ಸಮೂಹ ನೃತ್ಯ ಸ್ಫರ್ಧೆಯಲ್ಲಿ ಗೋಕಾಕ ಕಾಲೇಜು ಪ್ರಥಮ

blank

ಗೋಕಾಕ: ನಗರದ ಶ್ರೀಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 21ನೇ ಸತೀಶ್ ಶುಗರ್ಸ್‌ ಅವಾರ್ಡ್ಸ್‌ನ ಅಂತಿಮ ಹಂತದ ವಿವಿಧ ಸ್ಫರ್ಧೆಗಳ ವಿಜೇತರಿಗೆ ಶುಕ್ರವಾರ ಬಹುಮಾನ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗದ ಜನಪದ ಗಾಯನ ಸ್ಫರ್ಧೆಯಲ್ಲಿ ನಗರದ ಶಫರ್ಡ್ ಮಿಷನ್ ಆಂಗ್ಲ ಮಾಧ್ಯಮ ಶಾಲೆಯ ರಾಘವೇಂದ್ರ ಖಾನಪ್ಪನವರ ಪ್ರಥಮ, ಶಂಕರಲಿಂಗ ಪ್ರೌಢಶಾಲೆಯ ವಿದ್ಯೋಧನ ಗಂಟೆನ್ನವರ ದ್ವಿತೀಯ, ಫೋರ್ಬ್ಸ್ ಅಕಾಡೆಮಿಯ ಗೋಕಾಕ ಫಾಲ್ಸ್‌ನ ಸುನಿಧಿ ಮುತಾಲಿಕ ದೇಸಾಯಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಾಥಮಿಕ ವಿಭಾಗದ ಗಾಯನ ಸ್ಫರ್ಧೆಯಲ್ಲಿ ನಗರದ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆಯ ಧ್ರುತಿ ಚಿಗಡನ್ನವರ ಪ್ರಥಮ, ಎಂ.ಎನ್.ಮಟ್ಟಿಕಲ್ಲಿ ಪ್ರಾಥಮಿಕ ಶಾಲೆಯ ರಾಜಶೇಖರ ಚಿಗಡೊಳ್ಳಿ ದ್ವಿತೀಯ, ಕೆಎಚ್‌ಪಿಎಸ್ ಬೀಸನಕೊಪ್ಪದ ಹನಮಂತ ವಡೇರಹಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜೇತರಿಗೆ ಪ್ರಥಮ 15,000 ರೂ. ದ್ವಿತೀಯ 10,000 ರೂ. ಹಾಗೂ ತೃತೀಯ 7,000 ರೂ. ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಪ್ರಾಥಮಿಕ ಶಾಲಾ ವಿಭಾಗದ ಜನಪದ ನೃತ್ಯ ಸ್ಫರ್ಧೆಯಲ್ಲಿ ಮೂಡಲಗಿಯ ಎಂಎಂಡಿಆರ್‌ಎಸ್‌ನ ಅಪೂರ್ವ ಕುಲಕರ್ಣಿ ತಂಡ ಪ್ರಥಮ, ನಗರದ ಎಂ.ಎನ್.ಮಟ್ಟಿಕಲ್ಲಿ ಪ್ರಾಥಮಿಕ ಶಾಲೆಯ ಅಮೃತಾ ಹುರಳಿ ತಂಡ ದ್ವಿತೀಯ, ಬಳೋಬಾಳದ ಎನ್‌ಎಸ್‌ಎಫ್ ಶಾಲೆಯ ಸೌಮ್ಯ ಪೋಟಿ ತಂಡ ತೃತೀಯ ಸ್ಥಾನ ಪಡೆದಿದ್ದಾರೆ.

ಕಾಲೇಜು ವಿಭಾಗ ಸಮೂಹ ನೃತ್ಯ ಸ್ಫರ್ಧೆಯಲ್ಲಿ ನಗರದ ಸರ್ಕಾರಿ ಪಪೂ ಕಾಲೇಜಿನ ಅಶ್ವಿನಿ ದಾವನಿ ತಂಡ ಪ್ರಥಮ, ಜೆಎಸ್‌ಎಸ್ ಕಾಲೇಜಿನ ರೇಷ್ಮಾ ಗುಡಿ ತಂಡ ದ್ವಿತೀಯ ಹಾಗೂ ಮರಡಿಮಠದ ಎಸ್.ಜಿ. ಪಪೂ ಕಾಲೇಜಿನ ಗೀತಾ ಹುಕ್ಕೇರಿ ತಂಡ ತೃತೀಯ ಸ್ಥಾನ ಪಡೆದಿದೆ. ವಿಜೇತ ತಂಡಗಳಿಗೆ ಪ್ರಥಮ 50,000 ರೂ. ದ್ವಿತೀಯ 30,000 ರೂ ಹಾಗೂ ತೃತೀಯ 20,000 ರೂ. ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಡಿವೈಎಸ್ಪಿ ಡಿ.ಎಚ್.ಮುಲ್ಲಾ, ಡಿಡಿಪಿಐ ಆರ್.ಎಸ್.ಸೀತಾರಾಮ, ಸಿಪಿಐಗಳಾದ ಶ್ರೀಶೈಲ ಬ್ಯಾಕೂಡ, ಸುರೇಶಬಾಬು, ಪಿಎಸ್‌ಐಗಳಾದ ಕೆ.ವಾಲೀಕಾರ, ಕಿರಣ ಮೋಹಿತೆ, ಬಿಇಒಗಳಾದ ಅಜಿತ್ ಮನ್ನಿಕೇರಿ, ಜಿ.ಬಿ.ಬಳಗಾರ, ತಾಪಂ ಇಒ ಪರಶುರಾಮ ಘಸ್ತಿ, ಎಲ್.ಕೆ.ತೋರಣಗಟ್ಟಿ, ಬಸವರಾಜ ಮಾಲದಿನ್ನಿ, ಎ.ಬಿ.ಮಲಬನ್ನವರ, ಪ್ರಾಚಾರ್ಯ ಪಿ.ಎಂ.ಲಕ್ಕಶೆಟ್ಟಿ, ವೈ.ಬಿ.ಪಾಟೀಲ, ಪಿ.ಡಿ.ಹಿರೇಮಠ, ರಿಯಾಜ್ ಚೌಗಲಾ, ಜುಬೇರ ಮಿರ್ಜಾಬಾಯಿ ಇತರರಿದ್ದರು.18-2ಎ

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…