ನಾಣಿಕಟ್ಟಾದಲ್ಲಿ ಹಸಿ ಅಡಕೆ ವ್ಯಾಪಾರ ಆರಂಭ

blank

ಸಿದ್ದಾಪುರ: ಸಂಘದ ಸದಸ್ಯರ ಹಿತದೃಷ್ಟಿಯಿಂದ ತಾಲೂಕಿನಲ್ಲಿಯೇ ಪ್ರಥಮವಾಗಿ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಾಣಿಕಟ್ಟಾ ಈ ವರ್ಷದಿಂದ ಹಸಿ ಅಡಕೆ ವ್ಯಾಪಾರ ಪ್ರಾರಂಭಿಸಿದೆ.

blank

ಪ್ರತಿ ಗುರುವಾರ ಹಸಿ ಅಡಕೆ ಟೆಂಡರ್ ನಡೆಯುತ್ತಿದ್ದು ಸಿದ್ದಾಪುರ-ಶಿರಸಿ ತಾಲೂಕಿನ ವಿವಿಧ ಕಡೆಗಳಿಂದ ವ್ಯಾಪಾರಸ್ಥರು, ಅಡಕೆ ಬೆಳೆಗಾರರು ಬಂದು ಟೆಂಡರ್ ಮೂಲಕ ಅಡಕೆ ಖರೀದಿಸುತ್ತಿದ್ದಾರೆ. ಸಂಘದ ಸದಸ್ಯರು ಮಾತ್ರವಲ್ಲದೆ ತಾಲೂಕಿನ ವಿವಿಧ ಕಡೆಗಳಿಂದ ಬೆಳೆಗಾರರು ಅಡಕೆಯನ್ನು ಮಾರಾಟಕ್ಕೆ ತರುತ್ತಿದ್ದಾರೆ.

ಅಡಕೆ ಧಾರಣೆ: ಹಸಿ ಅಡಕೆ ಕ್ವಿಂಟಾಲ್​ಗೆ 4,421 ರಿಂದ 4,459ರೂ. ಹಾಗೂ ಹಸಿ ಗೋಟು 4,519 ರಿಂದ 4,559ರೂ.ವರೆಗೆ ಗುರುವಾರ ಧಾರಣೆ ಆಗಿದೆ.

ಸಂಘದ ಸದಸ್ಯರು ಅಡಕೆ ಮಾರಾಟ ಮಾಡಿದ ತಕ್ಷಣ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಆದರೆ, ಸಂಘದ ಸದಸ್ಯರಲ್ಲದೇ ಬೇರೆ ಊರಿನಿಂದ ಅಡಕೆ ತಂದು ಮಾರಾಟ ಮಾಡಿದಲ್ಲಿ ಅವರ ಬ್ಯಾಂಕ್, ಟಿಎಸ್​ಎಸ್ ಅಥವಾ ಟಿಎಂಎಸ್ ಖಾತೆಗೆ ಹಣವನ್ನು ತಕ್ಷಣ ಜಮಾ ಮಾಡಲಾಗುತ್ತಿದೆ.

blank

ಕೂಲಿಕಾರರ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಹೀಗಾಗಿ ಮುಂದಿನ ದಿನದಲ್ಲಿ ಸಂಘದ ಸದಸ್ಯರು ಬಯಸಿದಲ್ಲಿ ಅವರ ಕೊನೆ ಕೊಯ್ಲನ್ನು ಸಂಘದಿಂದಲೇ ಮಾಡುವ ಹಾಗೂ ಅಡಕೆ ಸಂಸ್ಕರಣೆ ಮಾಡುವ ಉದ್ದೇಶ ಹೊಂದಲಾಗಿದೆ. | ಎನ್.ಬಿ. ಹೆಗಡೆ ಸಂಘದ ಅಧ್ಯಕ್ಷ

Share This Article

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳ ಹೀಗಿವೆ..; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಹೃದಯಾಘಾತದ ಅಪಾಯವು ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರಲ್ಲೂ ಹೆಚ್ಚಿನ ಪ್ರಕರಣಗಳಿವೆ. ಈ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಹೆಚ್ಚುತ್ತಿರುವ…

ದಾಲ್ಚಿನ್ನಿ ಪುರುಷರಿಗೆ ಎಷ್ಟು ಪ್ರಯೋಜನಕಾರಿ ಗೊತ್ತಾ? cinnamon benefits

cinnamon benefits: ದಾಲ್ಚಿನ್ನಿ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ದಾಲ್ಚಿನ್ನಿ ಸೇವನೆಯು ವಿಶೇಷವಾಗಿ ಪುರುಷರಿಗೆ ಒಳ್ಳೆಯದು…

ಈ ರಾಶಿಯ ಜನರು ಯಾರಿಗೋಸ್ಕರನೂ ತಮ್ಮ ಈ ಗುಣವನ್ನು ಎಂದಿಗೂ ಬಿಟ್ಟುಕೊಡಲ್ಲ! ನಿಮ್ಮ ಬಗ್ಗೆ ಹೇಗೆ? Zodiac Sign

Zodiac Sign : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…