More

    ನಾಣಿಕಟ್ಟಾದಲ್ಲಿ ಹಸಿ ಅಡಕೆ ವ್ಯಾಪಾರ ಆರಂಭ

    ಸಿದ್ದಾಪುರ: ಸಂಘದ ಸದಸ್ಯರ ಹಿತದೃಷ್ಟಿಯಿಂದ ತಾಲೂಕಿನಲ್ಲಿಯೇ ಪ್ರಥಮವಾಗಿ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಾಣಿಕಟ್ಟಾ ಈ ವರ್ಷದಿಂದ ಹಸಿ ಅಡಕೆ ವ್ಯಾಪಾರ ಪ್ರಾರಂಭಿಸಿದೆ.

    ಪ್ರತಿ ಗುರುವಾರ ಹಸಿ ಅಡಕೆ ಟೆಂಡರ್ ನಡೆಯುತ್ತಿದ್ದು ಸಿದ್ದಾಪುರ-ಶಿರಸಿ ತಾಲೂಕಿನ ವಿವಿಧ ಕಡೆಗಳಿಂದ ವ್ಯಾಪಾರಸ್ಥರು, ಅಡಕೆ ಬೆಳೆಗಾರರು ಬಂದು ಟೆಂಡರ್ ಮೂಲಕ ಅಡಕೆ ಖರೀದಿಸುತ್ತಿದ್ದಾರೆ. ಸಂಘದ ಸದಸ್ಯರು ಮಾತ್ರವಲ್ಲದೆ ತಾಲೂಕಿನ ವಿವಿಧ ಕಡೆಗಳಿಂದ ಬೆಳೆಗಾರರು ಅಡಕೆಯನ್ನು ಮಾರಾಟಕ್ಕೆ ತರುತ್ತಿದ್ದಾರೆ.

    ಅಡಕೆ ಧಾರಣೆ: ಹಸಿ ಅಡಕೆ ಕ್ವಿಂಟಾಲ್​ಗೆ 4,421 ರಿಂದ 4,459ರೂ. ಹಾಗೂ ಹಸಿ ಗೋಟು 4,519 ರಿಂದ 4,559ರೂ.ವರೆಗೆ ಗುರುವಾರ ಧಾರಣೆ ಆಗಿದೆ.

    ಸಂಘದ ಸದಸ್ಯರು ಅಡಕೆ ಮಾರಾಟ ಮಾಡಿದ ತಕ್ಷಣ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಆದರೆ, ಸಂಘದ ಸದಸ್ಯರಲ್ಲದೇ ಬೇರೆ ಊರಿನಿಂದ ಅಡಕೆ ತಂದು ಮಾರಾಟ ಮಾಡಿದಲ್ಲಿ ಅವರ ಬ್ಯಾಂಕ್, ಟಿಎಸ್​ಎಸ್ ಅಥವಾ ಟಿಎಂಎಸ್ ಖಾತೆಗೆ ಹಣವನ್ನು ತಕ್ಷಣ ಜಮಾ ಮಾಡಲಾಗುತ್ತಿದೆ.

    ಕೂಲಿಕಾರರ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಹೀಗಾಗಿ ಮುಂದಿನ ದಿನದಲ್ಲಿ ಸಂಘದ ಸದಸ್ಯರು ಬಯಸಿದಲ್ಲಿ ಅವರ ಕೊನೆ ಕೊಯ್ಲನ್ನು ಸಂಘದಿಂದಲೇ ಮಾಡುವ ಹಾಗೂ ಅಡಕೆ ಸಂಸ್ಕರಣೆ ಮಾಡುವ ಉದ್ದೇಶ ಹೊಂದಲಾಗಿದೆ. | ಎನ್.ಬಿ. ಹೆಗಡೆ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts