಗೆ) ಇರುವುದಿಲ್ಲ.

Leave a Reply

Your email address will not be published. Required fields are marked *