ಕೋಲಾರ: ಬೇಡಿಕೆಗೆ ತಕ್ಕಂತೆ ಆಹಾರ ಉತ್ಪನ್ನ ಬೆಳೆಯಲು ರೈತರು ಒತ್ತು ನೀಡಬೇಕು. ಎಲ್ಲರೂ ಒಂದೇ ರೀತಿಯ ಬೆಳೆ ಬೆಳೆಯುವುದರಿಂದ ಯಾರಿಗೂ ಆದಾಯ ದೊರಕುವುದಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ ಎಚ್ಚರಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಟ್ಯಾಕ್ಸಿ ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆಯಲ್ಲಿ ರಾಶಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಲ ಬದಲಾದಂತೆ ಕೃಷಿ ಕ್ಷೇತ್ರದಲ್ಲೂ ಪದ್ಧತಿ ಬದಲಾಗುತ್ತಿವೆ. ಇದರಿಂದಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯೂ ಅತಿಯಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಬ್ಬ ರೈತ ಒಂದು ಬೆಳೆಯಲ್ಲಿ ಲಾಭಗಳಿಸಿದಾಗ ಎಲ್ಲರೂ ಅದರತ್ತ ಮುಖಮಾಡುತ್ತಾರೆ. ತರಕಾರಿ, ಹಣ್ಣುಗಳು ಪ್ರತಿದಿನ ಜನಕ್ಕೆ ಬೇಕಾಗಿರುವ ಪದಾರ್ಥಗಳೇ. ಒಬ್ಬೊಬ್ಬರು ಒಂದೊAದು ಬೆಳೆ ಬೆಳೆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಬೆಲೆಯೂ ಸಿಗುತ್ತದೆ ಎಂದು ತಿಳಿಸಿದರು.
ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಿದರೆ ಮತ್ತೊಂದು ಕಡೆಯಿಂದ ಪುನಃ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಒತ್ತಡ ತಂದು ತೆರವು ಮಾಡದಂತೆ ಮಾಡುತ್ತಾರೆ. ಜನರೇ ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ಎಪಿಎಂಸಿ ಮಾರುಕಟ್ಟೆಗೆ ಜಾಗ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.
ಪಿ-ನಂಬರ್ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಕಂದಾಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸಾರ್ವಜನಿಕರಿಗೆ ಭೂ ಮಂಜೂರು ಬಗ್ಗೆ ಪರಿಶೀಲಿಸಿ ಪಿ ನಂಬರ್ ತೆರವುಗೊಳಿಸಲಾಗುತ್ತಿದೆ ಎಂದರು.
* ಪ್ರಕೃತಿಯೊಂದಿಗೆ ಹೊಂದಿಕೊಂಡು ಸಾಗಲಿ
ಅರಣ್ಯ, ನದಿ ಇದ್ದ ಕಡೆಯೆಲ್ಲ ಅನಾದಿ ಕಾಲದಿಂದಲೇ ರೈತರು ಬೆಳೆ ಬೆಳೆಯುವ ಮೂಲಕ ಕೃಷಿ ಸಂಸ್ಕೃತಿ ಹುಟ್ಟು ಹಾಕಿದ್ದಾರೆ ಎಂದು ಅರಣ್ಯ ಉಪ ಸಂರಕ್ಷಣಾಽಕಾರಿ ಏಡುಕೊಂಡಲು ಅಭಿಪ್ರಾಯಪಟ್ಟರು.
ಭಾತರದಲ್ಲಿ ಕೃಷಿ ಕ್ಷೇತ್ರವು ಬಹಳ ಸಂಕಷÀ್ಟದಲ್ಲಿದ್ದು, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗದಿರುವುದು ಬೇಸರದ ಸಂಗತಿ. ವಿಮಾ ಪರಿಹಾರವು ಸಕಾಲಕ್ಕೆ ದೊರೆಯುತ್ತಿಲ್ಲ, ಕಾಂಕ್ರೀಟಿಕರಣ, ಪ್ರಕೃತಿ ನಾಶದಿಂದ ಮಳೆ ಅಭಾವ ಎದುರಿಸಲಾಗುತ್ತಿದೆ. ಪ್ರಕೃತಿಯೊಂದಿಗೆ ಮನುಷ್ಯ ಹೊಂದಿಕೊAಡು ಹೋಗಬೇಕಿದೆ ಎಂದರು.
ದೇಶದಲ್ಲಿ ಆಹಾರ ಕೊರತೆ ಎದುರಾದಾಗ ರೈತರು ಹಸಿರುಕ್ರಾಂತಿ ಮಾಡುವ ಮೂಲಕ ಸಮಸ್ಯೆ ನಿವಾರಣೆಗೆ ನಿಂತರು. ಆದರೆ, ಈಗ ಭೂಮಿ ಫಲವತ್ತತೆ ಕಡಿಮೆಯಾಗಿ ವಿಷಕಾರಿಯಾಗಿದೆ. ಪ್ರಕೃತಿಯೂ ವಿಷಕಾರಿಯಾಗಿ ಮಳೆ ಕೊರತೆ ಎದುರಾಗಿದೆ. ಇದು ರೈತರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.
* ಮಾರುಕಟ್ಟೆಗೆ ಜಾಗ ಕಲ್ಪಿಸಿ
ರೈತ ಬೆಳೆದ ಫಸಲು ಮಾರಲು ಮಾರುಕಟ್ಟೆಗೆ ತಂದರೆ ಅಲ್ಲಿ ಮಾರಾಟ ಮಾಡಲು ಜಾಗ ಇಲ್ಲದಂತಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಶೀಘ್ರ ಜಾಗ ಮಂಜೂರು ಮಾಡಬೇಕು ಎಂದು ಟೊಮ್ಯಾಟೊ ಮಂಡಿ ಮಾಲೀಕ ಕೆ.ಎನ್.ಪ್ರಕಾಶ್ ಒತ್ತಾಯಿಸಿದರು. ರೈತ ನಷ್ಟಕ್ಕೆ ಒಳಗಾದಾಗ ಸರ್ಕಾರಗಳು ಮಧ್ಯ ಪ್ರವೇಶಿಸಿ, ರೈತರ ನೆರವಿಗೆ ಧಾವಿಸಬೇಕು ಎಂದರು.
* ಭೂಮಿ ಮಂಜೂರು ಮಾಡಿಸಿ
ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಏಡುಕೊಂಡಲು ಸರ್ಕಾರಿ ಆಸ್ತಿ ರಕ್ಷಣೆ ಮಾಡಲು ಮುಂದಾಗಿದ್ದು, ಈ ಹಿಂದಿನ ಅಧಿಕಾರಿಗಳು ಯಾರೂ ಈ ಕೆಲಸ ಮಾಡಲಿಲ್ಲ. ಆದರೆ, ಗೋಮಾಳ, ಅರಣ್ಯ ಜಮೀನು ಯಾವುದು ಎಂದು ಗೊತ್ತಿಲ್ಲದೆ ರೈತರು ಸಾಗುವಳಿ ಮಾಡಿಕೊಂಡಿದ್ದರು. ಜಿಲ್ಲಾಡಳಿತದ ತಪ್ಪಿನಿಂದ ಈಗ ರೈತ ಭೂಮಿ ಕಳೆದುಕೊಂಡಿದ್ದಾರೆ. ಕನಿಷ್ಠ ಒಂದೂ ಎಕರೆಯಾದರೂ ಮಂಜೂರು ಮಾಡಿಸಿಕೊಡಲು ರೈತ ಸಂಘ ಹೋರಾಟ ರೂಪಿಸಬೇಕು ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ.ಮುನಿರಾಜು ಕಿವಿಮಾತು ಹೇಳಿದರು.
* ಮಣ್ಣೇ ಸತ್ತರೆ ಎಲ್ಲಿಗೆ..?
ಸಕಲ ಜೀವಿ ಸತ್ತರೆ ಮಣ್ಣಿಗೆ ಹೋಗಬೇಕು, ಆದರೆ, ಮಣ್ಣೇ ಸತ್ತರೆ ಎಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಮಣ್ಣಿಗೆ ಮಾರಕವಾಗಿರುವ ಕಳೆನಾಶಕಗಳನ್ನು ನಿಷೇಧಿಸಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಹವಾಮಾನ ವೈಪರೀತ್ಯವೋ, ಇನ್ಯಾವುದೋ ಕಾರಣಗಳಿಂದ ಗುಣಮಟ್ಟದ ತರಕಾರಿ ಉತ್ಪಾದನೆ ಕುಸಿಯುತ್ತಿದೆ. ಇದನ್ನು ತಡೆಯಲು ಸಂಬAಧಪಟ್ಟ ಇಲಾಖಾಽಕಾರಿಗಳು ತರಬೇತಿ ನೀಡಬೇಕು. ರೈತರು ಎದುರಿಸುತ್ತಿರುವ ಎಪಿಎಂಸಿ ಜಾಗ ಸಮಸ್ಯೆ, ಪಿ-ನಂಬರ್ ದುರಸ್ತಿ ಸೇರಿ ಹಲವು ಸಮಸ್ಯೆ ಬಗೆಹರಿಸಲು ಜಿಲ್ಲಾಮಟ್ಟದ ಅಽಕಾರಿಗಳು ಕ್ರಮವಹಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್‌ಕುಮಾರ್, ಎಪಿಎಂಸಿ ನಿರ್ದೇಶಕ ರವಿಕುಮಾರ್, ಸಹಾಯಕ ನಿರ್ದೇಶಕ ರವಿಕುಮಾರ್, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಪದಾಧಿಕಾರಿಗಳಾದ ಬಂಗಾರಿ ಮಂಜು, ಮರಗಲ್ ಶ್ರೀನಿವಾಸ್ ಇದ್ದರು.