17.8 C
Bengaluru
Wednesday, January 22, 2020

ಕರಾವಳಿಯ ಮರಳು ಮಿಶ್ರಿತ ಮಣ್ಣಿನಲ್ಲಿ ಶೇಂಗಾ ಬಿತ್ತನೆಗೆ ವಿನೂತನ ಟಿಲ್ಲರ್ ಕೂರಿಗೆ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಕೋಟ: ಕರಾವಳಿಯ ಮರಳು ಮಿಶ್ರಿತ ಮಣ್ಣಿನಲ್ಲಿ ಶೇಂಗಾ ಬೆಳೆಯುವ ರೈತರು ಹೆಚ್ಚಿದ್ದಾರೆ. ಇದರಲ್ಲಿ ಉಳುಮೆಯಿಂದ ಹಿಡಿದು ಬಿತ್ತನೆ ಕಾರ್ಯದವರೆಗೂ ಶ್ರಮ ಹೆಚ್ಚಿದೆ. ಈ ಶ್ರಮ ಕಡಿಮೆ ಮಾಡುವ ಉದ್ದೇಶದಿಂದ ಕೋಟತಟ್ಟು ನಿವಾಸಿ ಟಿಲ್ಲರ್ ಕೂರಿಗೆ ಆವಿಷ್ಕರಿಸಿದ್ದಾರೆ.
ಕೋಟತಟ್ಟು ನಿವಾಸಿ ಆನಂದ ಪೂಜಾರಿ ಪುತ್ರನ ಸಹಕಾರದೊಂದಿಗೆ ವಿನೂತನ ಮಾದರಿಯ ಯಂತ್ರ ಕಂಡುಹಿಡಿದಿದ್ದು, ತನ್ನ ಟಿಲ್ಲರ್‌ಗೆ ಬೈಕ್ ಚೈನ್ ಹಾಗೂ ಅದರ ಸಾಕೆಟ್‌ಗಳನ್ನು ಜೋಡಿಸಿ ಕೂರಿಗೆ ಮಾದರಿಯಲ್ಲಿ ಶೇಂಗಾ ಬಿತ್ತುವ ಕೆಲಸ ಮಾಡಿದ್ದಾರೆ.
ಮೆಕ್ಯಾನಿಕ್ ರಮೇಶ್ ಆಚಾರ್ಯ ನೆರವಿನೊಂದಿಗೆ, ಪುತ್ರ ಗಣೇಶ್ ಪೂಜಾರಿ ಅಂತರ್ಜಾಲದ ಮಾಹಿತಿ ನೆರವಿನಿಂದ ಕೂರಿಗೆ ಟಿಲ್ಲರ್ ರಚಿಸಿದ್ದಾರೆ. ಈ ಯಂತ್ರದಿಂದ ಕೂಲಿಯಾಳುಗಳು ಸಿಗುವುದಿಲ್ಲವೆಂಬ ಭಯವಿಲ್ಲ. ಕಡಿಮೆ ಸಮಯ ಮತ್ತು ವೇಗವಾಗಿ ಬಿತ್ತನೆ ಕಾರ್ಯ ನಡೆಸಬಹುದು. ಇದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ಆರಂಭದಲ್ಲಿ ಕೆಲವರು ನಮ್ಮನ್ನು ಹೀಯಾಳಿಸಿದ್ದುಂಟು. ಈಗ ಎಲ್ಲ ಕೃಷಿಕರು ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪರಿಶ್ರಮದಿಂದ ಈ ಯಂತ್ರ ನಿರ್ಮಾಣದಲ್ಲಿ ಯಶಸ್ಸು ಕಂಡಿದ್ದೇವೆ ಎಂದು ಆನಂದ ಪೂಜಾರಿ ಹೇಳಿದ್ದಾರೆ.

ಒಂದೇ ದಿನ ಮೂರು ಎಕರೆ ಬಿತ್ತನೆ: ಕೂಲಿಯಾಳುಗಳನ್ನು ಬಳಸಿಕೊಂಡರೆ ಒಂದು ದಿನಕ್ಕೆ ಒಂದು ಎಕರೆ ಮಾತ್ರ ಬಿತ್ತನೆ ಮಾಡಬಹುದು. ಆದರೆ ಈ ಕೂರಿಗೆ ಟಿಲ್ಲರ್ ಬಳಸಿ ಒಂದು ದಿನಕ್ಕೆ ಮೂರು ಎಕರೆ ಶೇಂಗಾ ಬಿತ್ತನೆ ಮಾಡಬಹುದು. ಆಧುನಿಕ ಯುಗದಲ್ಲಿ ಕೃಷಿಕನಿಗೆ ಪೂರಕ ಕೊಡುಗೆ ಇದು. ಕೂಲಿಯಾಳಗಳ ನೆರವಿಲ್ಲದೆ ರೈತ ಹೆಚ್ಚು ಲಾಭ ಗಳಿಸಬಹುದು.

ಕೃಷಿ ಕಾಯಕದಲ್ಲಿ ಏನಾದರೂ ಸಾಧನೆ ಮಾಡುವ ಉದ್ದೇಶದಿಂದ ನಾನು ಹಾಗೂ ಪುತ್ರ ಅಂತರ್ಜಾಲದ ಸಹಾಯ ಪಡೆದು ಈ ಯಂತ್ರ ನಿರ್ಮಿಸಿದ್ದೇವೆ. ಇನ್ನು ಮುಂದೆ ಶೇಂಗಾ ಗಿಡ ಭೂಮಿಯಿಂದ ಬೇರ್ಪಡಿಸುವ ಯಂತ್ರ ನಿರ್ಮಿಸುವ ಯೋಜನೆ ಇದೆ.
ಆನಂದ್ ಪೂಜಾರಿ, ಕಲ್ಮಾಡಿ ರಸ್ತೆ ಕೋಟತಟ್ಟು -ಪ್ರಗತಿಪರ ಕೃಷಿಕ

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಂದಷ್ಟು ಅನುಕೂಲ. ಸ್ಥಳೀಯವಾಗಿ ಆನಂದ ಪೂಜಾರಿ ನಿರ್ಮಿಸಿದ ಈ ಕೂರಿಗೆ ಶೇಂಗಾ ಬಿತ್ತನೆಯ ಯಂತ್ರ ಕೃಷಿಕರಿಗೆ ವರದಾನವಾಗಿದೆ. ಬಿತ್ತನೆ ಕೆಲಸವನ್ನು ಸುಲಭ ಮಾಡಿಕೊಟ್ಟಿದೆ.
ವಳಮಾಡು ಕೃಷ್ಣ ಮರಕಾಲ, ಕೃಷಿಕರು ಕೋಟತಟ್ಟು.

ರವೀಂದ್ರ ಕೋಟ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...