ಋತುಗಳ ಅನುಸಾರವಾಗಿ ಬದಲಾಗುವ ಹವಾಮಾನಕ್ಕೆ ಅನಾರೋಗ್ಯವು ಉಂಟಾಗುವುದು ಸಹಜ ಪ್ರಕ್ರಿಯೆ. ಇಂತಹ ಸಂದರ್ಭಗಳಲ್ಲಿ ಗ್ರೀನ್ ಟೀ ತುಂಬಾ ಉತ್ತಮ. ಹೆಚ್ಚಿನ ಜನರು ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ತೂಕ ನಿಯಂತ್ರಣಕ್ಕಾಗಿ ಗ್ರೀನ್ ಟೀ ಕುಡಿಯುತ್ತಾರೆ. ಇದು ಕೇವಲ ತೂಕ ಕಡಿಮೆ ಮಾಡುವುದಲ್ಲದೇ ಹೃದಯ ಸಂಬಂಧಿ ಸಮಸ್ಯೆ ಹಾಗೂ ಕರುಳಿನ ಆರೋಗ್ಯಕ್ಕೂ ಉತ್ತಮವಾಗಿದೆ. ದೀರ್ಘಕಾಲ ನಿಯಮಿತವಾಗಿ ಗ್ರೀನ್ ಟೀ ಕುಡಿಯುವುದು ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಹಲವಾರು ರೋಗಕ್ಕೆ ರಾಮಬಾಣ
ಹೆಚ್ಚಿನ ಜನರು ಗ್ರೀನ್ ಟೀ ಅಂದ್ರೆ ಮುಖ ತಿರುಗಿಸಿಕೊಳ್ಳುತ್ತಾರೆ. ಕನಿಷ್ಠ ಪಕ್ಷ ಅದರ ಉಪಯೊಗವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲ್ಲ. ಈ ಗ್ರೀನ್ ಟೀ, ಹಲವಾರು ಗಿಡ ಮೂಲಿಕೆಯಿಂದ ಕೂಡಿದ್ದು, ಹಲವಾರು ಕಾಯಿಲೆಗಳಿಗೆ ಮದ್ದಾಗಿದೆ. ಇದು ಪರಿಧಮನಿಯ ಕಾಯಿಲೆ, ಟೈಪ್ 2 ಮಧುಮೇಹ ಮತ್ತು ಬೊಜ್ಜು, ಚರ್ಮ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಸೌಂದರ್ಯವರ್ಧಕ
ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರೊಂದಿಗೆ ತ್ವಚ್ಛೆಯ ಅಂದವನ್ನು ಹೆಚ್ಚಿಸುವ ಗುಣವೂ ಇದರಲ್ಲಿದೆ. ಸೌಂದರ್ಯ ಉತ್ಪನ್ನಗಳಲ್ಲಿ ಕೂಡ ಗ್ರೀನ್ ಟೀಯನ್ನು ಬಳಕೆ ಮಾಡುತ್ತಾರೆ. ಇದು ಯುವಿ ಕಿರಣಗಳಿಂದ ತ್ವಚ್ಚೆಯನ್ನು ರಕ್ಷಿಸುವ ಗುಣ, ಅಕಾಲಿಕ ನೆರೆ ತಡೆಯುವುದು, ಉರಿಯೂತದ ಲಕ್ಷಣಗಳನ್ನು ನಿವಾರಿಸುತ್ತದೆ. ತ್ವಚ್ಚೆಯ ಸುಕ್ಕುಗಳನ್ನೂ ನಿಯಂತ್ರಿಸುತ್ತದೆ. ಇದು ಮೇಧೋಗ್ರಂಥಿಗಳ ಸ್ರಾವವನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗ್ರೀನ್ ಟೀಯು ಪ್ರತಿಯೊಬ್ಬರ ಚರ್ಮಕ್ಕೂ ಒಗ್ಗುವುದಿಲ್ಲ, ಅದಕ್ಕಾಗಿ ಅದರ ಬಳಕೆಯ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮವಾಗಿದೆ.
ಅತಿಯಾದರೆ ವಿಷ
ಇನ್ನು ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಅನಾರೋಗ್ಯ ಸಂಭವಿಸುವ ಲಕ್ಷಣಗಳು ಇವೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಕುಡಿದರೆ ಇದು ಪಚನಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪಾಲಿಫಿನಾಲ್ಗಳು ದೇಹದಲ್ಲಿ ಗ್ಯಾಸ್ಟ್ರಿಕ್ ಆಮ್ಲ ಹೆಚ್ಚಿಸುವುದನ್ನು ತಡೆಯುತ್ತದೆ. ಹೊಟ್ಟೆ ನೋವು ಮತ್ತು ಸೆಳೆತದ ಸಮಸ್ಯೆ ಆಗತ್ತದೆ. ಇನ್ನು ಊಟದ ಜೊತೆಗೆ ಗ್ರೀನ್ ಟೀ ಸೇವಿಸುವುದರಿಂದ ಇದು ದೇಹದಲ್ಲಿ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.
ಔಷಧಿಗಳಿಗೆ ಪೂರಕ
ಔಷಧಿ ಸೇವನೆಯ ನಂತರ ಗ್ರೀನ್ ಟೀ ಸೇವಿಸಿದರೆ, ಔಷಧದಲ್ಲಿರುವ ರಾಸಾಯನಿಕಗಳು ಗ್ರೀನ್ ಟೀನೊಂದಿಗೆ ಬೆರೆತು ದೇಹದಲ್ಲಿ ಆಮ್ಲೀಯತೆ ಹೆಚ್ಚಿಸುತ್ತದೆ. ಗ್ರೀನ್ ಟೀನೊಂದಿಗೆ ಔಷಧ ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದೆ. ಇನ್ನು ಗ್ರೀನ್ ಟೀ ಅನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಒಟ್ಟಾರೆ ಆರೋಗ್ಯಕ್ಕೆ ಉತ್ತಮ. ಹಾಗಾಗಿ ನಿಯಮಿತವಾಗಿ ಗ್ರೀನ್ ಟೀ ಸೇವಿಸುವ ಸರಿಯಾದ ಸಮಯ ಮತ್ತು ವಿಧಾನ ತಿಳಿಯಬೇಕು.
ಸಮಯಕ್ಕೆ ಅನುಸಾರವಾಗಿ ಸೇವನೆ
ಗ್ರೀನ್ ಹಾಗೂ ಊಟ ಮಾಡುವುದಕ್ಕೆ ಒಂದು ಗಂಟೆ ಅಂತರವಿರಬೇಕು. ಇದು ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾಟೆಚಿನ್‌ಗಳು ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ದಿನಕ್ಕೆ 3 ಕಪ್ ಗಿಂತ ಹೆಚ್ಚಿನ ಗ್ರೀನ್ ಟೀ ಸೇವನೆಯಿಂದ ಕೆಲವು ಸಮಸ್ಯೆಗಳು ಉಂಟಾಗುತ್ತವೆ.
ಪ್ರತಿ ಹವಾಮಾನಕ್ಕೂ ಉತ್ತಮ
ಗ್ರೀನ್ ಟೀಯ ಸೇವನೆಯಿಂದ ಎಂತಹ ಹವಾಮಾನವಿದ್ದರು ಹೊಂದಿಕೊಳ್ಳುವಂತೆ ಮಾಡುತ್ತದೆ. ಅಲ್ಲದೆ, ಸೌಂದರ್ಯ ಪ್ರಿಯರಿಗಂತು ಉತ್ತಮ ಸಹಪಾಟಿಯಾಗಿರುವುದರ ಜೊತೆಗೆ ಹಲವಾರು ಕಾಯಿಲೆಗಳ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಆದರೆ, ಇದು ಗಿಡ ಮೂಲಿಕೆಯಿಂದ ಕೂಡಿರುವುದಕ್ಕಾಗಿ ಯಾವ ಸಮಯದಲ್ಲಿ, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೆಂದು ತಿಳಿದುಕೊಂಡು ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮವಾದ ಔಷಧಿಯಾಗಿದೆ.
ಹಲ್ಲುಗಳು, ಒಸಡನ್ನು ಆರೋಗ್ಯವಾಗಿಡಲು ಬಯಸಿದರೆ ಈ 5 ಟಿಪ್ಸ್ ಫಾಲೋ ಮಾಡಿ…