ಗ್ರೀನ್​ಕಾರ್ಡ್ ಶಾಶ್ವತವಲ್ಲ; ಕೋಟ್ಯಂತರ ವಲಸಿಗರಿಗೆ ಅಮೆರಿಕ ಶಾಕ್

America GreenCard

ನವದೆಹಲಿ: ಅಮೆರಿಕ ಪೌರತ್ವ ವಿಚಾರ ಸಂಬಂಧ ಭಾರತೀಯರೂ ಸೇರಿದಂತೆ ಅಲ್ಲಿನ ಕೋಟ್ಯಂತರ ವಲಸಿಗರಿಗೆ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೊಸ ಶಾಕ್ ನೀಡಿದ್ದಾರೆ. ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಕ್ಕು ಹೊಂದಿಲ್ಲ, ಗ್ರೀನ್ ಕಾರ್ಡ್ ಶಾಶ್ವತವಲ್ಲ ಎಂದು ಘೋಷಿಸಿದ್ದಾರೆ. ಅಮೆರಿಕ ಪೌರತ್ವ ಪಡೆಯಲು ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಗೋಲ್ಡ್ ಕಾರ್ಡ್ ಪರಿಚಯಿಸಿದ ಬೆನ್ನಲ್ಲೇ ವ್ಯಾನ್ಸ್ ನೀಡಿರುವ ಈ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅಮೆರಿಕದ ಫಾಕ್ಸ್ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ವ್ಯಾನ್ಸ್ ಗ್ರೀನ್ ಕಾರ್ಡ್ ಕುರಿತು ಮಾತನಾಡಿದ್ದಾರೆ. ‘ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಕ್ಕು ಹೊಂದಿಲ್ಲ. ಇದು ಮೂಲಭೂತವಾದ ವಾಕ್ ಸ್ವಾತಂತ್ರ್ಯದ ವಿಷಯವಲ್ಲ, ಇದು ನನಗೆ ರಾಷ್ಟ್ರೀಯ ಭದ್ರತೆಯ ವಿಷಯ. ಅಮೆರಿಕದ ರಾಷ್ಟ್ರೀಯ ಪರಿವಾರವನ್ನು ಯಾರು ಸೇರಬೇಕು ಎಂಬುದನ್ನು ಅಮೆರಿಕದ ನಾಗರಿಕರು ನಿರ್ಧರಿಸುವುದೇ ಅತೀ ಮುಖ್ಯ. ವಿದೇಶಾಂಗ ಕಾರ್ಯದರ್ಶಿ, ಅಧ್ಯಕ್ಷರು ಯಾವುದೇ ವ್ಯಕ್ತಿ ಅಮೆರಿಕದಲ್ಲಿ ಇರಬಾರದು ಎಂದು ನಿರ್ಧರಿಸಿದಲ್ಲಿ ಅವರು ಅಮೆರಿಕದಲ್ಲಿ ಉಳಿಯಲು ಯಾವುದೇ ಕಾನೂನುಬದ್ಧ ಹಕ್ಕು ಹೊಂದಿರುವುದಿಲ್ಲ’ ಎಂದು ಹೇಳಿದರು.

ಖಲೀಲ್ ಪ್ರಕರಣ ಕಾರಣ: ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ್ದ ಪದವಿ ವಿದ್ಯಾರ್ಥಿ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಮಹಮೂದ್ ಖಲೀಲ್ ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಬಂಧನದ ಬಳಿಕ ಟ್ರಂಪ್ ಆಡಳಿತ ಖಲೀಲ್​ನ ಗ್ರೀನ್ ಕಾರ್ಡ್ ಹಿಂಪಡೆದಿತ್ತು. ಖಲೀಲ್ ಬಂಧನದ ಹಿನ್ನೆಲೆ ವಾಕ್​ಸ್ವಾತಂತ್ರ್ಯ ದಮನಿಸ ಲಾಗುತ್ತಿದೆ ಎಂಬ ಟೀಕೆ ಕೇಳಿ ಬರುತ್ತಿದೆ. ಇದೇ ಹೊತ್ತಲ್ಲಿ ವ್ಯಾನ್ಸ್ ಈ ಹೇಳಿಕೆ ನೀಡಿದ್ದಾರೆ.

ಏನಿದು ಗೋಲ್ಡ್ ಕಾರ್ಡ್?: ಶ್ರೀಮಂತ ವಲಸಿಗರಿಗೆ ಅಮೆರಿಕ ಪೌರತ್ವವನ್ನು ಸುಲಭವಾಗಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಗೋಲ್ಡ್ ಕಾರ್ಡ್ ಯೋಜನೆ ಘೋಷಿಸಿದ್ದರು. ಈ ಯೋಜನೆಯಲ್ಲಿ 43.5 ಕೋಟಿ ರೂ. ನೀಡಿ ಗೋಲ್ಡ್ ಕಾರ್ಡ್ ಖರೀದಿಸಿದವರಿಗೆ ಗ್ರೀನ್ ಕಾರ್ಡ್ ಸ್ಟೇಟಸ್ ನೀಡಲಾಗುವುದು. 1 ಕೋಟಿ ಗೋಲ್ಡ್ ಕಾರ್ಡ್ ಮಾಡುವ ಗುರಿ ಇದೆ. ಗೋಲ್ಡ್ ಕಾರ್ಡ್ ಪ್ರಸ್ತುತ ಇರುವ ಇಬಿ-5 ವಲಸಿಗ ಹೂಡಿಕೆದಾರರ ವೀಸಾ ಯೋಜನೆಯ ಬದಲು ಜಾರಿಗೆ ಬರಲಿದೆ. ಅಮೆರಿಕದ ಕಂಪನಿಗಳು ವಿದೇಶಿ ಪ್ರತಿಭೆ ನೇಮಿಸಿಕೊಳ್ಳಲು ಯೋಜನೆ ಬಳಸಿಕೊಳ್ಳಬಹುದು, ಹೊಸ ಯೋಜನೆಯಿಂದ ಅಮೆರಿಕಕ್ಕೆ ಹೆಚ್ಚಿನ ಹಣ ಹರಿದು ಬರಲಿದ್ದು, ಸಾಲ ತೀರಿಸಲು ಅನು ಕೂಲ ಎಂದು ಟ್ರಂಪ್ ತಿಳಿಸಿದ್ದರು.

ಗಡಿಪಾರು ಸಾಧ್ಯವೇ?: ಗ್ರೀನ್ ಕಾರ್ಡ್ ದಾರು ಅಮೆರಿಕ ನಾಗರಿಕರಂತೆಯೇ ಕೆಲವು ಹಕ್ಕು ಹೊಂದಿರುತ್ತಾರೆ. ಗಂಭೀರವಾದ ಅಪರಾಧ ಪ್ರಕರಣಗಳು ನಡೆದಾಗ ಅಥವಾ ಇತರ ಉಲ್ಲಂಘನೆಗಳಲ್ಲಿ ಗ್ರೀನ್ ಕಾರ್ಡ್ ರದ್ದುಪಡಿಸಬಹುದು. ಆದರೆ ಅವರಿಗೆ ಕಾನೂನಿನ ರಕ್ಷಣೆ ಇರಲಿದ್ದು, ಅಪರಾಧ, ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಗೂ ಅಮೆರಿಕದಿಂದ ದೀರ್ಘಕಾಲದವರೆಗೆ ಹೊರಗೆ ನೆಲೆಸಿದ್ದರೆ ಗ್ರೀನ್ ಕಾರ್ಡ್ ರದ್ದುಪಡಿಸಬಹುದು ಮತ್ತು ಗಡಿಪಾರು ಮಾಡಬಹುದಾಗಿದೆ.

ವಿದ್ಯಾರ್ಥಿಗಳಿಗೆ ಕಷ್ಟ ಕಷ್ಟ : ಎಫ್-1, ಎಂ-1 ಮತ್ತು ಜೆ-1 ವಿದ್ಯಾರ್ಥಿ ವೀಸಾ ದಲ್ಲಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವರಿಗೆ ಹೆಚ್ಚು ಕಠಿಣ ನಿಯಮ ಅನ್ವಯಿಸಲಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿದರೆ, ವೀಸಾ ಅವಧಿ ಮುಗಿದ ಮೇಲೂ ನೆಲೆಸಿದ್ದರೆ, ಅಪರಾಧಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ಗಡಿಪಾರು ಮಾಡಬಹುದು. ವಿದ್ಯಾರ್ಥಿಗಳು ನಿಯಮಿತವಾಗಿ ಕಾಲೇಜಿಗೆ ಹಾಜರಾಗಬೇಕು, ಅನಧಿಕೃತವಾಗಿ ಕೆಲಸ ಮಾಡಬಾರದು ಎಂಬ ನಿಯಮ ಇವೆ. ಅವರು ತಾತ್ಕಾಲಿಕ ವಾಸ್ತವ್ಯದ ಅವಕಾಶ ಮಾತ್ರ ಪಡೆದಿರುವುದರಿಂದ ಅಲ್ಪ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿದರೂ ವೀಸಾ ರದ್ದಾಗುವ ಸಾಧ್ಯತೆ ಇರುತ್ತದೆ.

ಅಮೆರಿಕದಲ್ಲಿ ಭಾರತೀಯರು: 2022ರ ಅಮೆರಿಕ ಜನಗಣತಿ ವರದಿ ಪ್ರಕಾರ ಅಮೆರಿಕದಲ್ಲಿ 48 ಲಕ್ಷ ಭಾರತೀಯ ಮೂಲದವರಿದ್ದಾರೆ. ಅವರಲ್ಲಿ ಶೇ.34 ಅಥವಾ 16 ಮಂದಿ ಅಮೆರಿಕದಲ್ಲೇ ಜನಿಸಿದ್ದು, ಹುಟ್ಟಿನಿಂದಲೇ ಅಮೆರಿಕ ಪೌರತ್ವ ಪಡೆದಿದ್ದಾರೆ. ಇನ್ನು 10 ಲಕ್ಷ ಭಾರತೀಯರು ಅಮೆರಿಕದ ಗ್ರೀನ್​ಕಾರ್ಡ್​ಗಾಗಿ ಕಾದಿದ್ದಾರೆ.

ವಲಸಿಗರು ಗಡಿಪಾರು: ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಭಾರತೀಯರು ಸೇರಿದಂತೆ ಅಕ್ರಮವಾಗಿ ನೆಲೆಸಿದ್ದ ಸಾವಿರಾರು ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ.

ಏನಿದು ಗ್ರೀನ್ ಕಾರ್ಡ್?

  • ಇದೊಂದು ಶಾಶ್ವತ ನಿವಾಸಿ ಕಾರ್ಡ್
  • ಅನಿರ್ದಿಷ್ಟಾವಧಿ ವಾಸಕ್ಕೆ ಅವಕಾಶ
  • ಅಮೆರಿಕದೆಲ್ಲೆಡೆ ಕೆಲಸಕ್ಕೆ ಸಮ್ಮತಿ
  • ಆದರೆ ಅಮೆರಿಕದ ಪೌರತ್ವ ಸಿಗಲ್ಲ
  • 10 ವರ್ಷಕ್ಕೊಮ್ಮೆ ನವೀಕರಿಸಬೇಕು
  • ಷರತ್ತುಬದ್ಧ ಗ್ರೀನ್​ಕಾರ್ಡ್​ಗಳೂ ಇವೆ
  • 2 ವರ್ಷಕ್ಕೊಮ್ಮೆ ನವೀಕರಿಸಬೇಕು
  • ಪೌರತ್ವಕ್ಕಾಗಿ ಅರ್ಜಿ ಹಾಕಬಹುದು
  • ಕೆಲವೊಂದು ಅನುಕೂಲ ಸಿಗುತ್ತದೆ

ಪೌರತ್ವ ಇದ್ದವರಿಗೆ?

  • ವಿಶೇಷವಾಗಿ ಮತದಾನದ ಹಕ್ಕಿದೆ
  • ಹೆಚ್ಚಿನ ಭದ್ರತೆ ಸೌಲಭ್ಯ ಲಭಿಸಲಿದೆ
  • ಪೌರತ್ವವನ್ನು ನವೀಕರಿಸಬೇಕಾಗಿಲ್ಲ

WTC ಫೈನಲ್‌ನಲ್ಲಿ ಭಾರತದ ಅನುಪಸ್ಥಿತಿ; ದೊಡ್ಡ ಮೊತ್ತದ ನಷ್ಟದ ಸುಳಿಗೆ ಸಿಲುಕಿದ ಆಯೋಜಕರು

6 ತಿಂಗಳ ಮಗುವಿನೊಂದಿಗೆ ವಿಮಾನ​ ಪ್ರಯಾಣ; ಸಹಪ್ರಯಾಣಿಕರಿಗೆ ದಂಪತಿ ಕೊಟ್ಟ ಪತ್ರ ವೈರಲ್​​

Share This Article

ಮಾವಿನಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ ಗೊತ್ತಾ? mango

mango: ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮಾವು ಕೂಡ ಒಂದು.   ಅನೇಕರು ಮಾವಿನಹಣ್ಣು ತಿಂದ ನಂತರ ನೀರು…

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

Stress : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡ ಅನುಭವಿಸೋದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ…

ಬೇಸಿಗೆಯಲ್ಲಿ ‘ಎಸಿ’ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಾ; ಅದನ್ನು ಕಡಿಮೆ ಮಾಡಲು ಇಲ್ಲಿದೆ ನೋಡಿ ಪ್ಲಾನ್ | AC

AC | ಮಾರ್ಚ್​ನಿಂದ ಹಿಡಿದು ಮೇ ಹಾಗೂ ಜೂನ್​ ತಿಂಗಳಲ್ಲಿ ಬೇಸಿಗೆಯ ತಾಪಮಾನ ಹೆಚ್ಚಾಗಿರುತ್ತದೆ. ಈ…